ಮಾಜಿ ಶಾಸಕ ಜೆ. ನರಸಿಂಹ ಸ್ವಾಮಿ ನಿಧನ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೇಂದ್ರದ ಮಾಜಿ ಸಚಿವ ದಿ. ಜಾಲಪ್ಪ ನವರ ಪುತ್ರ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜೆ. ನರಸಿಂಹ ಸ್ವಾಮಿ ಭಾನುವಾರ ನಿಧನರಾಗಿದ್ದಾರೆ.

78ವರ್ಷ ವಯಸ್ಸಿನ ಜೆ.ನರಸಿಂಹ ಸ್ವಾಮಿ ರವರು ತೀವ್ರ ಅನಾರೋಗ್ಯದಿಂದಾಗಿ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಬಹು ಅಂಗಾಂಗ ವೈಫಲ್ಯದಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಭಾನುವಾರ ಮದ್ಯಾಹ್ನ ನರಸಿಂಹ ಸ್ವಾಮಿರವರ ಪಾರ್ಥೀವ ಶರೀರವನ್ನು ದೊಡ್ಡಬಳ್ಳಾಪುರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾರ್ವಜನಿಕರಿಗೆ ಅಂತಿಮ ದರ್ಶನ ಕ್ಕೆ ಅವಕಾಶ ಕಲ್ಪಿಸಲಾಗಿತ್ತು.ನಂತರ ಸಂಜೆ ಅವರ ಸ್ವಗ್ರಾಮ ತೂಬಗೆರೆಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಒಬ್ಬ ಪುತ್ರ ಹಾಗು ಪುತ್ರಿಯನ್ನು ಅಗಲಿರುವ ನರಸಿಂಹಸ್ವಾಮಿ ರವರು ಜನತಾ ಪರಿವಾರದ ಮೂಲಕ ರಾಜಕಾರಣಕ್ಕೆ ಬಂದರು.ತೂಬಗೆರೆ ಗ್ರಾಮ ಪಂಚಾಯತಿ ಅದ್ಯಕ್ಷ, ಬೆಂಗಳೂರು ಜಿಲ್ಲಾ ಪಂಚಾಯತ್ ಅದ್ಯಕ್ಷ,ಪಿ. ಎಲ್.ಡಿ.ಬ್ಯಾಂಕ್ ಅದ್ಯಕ್ಷ,ಶಾಸಕರಾಗಿ,ಕೊಳಚೆ ನಿರ್ಮೂಲನಾ ಮಂಡಳಿ ಅದ್ಯಕ್ಷರಾಗಿ ಹೀಗೆ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ನರಸಿಂಹ ಸ್ವಾಮಿರವರು ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾಗ ಆಪರೇಷನ್ ಕಮಲಕ್ಕೆ ಒಳಗಾಗಿ ಕಾಂಗ್ರೆಸ್ ತೊರೆದು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿ.ಜೆ.ಪಿ.ಗೆ ಸೇರ್ಪಡೆಗೊಂಡರು.

ಆಗ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ತಮ್ಮ ರಾಜಕೀಯ ಗುರು ಆರ್.ಜಿ.ವೆಂಕಟಾಚಲಯ್ಯನವರ ವಿರುದ್ದ ಜಯಗಳಿಸಿ ಬಿ.ಜೆ.ಪಿ.ಶಾಸಕರಾಗಿ ಕೊಳಚೆ ನಿರ್ಮೂಲನೆ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ನರಸಿಂಹ ಸ್ವಾಮಿರವರು 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ.ಅಭ್ಯರ್ಥಿಯಾಗಿ ಸ್ಪರ್ದಿಸಿ ಪರಾಭವಗೊಂಡರು.ಪುನಃ2018 ರ ವಿಧಾನಸಭಾ ಚುನಾವಣೆಗೆ ಬಿ.ಜೆ.ಪಿ.ಅಭ್ಯರ್ಥಿಯಾಗಿ ಸ್ಪರ್ದಿಸಿ ಕಡೇ ಗಳಿಗೆಯಲ್ಲಿ ಚುನಾವಣಾ ಕಣದಿಂದ ಹಿಂದೆ  ಸರಿದು ಪಕ್ಷದ ಹಾಗು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಸುಳ್ಳಲ್ಲ.

ತಂದೆ ಆರ್ ಎಲ್ ಜಾಲಪ್ಪನವರ ಪ್ರಭಾವದ ಹೊರತಾಗಿ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸನ್ನು ಬೆಳೆಸಿಕೊಂಡಿದ್ದು ಸುಳ್ಳಲ್ಲ ಆಶ್ಚರ್ಯ ವೆಂದರೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮತದಾರರು ನರಸಿಂಹಸ್ವಾಮಿರವರು ಕ್ಷೇತ್ರಕ್ಕೆ ಸರಿಯಾಗಿ ಅನುದಾನ ಸಿಗದೆ ಕ್ಷೇತ್ರಾಭಿವೃದ್ದಿ ಆಗದ ಸಂದರ್ಭದಲ್ಲಿ ಶಾಸಕರಾಗಿ ಗೆಲ್ಲಿಸಿದ್ದರು.ಆದರೆ ಕ್ಷೇತ್ರಕ್ಕೆ ಅನುದಾನ ತಂದು ಕ್ಷೇತ್ರಾಭಿವೃದ್ದಿ ಮಾಡಿದಾಗ ನರಸಿಂಹಸ್ವಾಮಿ ರವರನ್ನು ಸೋಲಿಸಿದ್ದು ಅಚ್ಚರಿಯೆಂದೇ ಹೇಳಬಹುದು.ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಸಮಚಿತ್ತದ ರಾಜಕಾರಣಿಯಾಗಿ ಕ್ಷೇತ್ರದ ಜನರ ನಡುವೆ ಪಕ್ಷಾತೀತವಾಗಿ ಕೆಲಸಮಾಡಿ ಅಜಾತ ಶತೃ ಎನಿಸಿಕೊಂಡಿದ್ದು ನರಸಿಂಹಸ್ವಾಮಿ ಅವರ ಹೆಗ್ಗಳಿಕೆಯೆಂದೇ ಹೇಳಬಹುದು.

ನರಸಿಂಹಸ್ವಾಮಿರವರ ನಿಧನಕ್ಕೆ ಶಾಸಕ ಧೀರಜ್ ಮುನಿರಾಜು,ಮಾಜಿ ಶಾಸಕ ವೆಂಕಟರಮಣಯ್ಯ, ಜೆ.ಡಿ.ಎಸ್ ಮುಖಂಡರಾದ ಮುನೇಗೌಡ,ಹರೀಶ್ ಗೌಡ,ಗಂಟಿಗಾನಹಳ್ಳಿ ವೆಂಕಟೇಶ್ ಬಾಬು,ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ತಳಗವಾರ ಲಕ್ಷ್ಮೀ ನಾರಾಯಣ, ಯೋಜನಾ ಪ್ರಾದಿಕಾರದ ಅದ್ಯಕ್ಷ ಚುಂಚೇಗೌಡ,ತಾಲ್ಲೂಕು ಪಂಚಾಯತಿ ಮಾಜಿ ಅದ್ಯಕ್ಷ ಕಂಟನಕುಂಟೆ ಕೃಷ್ಣಮೂರ್ತಿ,ಲಾವಣ್ಯ ನಾಗರಾಜ್,ಬಮೂಲ್ ನಿರ್ದೇಶಕ ಬಿ.ಸಿ.ಆನಂದ್,ನಗರಸಭಾ ಉಪಾಧ್ಯಕ್ಷ ಮಲ್ಲೇಶ್,ನಗರಸಭಾ ಸದಸ್ಯರಾದ,ತ.ನ.ಪ್ರಭುದೇವ್,ಶಿವಶಂಕರ್,ಶಿವರಾಜ್,ಬಂತಿ ವೆಂಕಟೇಶ್, ಪದ್ಮನಾಭ್,ರಾಜಘಟ್ಟ ರವಿ,ಬಿ ಎಸ್ ಚಂದ್ರಶೇಖರ್,ಕ.ರ.ವೆ ಜಿಲ್ಲಾದ್ಯಕ್ಷ ಪುರುಷೋತ್ತಮ ಗೌಡ,ಶಾಂತಿನಗರ ಪ್ರವೀಣ್ ಸೇರಿದಂತೆ ತಾಲ್ಲೊಕಿನ ಹಲವಾರು ಮುಖಂಡರು ಹಾಗು ನರಸಿಂಹಸ್ವಾಮಿ ರವರ ಅಪಾರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

 

- Advertisement -  - Advertisement - 
Share This Article
error: Content is protected !!
";