ಗ್ರಾಮೀಣರ ಕಲಾವಂತಿಕೆ ಪರಿಚಯಿಸಲು ಸಂಗೀತ ಸ್ಪರ್ಧೆ ಸಹಕಾರಿ: ಮಾಜಿ ಶಾಸಕ ರವೀಂದ್ರನಾಥ್

News Desk

ಚಂದ್ರವಳ್ಳಿ ನ್ಯೂಸ್, ಕಾನ ಹೊಸಹಳ್ಳಿ:
ಗ್ರಾಮೀಣ ಭಾಗದ ಜನರ ಕಲಾವಂತಿಕೆ ಸೊಗಡನ್ನು ನಾಡಿಗೆ ಪರಿಚಯಿಸುವಲ್ಲಿ ಸಂಗೀತ ಸ್ಪರ್ಧೆ ಮಾಡುತ್ತವೆ ಎಂದು ಮಾಜಿ ಶಾಸಕ ಕೆ.ರವೀಂದ್ರನಾಥ್ ಬಾಬು ಹೇಳಿದರು.

ತಾಲೂಕಿನ ಚಿಕ್ಕ ಜೋಗಿಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಹಾಗೂ ಗುರುವಾರ 2 ದಿನಗಳ ಕಾಲ ಹಮ್ಮಿಕೊಂಡಿದ್ದ ದಿ ಶ್ರೀ ವೆಂಕಟಸ್ವಾಮಿ ಇವರ ಸವಿನೆನಪಿಗಾಗಿ ಸಪ್ತಸ್ವರ ಕಲಾ ಟ್ರಸ್ಟ್ ವಿಜಯನಗರ ಇವರ ವತಿಯಿಂದ ಸಪ್ತಸ್ವರ ಕೋಗಿಲೆ ಗಾಯನ ಸ್ಪರ್ಧೆ ಸಂಚಿಕೆ-1 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ಜನರಿಗೆ ಸಂಗೀತ ಮತ್ತು ನಾಟಕಗಳು ಮನರಂಜನೆಯ ಸಾಧನಗಳು. ನಾಟಕ, ಸಂಗೀತಗಳ ಮೂಲಕ ಬದುಕಿನ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು.

- Advertisement - 

ದೂರದರ್ಶನ, ಮೊಬೈಲ್‌ಗಳ ಪ್ರವೇಶವಾದ ನಂತರ ಗ್ರಾಮೀಣ ಕಲೆಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ತಂತ್ರಜ್ಞಾನದ ಬಳಕೆ ಅಗತ್ಯವಾದರೂ, ಅದು ನಮ್ಮ ಸಾಂಸ್ಕೃತಿಕ ಬದುಕನ್ನು ಕಿತ್ತುಕೊಳ್ಳಬಾರದು. ಒಬ್ಬ ಸಂಗೀತಕಾರ ಆಲಾಪಗಳಲ್ಲಿ ಸಂಗೀತದ ಸೌಂದರ್ಯ ಕಾಣಬಯಸುತ್ತಾನೆ. ಸಂಗೀತ ಸ್ತ್ರೀ ಸೌಂದರ್ಯಕ್ಕಿಂತಲೂ ಶ್ರೇಷ್ಠವಾದದ್ದಾಗಿದೆ.

ಆಭರಣಗಳಿಂದ ಅಲಂಕರಿಸಿಕೊಂಡಾಗ ಸ್ತ್ರೀ ಸೌಂದರ್ಯ ದ್ವಿಗುಣಗೊಳ್ಳುತ್ತದೆ. ಆದರೆ ಸಂಗೀತದ ಸೌಂದರ್ಯ ಹಾಗಲ್ಲ. ಸಂಗೀತವನ್ನು ಆಳವಾಗಿ ಬಲ್ಲ ವ್ಯಕ್ತಿ ಮಾತ್ರ ಸಂಗೀತದ ಆಂತರಿಕ ಸೌಂದರ್ಯವನ್ನು ಕಂಡುಕೊಳ್ಳಲು ಸಾಧ್ಯ. ದೊರೈ ಭಗವಾನ್, ಜಿ.ಟಿ ವೆಂಕಟೇಶ್ವರ್, ನಾಗೇಂದ್ರ, ಡಾ.ರಾಜಕುಮಾರ್ ಹಾಗೂ ಅವರ ತಂದೆಯವರು ಹಾಗೂ ಗುಬ್ಬಿ ವೀರಣ್ಣ, ಹಂಸಲೇಖ ಅವರು ನಾನು ಶಾಸಕನಾಗಿದ್ದಾಗ ನಮಗೆ ಅವರು ತುಂಬಾ ಪರಿಚಯಸ್ತರಾಗಿದ್ದರು.

- Advertisement - 

ಸಾಹಿತ್ಯ, ಸಂಗೀತ ಸಾಮಾಜಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಮೂಲಕ ಸಮಾಜ ತಿದ್ದುವ ಕಾರ‍್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೀತಾ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು
, ಟ್ರೋಫಿ, ಪ್ರಶಸ್ತಿ ಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕೂಡ್ಲಿಗಿ ಎಪಿಎಂಸಿ ಅಧ್ಯಕ್ಷ ಬೋಸಯ್ಯ ಕುರಿಹಟ್ಟಿ, ಗ್ರಾಮ ಪಂಚಾಯತಿ ಅಧ್ಯಕ್ಷ ಅಶೋಕ್ ನಾಯ್ಕ್, ಮಾಜಿ ತಾ.ಪಂ ಸದಸ್ಯ ಜಿ ಪಾಪನಾಯಕ, ಕಾಂಗ್ರೆಸ್ ಮುಖಂಡ ಮಂಜಣ್ಣ ಗುಂಡು ಮುಣುಗು, ವಾಲ್ಮೀಕಿ ಮುಖಂಡ ಕೃಷ್ಣ, ವಿಷ್ಣು ಸೇನೆ ಅಧ್ಯಕ್ಷ ಸಾಧಿಕ್, ಹೇಮೇಶ್ ಗೌಡ ಹಾಗೂ ಸಂಗೀತ ಗಾಯನ ಸ್ಪರ್ಧೆ ಆಯೋಜಕರಾದ ರಾಜು ಕುರಿಹಟ್ಟಿ, ನುಂಕೇಶ್ ಓಬಳಶೆಟ್ಟಿ ಹಳ್ಳಿ, ಯಲ್ಲಪ್ಪ ಸಕಲಾಪುರದ ಹಟ್ಟಿ, ಹನುಮಂತಪ್ಪ ಮಾಸ್ತರ್, ರಾಜಣ್ಣ ಮಾಕನಡಕು, ಗುರುಸ್ವಾಮಿ ಭೀಮಸಮುದ್ರ, ನೀಲಪ್ಪ ಬಿ, ತಿಪ್ಪೇಸ್ವಾಮಿ ಕೆ, ಪ್ರಿಯಾಂಕ ಕೆ ಕೊಟ್ಟೂರು, ಶಿವುಕುಮಾರ ಮಲ್ಲೂರಹಳ್ಳಿ ಸೇರಿದಂತೆ ಗ್ರಾ.ಪಂ ಸದಸ್ಯರು, ಮುಖಂಡರು, ಗಾಯನ ಸ್ಪರ್ಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Share This Article
error: Content is protected !!
";