ಮಾಜಿ ಪುರಸಭಾ ಅಧ್ಯಕ್ಷ ವಿ.ಹೆಚ್.ರಾಜು ಇನ್ನಿಲ್ಲ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಪುರಸಭೆಯ ಮಾಜಿ ಅಧ್ಯಕ್ಷರು, ಜೆಡಿಎಸ್ ಮುಖಂಡ ವಿ.ಹೆಚ್.ರಾಜು(68) ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯ ಕ್ರಿಯೆ ಗುರುವಾರ ಸಂಜೆ 4 ಗಂಟೆಗೆ ಹಿರಿಯೂರು ನಗರದ ಆರ್ಯ ವೈಶ್ಯ ರುದ್ರಭೂಮಿಯಲ್ಲಿ ನಡೆಯುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.