ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತದ ಪ್ರಬುದ್ಧ ಮತ್ತು ಸಂಯಮದ ಮಿಲಿಟರಿ ಕಾರ್ಯಾಚರಣೆ “ಆಪರೇಷನ್ ಸಿಂಧೂರ”ವನ್ನು ಶ್ಲಾಘಿಸಿ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇರೌಡರು ಮೆಚ್ಚುಗೆಯ ಪತ್ರ ಬರೆದಿದ್ದಾರೆಂದು ಜೆಡಿಎಸ್ ತಿಳಿಸಿದೆ.
ಭಯೋತ್ಪಾದನೆಯ “ಅಧರ್ಮದ” ವಿರುದ್ಧ ನಾವು ಈ ಧರ್ಮದ ಯುದ್ಧವನ್ನು ನಡೆಸುತ್ತಿರುವಾಗ ದೇವರು ನಿಮ್ಮೊಂದಿಗೆ ಹಾಗೂ ನಮ್ಮ ರಾಷ್ಟ್ರದೊಂದಿಗೆ ಇರಲಿ ಎಂದು ಗೌಡರು ಪ್ರಾರ್ಥಿಸಿದ್ದಾರೆ.
ಭಾರತವು ಶಾಂತಿಪ್ರಿಯ ದೇಶ. ಆದರೆ ಯಾರಾದರೂ ಅದನ್ನು ನಮ್ಮ ದೌರ್ಬಲ್ಯವೆಂದು ಭಾವಿಸಿದರೆ, ಅದಕ್ಕೆ ತಕ್ಕ ಉತ್ತರ ನೀಡಲು ನಾವು ಸಮರ್ಥರಾಗಿದ್ದೇವೆಂದು ಅವರಿಗೆ ಈಗ ತಿಳಿದಿದೆ.
ನಾವು ಒಂದು ರಾಷ್ಟ್ರವಾಗಿ ಒಗ್ಗಟ್ಟಿನಿಂದ ನಿಮ್ಮೊಂದಿಗೆ ಇರುತ್ತೇವೆ ಎಂದು ಬೆಂಬಲ ಸೂಚಿಸಿ, ಅಭಿನಂದನೆ ವ್ಯಕ್ತಪಡಿಸಿ ದೇವೇಗೌಡರು ಮೋದಿ ಅವರಿಗೆ ಪತ್ರ ಬರೆದಿದ್ದಾರೆ.