ಸುನಿತಾ ವಿಲಿಯಮ್ಸ್‌, ಬುಚ್ ಸೇರಿ ನಾಲ್ವರು ಸುರಕ್ಷಿತವಾಗಿ ಭೂಮಿಗೆ ವಾಪಸ್

News Desk

ಚಂದ್ರವಳ್ಳಿ ನ್ಯೂಸ್, ಕೇಪ್‌ಕಾರ್ನಿವಾಲ್‌(ಬೆಂಗಳೂರು):
ಬಾಹ್ಯಾಕಾಶದಲ್ಲಿ ಸಿಲುಕಿಕೊಂಡ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್‌ಮತ್ತು ಅವರ ಸಹೋದ್ಯೋಗಿ ಬುಚ್‌ವಿಲ್ಮೋರ್‌ ಸೇರಿದಂತೆ ನಾಲ್ವರು ಸುರಕ್ಷಿತವಾಗಿ ಭೂಮಿಗೆ ಮರಳಿದ್ದು ವಿಶ್ವಾದ್ಯಾಂತ ಭಾರೀ ಮೆಚ್ಚುಗೆ ಜೊತೆಗೆ ಅಭಿನಂದನೆಗಳ ಸುರಿಮಳೆಯಾಗಿದೆ.

ಭಾರತೀಯ ಮೂಲದ ಸುನಿತಾ ವಿಲಿಯಮ್ಸ್‌ಸೇರಿ ಒಟ್ಟು ನಾಲ್ವರನ್ನು ಹೊತ್ತ ಸ್ಪೇಸೆಕ್ಸ್‌ಕ್ರ್ಯೂ ಡ್ರ್ಯಾಗನ್‌ಗಗನನೌಕೆ ಸುರಕ್ಷಿತವಾಗಿ ಸಮುದ್ರಕ್ಕೆ ಬಂದು ತಲುಪಿದೆ. ಗಗನನೌಕೆಯಲ್ಲಿ ಅಳವಡಿಸಲಾಗಿರುವ ಪ್ಯಾರಾಶ್ಯೂಟ್‌ಗಳು ತೆರೆದುಕೊಂಡು ಗಗನನೌಕೆಯ ವೇಗವನ್ನು ತಗ್ಗಿಸುವ ಮೂಲಕ ಸುರಕ್ಷಿತವಾಗಿ ಅದು ಸಮುದ್ರಕ್ಕೆ ಬೀಳುವಂತೆ ಮಾಡಲಾಗಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಸುಮಾರು
9 ತಿಂಗಳಿನಿಂದ ಸಿಲುಕಿದ್ದ ಭಾರತೀಯ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್‌ಮತ್ತು ಸಹ ಗಗನಯಾತ್ರಿ ಬುಚ್‌ವಿಲ್ಮೋರ್‌ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.

ಭಾರತ ಸೇರಿದಂತೆ ಇಡೀ ಜಗತ್ತು ಸುನಿತಾ ವಿಲಿಯಮ್ಸ್ ಸಾಧನೆಯನ್ನು ಕೊಂಡಾಡಿದೆ. ಸುನಿತಾ ವಿಲಿಯಮ್ಸ್ ಜೊತೆಯಲ್ಲಿ ಭೂಮಿಗೆ ಬಂದಿಳಿದ ಸಹ ಗಗನಯಾತ್ರಿಗಳಾದ ನಿಕ್‌ಹೇಗ್‌ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್‌ಗೋರ್ಬುನೋವ್‌ಒಳಗೊಂಡಂತೆ ಒಟ್ಟು ನಾಲ್ವರನ್ನು ಹೊತ್ತ ಸ್ಪೇಸೆಕ್ಸ್‌ಕ್ರ್ಯೂ ಡ್ರ್ಯಾಗನ್‌ಗಗನನೌಕೆ ಸುರಕ್ಷಿತವಾಗಿ ಬುಧವಾರ ಬೆಳಗ್ಗೆ ಸರಿಯಾಗಿ 3.37ಕ್ಕೆ ಫ್ಲೋರಿಡಾ ಕರಾವಳಿಯಲ್ಲಿ ಇಳಿದಿದ್ದು, ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್‌ನೌಕೆ ನಾಲ್ವರನ್ನೂ ಭೂಮಿಗೆ ವಾಪಸ್‌ಕರೆತರುವಲ್ಲಿ ಯಶಸ್ವಿಯಾಗಿದೆ.

ಬಳಿಕ ಹಡಗಿನ ಸಹಾಯದಿಂದ ಗಗನಯಾತ್ರಿಗಳನ್ನು ನೌಕೆಯಿಂದ ಹೊರತರಲಾಗಿದ್ದು, ನಾಲ್ವರೂ ಗಗನಯಾತ್ರಿಗಳು ಆರೋಗ್ಯವಾಗಿದ್ದಾರೆ. ಇಸ್ರೋ ಸೇರಿದಂತೆ ವಿಶ್ವದ ಬಾಹ್ಯಾಕಾಶ ಸಂಸ್ಥೆಗಳಿಗೆ ಇದು ಕುತೂಹಲಕಾರಿ ಅಷ್ಟೇ ಅಲ್ಲ ಬಹುದೊಡ್ಡ ರಿಸ್ಕಿ ಜಾಬ್ ಯಾಗಿತ್ತು.
ಗಗನನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ
10.30ಕ್ಕೆ ನಿರ್ಗಮಿಸಿತ್ತು. ಸುಮಾರು 17 ಗಂಟೆಗಳ ಸುದೀರ್ಘ ಯಾನದ ಬಳಿಕ ಬುಧವಾರ ಮುಂಜಾನೆ 3.37ಕ್ಕೆ ಕ್ರ್ಯೂ ಡ್ರ್ಯಾಗನ್‌ಗಗನನೌಕೆ ಸಮುದ್ರಸ್ಪರ್ಶಕ್ಕೆ ಮಾಡಿದೆ. ಫ್ಲೋರಿಡಾದ ಬಳಿ, ಗಲ್ಫ್ ಕೊಲ್ಲಿಯಲ್ಲಿ ಸಮುದ್ರಕ್ಕೆ ಬಿದ್ದಿದೆ. ಇದಕ್ಕೂ ಮುನ್ನ ಗಗನನೌಕೆಯಲ್ಲಿ ಅಳವಡಿಸಲಾಗಿರುವ ಪ್ಯಾರಾಶ್ಯೂಟ್‌ಗಳು ತೆರೆದುಕೊಂಡು ಗಗನನೌಕೆಯ ವೇಗವನ್ನು ತಗ್ಗಿಸುವ ಮೂಲಕ ಸುರಕ್ಷಿತವಾಗಿ ಅದು ಸಮುದ್ರಕ್ಕೆ ಬೀಳುವಂತೆ ಮಾಡಲಾಗಿದೆ.

ಬಾಹ್ಯಾಕಾಶಕ್ಕೆ ತೆರಳಿದ್ದ ಸುನಿತಾ-
2024ರ ಜೂನ್‌
5 ರಂದು ಗಗನಯಾನಿ ಸುನಿತಾ ವಿಲಿಯಮ್ಸ ಮತ್ತು ವಿಲ್ಮೋರ್‌ಬೋಯಿಂಗ್‌ನ ಸ್ಟಾರ್‌ಲೈನರ್‌ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಆದರೆ ಪ್ರೊಪಲ್ಷನ್‌ಸಿಸ್ಟಮ್‌ಅಸಮರ್ಪಕ ಕಾರ್ಯನಿರ್ವಹಣೆ ಸೇರಿದಂತೆ ತಾಂತ್ರಿಕ ಸಮಸ್ಯೆಗಳಿಂದ ಅವರ ಸಕಾಲಿಕ ಮರಳುವಿಕೆ ವಿಳಂಬವಾಯಿತು. ಸೆಪ್ಟೆಂಬರ್‌2024ರಲ್ಲಿ ಸ್ಟಾರ್‌ಲೈನರ್‌ಅನ್ನು ಸುರಕ್ಷತೆ ದೃಷ್ಟಿಯಿಂದ ಸಿಬ್ಬಂದಿಯಿಲ್ಲದೆಯೇ ಭೂಮಿಗೆ ವಾಪಸ್‌ಕರೆಸಿಕೊಳ್ಳಲಾಯಿತು. ಕೊನೆಯ ಆಯ್ಕೆಯೆಂಬಂತೆ, ಐಎಸ್‌ಎಸ್‌ನಲ್ಲಿ ಸಿಲುಕಿದ ಸುನಿತಾ ಮತ್ತು ವಿಲ್ಮೋರ್‌ಅವರನ್ನು ಭೂಮಿಗೆ ಕರೆಸಿಕೊಳ್ಳಲು ಉದ್ಯಮಿ ಎಲಾನ್‌ಮಸ್ಕ್‌ಒಡೆತನದ ಸ್ಪೇಸೆಕ್ಸ್‌ಜತೆ ನಾಸಾ ಕೈಜೋಡಿಸಿತು.

ವಿಶ್ವದ ಬಹು ಗಟ್ಟಿ ಮಹಿಳೆ ಸುನಿತಾ ಅಂತರಿಕ್ಷದಲ್ಲಿ 286 ದಿನಗಳ ಕಾಲ ಉಳಿದಿದ್ದರು. ಗಗನನೌಕೆ ಒಂದು ಗಂಟೆಗೆ 27,359 ಕಿ.ಮೀ ಭೂಮಿಯತ್ತ ಪ್ರಯಾಣಿಸುವ ವೇಗ ಪಡೆದಿತ್ತು. ಸಮುದ್ರಕ್ಕೆ ಬೀಳುವ ಮುನ್ನ ಗಗನನೌಕೆಯ ವೇಗ 32 ಕಿ.ಮೀ. ಆಗಿತ್ತು. ಈ ಎಲ್ಲ ಪ್ರಕ್ರಿಯೆಗಳನ್ನು ನಾಸಾ ನೇರ ಪ್ರಸಾರ ಮಾಡಿದೆ.

ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಕೇವಲ ಒಂದು ವಾರದ ಮಟ್ಟಿಗೆ ಅಲ್ಲಿಗೆ ಪ್ರಯಾಣಿಸಿದ್ದರು. ಅವರಿದ್ದ ಬೋಯಿಂಗ್ ಸ್ಟಾರ್‌ಲೈನರ್ ನೌಕೆಯಲ್ಲಿ ದೋಷ ಕಂಡುಬಂದಿತ್ತು. ಇದರಿಂದಾಗಿ ಸುನೀತಾ ಮತ್ತವರ ಸಹ ಗಗನಯಾತ್ರಿಗಳು ನೌಕೆಯ ಮೂಲಕ ಹಿಂತಿರುಗುವುದು ಅಪಾಯ ಎಂದು ನಾಸಾ ತಿಳಿಸಿ ಎಚ್ಚರಿಸಿತ್ತು.

ಸುನೀತಾ ವಿಲಿಯಮ್ಸ್ ಮತ್ತು ಅವರ ಸಹ ಗಗನಯಾತ್ರಿಗಳ ಬಾಹ್ಯಾಕಾಶ ನೌಕೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಈಗ ಅವರು ಹ್ಯೂಸ್ಟನ್‌ನಲ್ಲಿರುವ ನಾಸಾದ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಾಚರಣೆಗಳ ಪ್ರಧಾನ ಕಚೇರಿಯಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದಾರೆ.

ಬಾಹ್ಯಾಕಾಶ ನಿಲ್ದಾಣಕ್ಕೆ ಸುನಿತಾ ಹೋಗಿದ್ಯಾಕೆ?
ನಾಸಾದ ಸಹಭಾಗಿತ್ವದಲ್ಲಿ ಬೋಯಿಂಗ್ ರೂಪಿಸಿದ್ದ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಪರೀಕ್ಷಾರ್ಥ ಪ್ರಯಾಣದ ಭಾಗವಾಗಿ ಉಪಗ್ರಹ ಉಡಾವಣೆ ಮಾಡಲಾಗಿತ್ತು. ಸುನಿತಾ ಮತ್ತು ಬುಚ್ ಇಬ್ಬರೂ ಗಗನಯಾತ್ರಿಗಳು ಜೂ.5 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಎಂಟು ದಿನಗಳ ಕಾಲ ಅಲ್ಲಿದ್ದು ಜೂ.14 ರಂದು ಸ್ಟಾರ್‌ ಲೈನರ್ ಮೂಲಕವೇ ಭೂಮಿಗೆ ವಾಪಸ್ ಆಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಅವರು ಬಾಹ್ಯಾಕಾಶದಲ್ಲೇ 9 ತಿಂಗಳ ಕಾಲ ಉಳಿಯುವಂತಾಗಿತ್ತು.

ಸಂಭ್ರಮಿಸಿದ ಭಾರತ-
ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಅವರು ಭೂಮಿಗೆ ಸುರಕ್ಷಿತವಾದಿ ವಾಪಸ್ಸಾಗಿರುವುದಕ್ಕೆ ಭಾರತೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಸುನಿತಾ ಅವರ ಪೂರ್ವಜರ ಊರು ಗುಜರಾತಿನ ಮೆಹ್ಲಾನ ಜಿಲ್ಲೆಯಲ್ಲಿರುವ ಜುಲಸಾನದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಸುನಿತಾ ತಂದೆ ದೀಪಕ್ ಪಾಂಡ್ಯ ಪೂರ್ವಜರ ಊರು ಜುಲಾಸಾನ ಗ್ರಾಮಸ್ಥರು ಅವರ ಸುರಕ್ಷತೆಗಾಗಿ ದೇವಸ್ಥಾನಗಳಲ್ಲಿ ಜ್ಯೋತಿ ಬೆಳಗಿಸಿ ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ಕೊನೆಗೂ ಸುನಿತಾ ಅವರು ಭುವಿಗೆ ಮರಳಿರುವುದಕ್ಕೆ ಸಂಭ್ರಮವನ್ನಾಚರಿಸುತ್ತಿದ್ದಾರೆ.

ಮೋದಿ ಪತ್ರ-
ಭೂಮಿಗೆ ಮರಳಿದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಅವರಿಗೆ ಹೃದಯಪೂರ್ವಕ ಸ್ವಾಗತ. ನಿಮ್ಮೆಲ್ಲರ ಈ ಅದ್ಭುತ ಪ್ರಯಾಣವು ಮಾನವ ಪರಿಶ್ರಮ ಮತ್ತು ವೈಜ್ಞಾನಿಕ ಶ್ರೇಷ್ಠತೆಗೆ ಸಾಕ್ಷಿಯಾಗಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಧಾನಿಗಳಾದ ನರೇಂದ್ರ ಮೋದಿ ಅವರು ಸುನಿತಾ ವಿಲಿಯಮ್ಸ್ ಅವರಿಗೆ ಬರೆದ ಹೃದಯಸ್ಪರ್ಶಿ ಪತ್ರವು ಸಮಸ್ತ ಭಾರತೀಯರ ಪ್ರೀತಿ, ವಿಶ್ವಾಸ, ಅಭಿಮಾನವನ್ನು ಪ್ರತಿಬಿಂಬಿಸುತ್ತದೆ. “ಸಾವಿರಾರು ಮೈಲುಗಳಷ್ಟು ದೂರದಲ್ಲಿದ್ದರೂ ನೀವು ನಮ್ಮ ಹೃದಯಗಳಿಗೆ ಹತ್ತಿರವಾಗಿದ್ದೀರಿ” ಎಂದು ಮಾನ್ಯ ಪ್ರಧಾನಿಗಳು ಹೇಳಿರುವುದು ಭಾರತೀಯರ ಪ್ರೀತಿಯ ದ್ಯೋತಕವಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಸುನಿತಾ ವಿಲಿಯಮ್ಸ್ ಅವರು ತಮ್ಮ ಸಾಹಸ, ಸಮರ್ಪಣೆ ಮತ್ತು ಧೈರ್ಯದಿಂದ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದ್ದಾರೆ. ಇಬ್ಬರೂ ಗಗನಯಾತ್ರಿಗಳಿಗೆ ಶುಭ ಹಾರೈಕೆಗಳು ಎಂದು ಕುಮಾರಸ್ವಾಮಿ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ.

ಜೆಡಿಎಸ್ ಅಭಿನಂದನೆ:
ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಭೂಮಿಗೆ ಮರುಳಿದ ಗಗನಯಾತ್ರಿಗಳಾದ ಭಾರತೀಯ ಸಂಜಾತೆ ಸುನಿತಾ ವಿಲಿಯಮ್ಸ್‌ಸೇರಿದಂತೆ ಬುಚ್ ವಿಲ್ಮೋರ್
, ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಗೋರ್ಬುನೋವ್ ಅವರಿಗೆ ಜೆಡಿಎಸ್ ಅಭಿನಂದನೆಗಳನ್ನು ಸಲ್ಲಿಸಿದೆ.

ಗಗನ ನೌಕೆಯಲ್ಲಿನ ತಾಂತ್ರಿಕದೋಷದಿಂದ ಕಳೆದ 9 ತಿಂಗಳಿಂದ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದ  ಸುನಿತಾ ವಿಲಿಯಮ್ಸ್‌ಮತ್ತು ಬುಚ್ ವಿಲ್ಮೋರ್ ಸೇರಿ ನಾಲ್ವರು ಇಂದು ಬೆಳಗ್ಗೆ 3:27ಕ್ಕೆ ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಭೂಮಿಗೆ ವಾಪಸ್ಸಾಗಿದ್ದಾರೆ.

ನಾಸಾ ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಫ್ಲೋರಿಡಾ ಬಳಿಯ ಯುಎಸ್ ಕೊಲ್ಲಿಯಲ್ಲಿ ಸುರಕ್ಷಿತವಾಗಿ ಇಳಿಯಿತು. ಸುನಿತಾ ವಿಲಿಯಮ್ಸ್ ಅವರು ಭೂಮಿ ಮಗೆ ವಾಪಸ್ಸಾಗಿರುವುದಕ್ಕೆ ಭಾರತೀಯರು ಸೇರಿದಂತೆ ವಿಶ್ವಕ್ಕೆ ಸಂತಸ ತಂದಿದೆ.

ಬಾಹ್ಯಾಕಾಶ ವಿಜ್ಞಾನದಲ್ಲಿ ಸುನಿತಾ ವಿಲಿಯಮ್ಸ್ ಅವರ ಹೆಜ್ಜೆ ಗುರುತುಗಳು, ಅನ್ವೇಷಣೆ, ಧೈರ್ಯ ಮತ್ತು ಸಾಹಸ ಮುಂದಿನ ಯುವ ಪೀಳಿಗೆಗೆ ಸ್ಫೂರ್ತಿಯ ಜೊತೆಗೆ ದಾರಿ ದೀಪವಾಗಿರಲಿದೆ ಎಂದು ಜೆಡಿಎಸ್ ತಿಳಿಸಿದೆ.

 

- Advertisement -  - Advertisement - 
Share This Article
error: Content is protected !!
";