ಜನವರಿ-5 ರಂದು ಉಚಿತ ಡಯಾಬೀಟೀಸ್ ತಪಾಸಣಾ ಶಿಬಿರ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದಲ್ಲಿ ಜನವರಿ-5 ಭಾನುವಾರ ಉಚಿತ ಡಯಾಬೀಟೀಸ್ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಹಿರಿಯ ಅನುಭವಿ ವೈದ್ಯರಾದ ಡಾ ಜಿ.ಪ್ರಶಾಂತ್ ಹಾಗೂ ಡಾ .ಶೀತಲ್ ಪ್ರಶಾಂತ್ ರವರ ನೇತೃತ್ವದಲ್ಲಿ ಬೃಹತ್ ಡಯಾಬೀಟೀಸ್ ತಪಾಸಣಾ ಶಿಬಿರ ಆಯೋಜಿಸಲಾಗಿದೆ.  

ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು, ವಯೋವೃದ್ದರು, ಸಕ್ಕರೆ ಕಾಯಿಲೆಯಿಂದ ಕಾಲು ಗಾಯಗಳು ವಾಸಿಯಾಗದೇ ಇರುವವರು, ಪದೇ ಪದೇ ಮೂರ್ತ ವಿಸರ್ಜನೆ ಮಾಡುವವರು, ವಿಶೇಷವಾಗಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಗರ್ಭಿಣಿಯರು ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. 

ಆರೋಗ್ಯ ತಪಾಸಣೆಗಾಗಿ ಬರುವ ರೋಗಿಗಳಿಗೆ ಉಚಿತವಾಗಿ ಸಕ್ಕರೆ ಖಾಯಿಲೆ, ಬಿ ಪಿ, ವೈದ್ಯರ ಸಲಹೆ ಸಮಾಲೋಚನೆ ನೀಡಲಾಗುವುದು. ಚಿತ್ರದುರ್ಗ ಡಯಾಬೇಟಿಸ್ ಸೆಂಟರ್, ಬಸವೇಶ್ವರ ಟಾಕೀಸ್ ಎದುರು, ಚಿತ್ರದುರ್ಗ

ಜ.5ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ-2 ಗಂಟೆ ತನಕ ಶಿಬಿರದಲ್ಲಿ ತಪಾಸಣೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 8722218001, 9535178908 ಸಂಪರ್ಕಿಸಲು ಕೋರಿದ್ದಾರೆ.

 

 

- Advertisement -  - Advertisement - 
Share This Article
error: Content is protected !!
";