ಊಟ ಮತ್ತು ವಸತಿ ಸೌಲಭ್ಯದೊಂದಿಗೆ ಉಚಿತ ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಗಾರ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭಾರತೀಯ ವಿಜ್ಞಾನ ಸಂಸ್ಥೆ, ವಿಜ್ಞಾನ ತಂತ್ರಜ್ಞಾನ ಮತ್ತು ನಾವಿನ್ಯತ ಕೇಂದ್ರ (ಎಸ್ಟಿಐ ಹಬ್) ಹಾಗೂ ಸೊಸೈಟಿ ಫಾರ್ ಇನ್ನೋವೇಷನ್ ಅಂಡ್ ಡೆವಲಪ್ಮೆಂಟ್ (ಎಸ್ಐಡಿ), ಸಹಯೋಗದಲ್ಲಿ ಚಳ್ಳಕೆರೆ ತಾಲ್ಲೂಕಿನ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥಾನ ಆವರಣದಲ್ಲಿ ನವೆಂಬರ್ 6 ರಿಂದ 9 ರವರೆಗೆ ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿದೆ.

6 ದಿನಗಳ ತರಬೇತಿಯಲ್ಲಿ ಹೊಸ ಉದ್ಯಮವನ್ನು ಆರಂಭಿಸಲು ಆಸಕ್ತಿ ಇರುವವರಿಗಾಗಿ ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿ ಕುರಿತು ತರಬೇತಿ ನೀಡಲಾಗುವುದು.

18-45 ವರ್ಷದೊಳಗಿನ ಕನಿಷ್ಠ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು .23 ಒಳಗೆ ತಮ್ಮ ಹೆಸರನ್ನು ಗಣೇಶ್ ಮೊ. 8970582703, ಕೋಟೇಶ್ ಮೊ.9743675646 ಗೆ ಕರೆ ಮಾಡಿ ನೊಂದಾಯಿಸಿಕೊಳ್ಳಬಹುದು.

.25ರೊಳಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಎಸ್.ಸಿ, ಎಸ್.ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ 6 ದಿನಗಳ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಬೇಕು.

ಊಟ ಮತ್ತು ವಸತಿ ಸೌಲಭ್ಯದೊಂದಿಗೆ ಸಂಪೂರ್ಣ ಉಚಿತವಾಗಿ ತರಬೇತಿ ನೀಡಲಾಗುತ್ತಿದ್ದು ಇದರ ಸದಪಯೋಗ ಪಡೆದುಕೊಳ್ಳುವಂತೆ ವಿಜ್ಞಾನ ತಂತ್ರಜ್ಞಾನ ಮತ್ತು ನಾವಿನ್ಯತ ಕೇಂದ್ರ ವ್ಯವಸ್ಥಾಪಕ ಪ್ರತಾಪ್ ಮೂರ್ತಿ ತಿಳಿಸಿದ್ದಾರೆ.

 

- Advertisement -  - Advertisement - 
Share This Article
error: Content is protected !!
";