ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ರೋಟರಿ ಭವನದಲ್ಲಿ ವೇದಾವತಿ ನಗರದ ನಮ್ಮ ಕ್ಲಿನಿಕ್ ನಲ್ಲಿ ಬೆಂಗಳೂರಿನ ಲಯನ್ಸ್ ಐ. ಆಸ್ಪತ್ರೆ ಇವರ ವತಿಯಿಂದ ರೋಟರಿ ಮತ್ತು ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣಾ ಮತ್ತು ಕಣ್ಣಿನ ಐಓ ಅಳವಡಿಕೆ ಶಿಬಿರ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಜಿ.ಎಸ್ ಕಿರಣ್, ರೆಡ್ ಕ್ರಾಸ್ ಛೇರ್ಮನ್ ಹೆಚ್.ಎಸ್. ಸುಂದರರಾಜ್, ಎಂ.ಎಸ್ ರಾಘವೇಂದ್ರ, ಎ.ರಾಘವೇಂದ್ರ, ಎಲ್. ಆನಂದ್ ಶೆಟ್ಟಿ, ದೇವರಾಜ್ ಮೂರ್ತಿ, ಸಣ್ಣ ಭೀಮಣ್ಣ, ಜೋಗಪ್ಪ, ಹೆಚ್.ಎಸ್. ಪ್ರಶಾಂತ್, ಮಲ್ಲೇಶಪ್ಪ, ಪರಮೇಶ್ವರ್ ಭಟ್, ಶಶಿಕಲಾ ರವಿಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.