ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು
  ವತಿಯಿಂದ ದೊಡ್ಡ ಬಳ್ಳಾಪುರ ತಾಲೂಕಿನ ಕಂಟನಕುಂಟೆ ವಲಯದ ರೋಜಿಪುರ  ಗ್ರಾಮದಲ್ಲಿ ಉಚಿತ ಕಣ್ಣಿನ ತಪಾಸಣಾ ಆರೋಗ್ಯ ಶಿಬಿರ ಕಾರ್ಯಕ್ರಮ ನಡೆಯಿತು ತಾಲೂಕಿನ  ಯೋಜನಾಧಿಕಾರಿಯಾದ ದಿನೇಶ್ ಎನ್.ಆರ್ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು.

- Advertisement - 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆ ಸಹಕಾರದಿಂದ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಉಚಿತವಾಗಿ ಕನ್ನಡಕ ವಿತರಣೆ ಮಾಡುತ್ತಿದ್ದು, ಅವಶ್ಯಕತೆ ಇದ್ದಲ್ಲಿ ಆಪರೇಷನ್ ಅವಕಾಶ ಇದೆ ಎಂದು ತಿಳಿಸಿದರು.

- Advertisement - 

ದೃಷ್ಠಿ ಆಸ್ಪತ್ರೆ ನೇತ್ರಾದಿಕಾರಿ ನಾಯ್ಡ್ ,ಜನಜಾಗೃತಿ ಸದಸ್ಯರಾದ ರಮೇಶ್, ನಗರ ಸಭೆ ಸದಸ್ಯರಾದ ಹಂಸಪ್ರಿಯಾ,, ಒಕ್ಕೂಟ ಅಧ್ಯಕ್ಷರಾದ ನಾಗರತ್ನ  ವಲಯದ ಮೇಲ್ವಿಚಾರಕರಾದ ಗಿರೀಶ್ , ತಾಲೂಕಿನ ಜ್ಞಾನ ವಿಕಾಸ ಸಮನ್ವಯಧಿಕಾರಿ ಛಾಯಾ ಕುಮಾರಿ  ಹಾಗೂ ಸೇವಾಪ್ರತಿನಿಧಿ ಅನಿತಾ, ಸಂಘದ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.

 

- Advertisement - 

 

 

Share This Article
error: Content is protected !!
";