ಕಾಕಾ ಪಾಟೀಲನಿಗೂ ಫ್ರೀ, ಮಹಾದೇವಪ್ಪನಿಗೂ ಫ್ರೀ ಎಂದಿದ್ದ ಸಿದ್ದು ಬಿಪಿಎಲ್ ಕಾರ್ಡ್ ರದ್ದಿಗೆ ಹುನ್ನಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅನ್ನಭಾಗ್ಯದ ಹೊರೆ ಹೊರಲಾಗದೆ ಲಕ್ಷಾಂತರ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ತೆರಿಗೆದಾರರಿಗೆ, ಸರ್ಕಾರಿ ನೌಕರರಿಗೆ ಉಚಿತ ಅಕ್ಕಿ ಕೊಡಬೇಕಾ ಎಂದು ಈ ರಾಜ್ಯ ಕಂಡ ಮಹಾನ್ ದಕ್ಷ ಆಡಳಿತಗಾರರ ರೀತಿ ಹೇಳಿಕೆ ಕೊಟ್ಟಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

ಹಾಗಾದರೆ ಶಕ್ತಿ ಗ್ಯಾರೆಂಟಿ ಅಡಿಯಲ್ಲಿ ತೆರಿಗೆದಾರರು, ಸರ್ಕಾರಿ ನೌಕರರು ಉಚಿತ ಬಸ್ಸು ಸೇವೆ ಬಳಸುತ್ತಿಲ್ಲವೇ? ಎಂದು ಅವರು ಖಾರವಾರಿ ಸಿಎಂಗೆ ಪ್ರಶ್ನಿಸಿದ್ದಾರೆ.

ಹಾಗಾದರೆ ಗೃಹಜ್ಯೋತಿ ಗ್ಯಾರೆಂಟಿ ಯೋಜನೆಯಡಿ ತೆರಿಗೆದಾರರು, ಸರ್ಕಾರಿ ನೌಕರರು 200 ಯೂನಿಟ್ ವರೆಗೂ ಉಚಿತ ಕರೆಂಟ್ ಪಡೆಯುತ್ತಿಲ್ಲವೇ?

ಅಥವಾ ಈ ಹೇಳಿಕೆ ಶಕ್ತಿ ಯೋಜನೆ ಮತ್ತು ಗೃಹಜ್ಯೋತಿ ಯೋಜನೆಗಳಲ್ಲೂ ಶೀಘ್ರದಲ್ಲೇ ಫಲಾನುಭವಿಗಳಿಗೆ ಕೊಕ್ ನೀಡಲಾಗುತ್ತದೆ ಎಂಬ ಮುನ್ಸೂಚನೆಯೇ? ಎಂದು ಅಶೋಕ್ ಅವರು ಸಿಎಂಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಎಸೆದಿದ್ದಾರೆ.

ಈ ಎಡಬಿಡಂಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಒಂದು ದೂರದೃಷ್ಟಿ, ಪೂರ್ವಸಿದ್ಧತೆ, ಯೋಜನೆ ಇವ್ಯಾವುದೂ ಇಲ್ಲ.

ಕೇವಲ ಚುನಾವಣೆಗೆ ಗೆಲ್ಲಲು ಮನಸ್ಸಿಗೆ ಬಂದ ಹಾಗೆ ಕಾಕಾ ಪಾಟೀಲನಿಗೂ ಫ್ರೀ, ಮಹಾದೇವಪ್ಪನಿಗೂ ಫ್ರೀ ಎಂದು ಸುಳ್ಳು ಪ್ರಚಾರ ಮಾಡಿ ಅಧಿಕಾರಕ್ಕೆ ಬಂದಿರುವ ಈ ಕಾಂಗ್ರೆಸ್ ಸರ್ಕಾರಕ್ಕೆ, ಈಗ ಗ್ಯಾರೆಂಟಿಗಳು ನುಂಗಲಾರದ, ಉಗಿಯಲಾರದ ಬಿಸಿ ತುಪ್ಪವಾಗಿದೆ. ಇದೇ ಸತ್ಯ ಎಂದು ಅಶೋಕ್ ತಿಳಿಸಿದ್ದಾರೆ.

 

 

 

 

- Advertisement -  - Advertisement -  - Advertisement - 
Share This Article
error: Content is protected !!
";