ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
“ನಮ್ಮ ಚಾಲಕ ವೃತ್ತಿ” ವಾಕ್ಯದಡಿ ನಿರಂತರ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ಚಾಲಕರನ್ನು ಗೌರವಿಸಿನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದೊಂದಿಗೆ ನಿರಾಶ್ರಿತ 50 ಕಡುಬಡವ ಕುಟುಂಬಗಳಿಗೆ ಉಚಿತ ದಿನಸಿ ಕಿಟ್ ಗಳನ್ನು SBI ಸಿಬ್ಬಂದಿ ಹೇಮಂತ್ ಕುಮಾರ್ ವಿತರಣೆ ಮಾಡಿದರು.
ತಾಲ್ಲೂಕಿನ ದರ್ಗಾಜೋಗಿಹಳ್ಳಿಯಲ್ಲಿ ನಿರಂತರವಾಗಿ ನೆಡೆಯುತ್ತಿರುವ 1829 ದಿನಗಳ ಅನ್ನದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ನಿಷ್ಠಾವಂತ ಚಾಲಕರನ್ನು ಸ್ಮರಿಸುವ ನಿಟ್ಟಿನಲ್ಲಿ ಸದಾ ಸಮಾಜಮುಖಿ ಕಾರ್ಯಗಳನ್ನು ನಿರಂತರ ಮಾಡಿಕೊಂಡು ಬರುತ್ತಿದ್ದೇನೆ, ಅಂತೆಯೇ ಇಂದು ಮಲ್ಲೇಶ್ ರವರ ಸಹಕಾರದೊಂದಿಗೆ 50ಕುಟುಂಬಗಳಿಗೆ ಉಚಿತ ದಿನಸಿ ಕಿಟ್ ವಿತರಣೆ ಮಾಡಿದ್ದು, ಮುಂದೆ ಮತ್ತಷ್ಟು ಸೇವೆ ಸಲ್ಲಿಸಲು ತೀರ್ಮಾನಿಸಿದ್ದೇವೆ ಎಂದರು.
ಮುಖಂಡರಾದ ಹೂವಿನ ನರಸಿಂಹಯ್ಯ ಮಾತನಾಡಿ ಅಗತ್ಯ ದಿನಸಿ ವಿತರಣೆ ಮಾಡುವ ಮೂಲಕ ಹೇಮಂತ್ ಕುಮಾರ್ ರವರು ಯುಗಾದಿ ಹಬ್ಬದಂದು ನಿರಾಶ್ರಿತರಿಗೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದರೇ ತಪ್ಪಾಗಲಾರದು, ಇದು ಸಾಮಾನ್ಯ ವಿಷಯವಲ್ಲ, ಮಲ್ಲೇಶ್ ರವರು ನೆಡೆಸುತ್ತಿರುವ ನಿರಂತರ ಅನ್ನದಾಸೋಹಕ್ಕೆ ಸಾಥ್ ನೀಡುವ ಮೂಲಕ ಈ ಬಾರಿಯ ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ ಅವರಿಗೆ ಶುಭವಾಗಲಿ ಎಂದು ಹಾರೈಸಿದರು.
ಆಟೋ ಮಿತ್ರ ಗಂಗರಾಜು ಮಾತನಾಡಿ ಈ ಬಾರಿಯ ಯುಗಾದಿ ಹಬ್ಬ ವಿಶೇಷವಾಗಿ ದಿನಸಿ ಕಿಟ್ ಕೊಡುವ ಮೂಲಕ ಆಚರಿಸಲಾಗಿದೆ, ಕಾರ್ಯಕ್ರಮದ ಮೂಲಕ ಹಲವು ಕುಟುಂಬಗಳ ಸಂತಸಕ್ಕೆ ಕಾರಣರಾದ ಹೇಮಂತ್ ಕುಮಾರ್, ಮಲ್ಲೇಶ್, ಹಾಗೂ ನರಸಿಂಹಯ್ಯ ಮತ್ತು ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ದಾನಿಗಳ ನರವಿನಿಂದ ನಿರಂತರವಾಗಿ 1829 ದಿನಗಳ ಅನ್ನದಾಸೋಹ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಇಂದು ಸರಿಸುಮಾರು 50 ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡುವ ಮೂಲಕ ವಿಶೇಷವಾಗಿ ಅನ್ನದಾಸೋಹ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ . ಕಾರ್ಯಕ್ರಮಕ್ಕೆ ಸಹಾಯ ಹಸ್ತ ನೀಡಿದ ದಾನಿಗಳಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ನಿರಂತರ ಅನ್ನದಾಸೋಹ ಸಮಿತಿಯ ಸದಸ್ಯರು, ಚಾಲಕರು ಉಪಸ್ಥಿತರಿದ್ದರು.