ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿಯಂತ್ರಣಾ ವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಸಭೆ ಅಧ್ಯಕ್ಷರು ಹಾಗೂ ಸದಸ್ಯರ ಸಹಕಾರದೊಂದಿಗೆ ಆಗಸ್ಟ್ 21 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯ ವರೆಗೆ, ನಗರದ ವಾರ್ಡ್ 30ರ ವ್ಯಾಪ್ತಿಯ ಕೆಳಗೋಟೆಯ ಬೇಡರ ಕಣ್ಣಪ್ಪ ದೇವಸ್ಥಾನದ ಹತ್ತಿರದ ಹರಳಯ್ಯ ಸಮುದಾಯ ಭವನದಲ್ಲಿ, ಉಚಿತ ಬೃಹತ್ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ ಹಾಗೂ ಕನ್ನಡಕ ವಿತರಣಾ ಶಿಬಿರ ಆಯೋಜಿಸಲಾಗಿದೆ.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಶಿಬಿರ ಉದ್ಘಾಟಿಸುವರು. ಚಲಚಿತ್ರ ಕಲಾವಿದ ದೊಡ್ಡಣ ಘನ ಉಪಸ್ಥಿತಿ ವಹಿಸುವರು, ನಗರ ಸಭೆ ಅಧ್ಯಕ್ಷೆ ಸುಮಿತಾ.ಬಿ.ಎನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ನಗರ ಸಭೆ ಸದಸ್ಯರು, ಅಧಿಕಾರಿಗಳು, ಮುಖಂಡರು ಭಾಗವಹಿಸುವರು.
ಶಿಬಿರಕ್ಕೆ ಆಗಮಿಸುವವರು ಆಧಾರ್ ಕಾಡ್‍ನ ಎರಡು ಜೆರಾಕ್ಸ್ ಪ್ರತಿ, ರೇಷನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಎರಡು ಪಾಸ್ ಪೋರ್ಟ್ ಸೈಜ್ ಕಲರ್ ಪೋಟೋ ತರಬೇಕು. ನೊಂದಣಿ ವೇಳೆ ಮೊಬೈಲ್ ನಂಬರ್ ನೀಡಬೇಕು.
ಕಣ್ಣಿನ ಪೊರೆ, ನೀರು ಸೋರುವಿಕೆ, ಮಾಲ್ಗಣ್ಣು, ಮಂಜಾಗಿ ಕಾಣುವುದು, ಕಣ್ಣಿನಲ್ಲಿ ದುರ್ಮಾಂಸ ಬೆಳೆದಿರುವುದು ಸೇರಿದಂತೆ ವಿವಿದ ಕಣ್ಣಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುವುದು.
ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರನ್ನು ಶಿವಮೊಗ್ಗ ಕರೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆ ಆದ ನಾಲ್ಕು ದಿನಕ್ಕೆ ಪುನಃ ಕರೆತಂದು ಬಿಡಲಾಗುವುದು. ಉಚಿತವಾಗಿ ಸಕ್ಕರೆ ಹಾಗೂ ಬಿಪಿ ಪರೀಕ್ಷೆ ನಡೆಸಲಾಗುವುದು. ಶಸ್ತ್ರಚಿಕಿತ್ಸೆಗೆ ಒಳಪಡುವವರು ದಿನನಿತ್ಯ ಸೇವಿಸುವ ಔಷಧಗಳು ಹಾಗೂ ವಾಸ್ತವ್ಯಕ್ಕೆ ಅನುವಾಗುವ ವಸ್ತುಗಳನ್ನು ತಮ್ಮೊಂದಿಗೆ ತರಬೇಕು. ಇದರೊಂದಿಗೆ ಕಡ್ಡಾಯವಾಗಿ ಸಹಾಯಕರನ್ನು ಕೆರದುಕೊಂಡಬರಬೇಕು.
ಹೆಚ್ಚಿನ ಮಾಹಿತಿಗಾಗಿ ಶಾಸಕರ ಕಾರ್ಯಾಲಯದ ಪೋನ್ ನಂಬರ್ 9591515031 ಶಂಕರ್ ಆಸ್ಪತ್ರೆ ಪೋನ್ ನಂಬರ್ 8069038900 ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.

