ಟ್ರ್ಯಾಕ್ಟರ್ ಡ್ರೈವರ್‍ಗಳಿಗೆ ಉಚಿತ ಲೈಸನ್ಸ್- ಸಚಿವ ರಾಮಲಿಂಗಾರೆಡ್ಡಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಟ್ರ್ಯಾಕ್ಟರ್ ಹೊಂದಿರುವ ಎಲ್ಲಾ ಡ್ರೈವರ್‍ಗಳಿಗೆ ಅಭಿಯಾನವನ್ನು ಮಾಡಿ ಉಚಿತವಾಗಿ ಲೈಸನ್ಸ್ ನೀಡಲು ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಕೆ.ಎಸ್.ನವೀನ್ ಅವರ ಚುಕ್ಕೆ ಗುರುತಿನ ಪ್ರಶನೆಗೆ ಉತ್ತರಿಸಿದ ಸಚಿವರು,  2020, 2021, 2022, 2023, 2024 ಮತ್ತು 2025ನೇ  (ಜೂನ್) ಸಾಲಿನಲ್ಲಿ  ರಾಜ್ಯದಲ್ಲಿ  ಒಟ್ಟು 2,13,192 ಅಪಘಾತಗಳು ಸಂಭವಿಸಿವೆ ಹಾಗೂ 60,115 ಜನ ರಸ್ತೆ ಅಪಘಾತಗಳಲ್ಲಿ ಮೃತ ಪಟ್ಟಿರುತ್ತಾರೆ.

- Advertisement - 

ರಾಜ್ಯದಲ್ಲಿ ಈ ವರೆಗೂ ಒಟ್ಟು 80,43,253 ದ್ವಿ ಚಕ್ರ ವಾಹನಗಳ 1,17,34,448 ನಾಲ್ಕು ಚಕ್ರ ವಾಹನಗಳ ಮತ್ತು 7,14,380 ಭಾರಿ ವಾಹನಗಳ ಚಾಲನಾ ಪರವಾನಿಗಿಯನ್ನು ನೀಡಲಾಗಿದೆ. ಅಲ್ಲದೆ 2,57,321 ಟ್ರ್ಯಾಕ್ಟರ್ ವಾಹನಗಳಿಗೆ ಚಾಲನಾ ಪರವಾನಿಗಿಗಳನ್ನು ನೀಡಲಾಗಿದೆ.

ಪ್ರತಿ ವರ್ಷ ನಮ್ಮ ರಾಜ್ಯದಲ್ಲಿ ರಸ್ತೆ ಅಪಘಾತಗಳಿಂದ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಈ ಪೈಕಿ ರಾಜ್ಯದಲ್ಲಿ ಬೆಂಗಳೂರು ಮಹಾನಗರ ಮೊದಲ ಸ್ಥಾನದಲ್ಲಿದ್ದರೆ, ರಾಷ್ಟ್ರಮಟ್ಟದಲ್ಲಿ ನಮ್ಮ ರಾಜ್ಯವು 3ನೇ ಸ್ಥಾನದಲ್ಲಿದೆ. ಈ ಅಪಘಾತಗಳನ್ನು ತಡೆಯುವ ಸಲುವಾಗಿ ರಾಜ್ಯ ಸರ್ಕಾರದಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ರಸ್ತೆ ಅಪಘಾತಗಳು ಮತ್ತು ಸುರಕ್ಷತೆಯ ಬಗ್ಗೆ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ಮತ್ತು ಸಾರಿಗೆ ಇಲಾಖೆಯಿಂದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸಹ ಕೈಗೊಳ್ಳಲಾಗುತ್ತಿದೆ. ಆದರೂ ಸಹ ಅಪಘಾತಗಳು ಕಡಿಮೆ ಆಗುತ್ತಿಲ್ಲ.

- Advertisement - 

ರಸ್ತೆ ಅಪಘಾತಗಳು ಹೆಚ್ಚಾಗಿ ವೀಲಿಂಗ್ ಮಾಡುವುದರಿಂದ,  ಕುಡಿದು ವಾಹನ ಚಾಲನೆ ಮಾಡುವುದರಿಂದ ರ್ಯಾಷ್ ಡ್ರೈವಿಂಗ್ ಮಾಡುವುದರಿಂದ ಆಗುತ್ತಿವೆ. ಕೆಲವು ದ್ವಿ ಚಕ್ರ ವಾಹನ ಚಾಲಕರು ಸರಿಯಾದ ಹೆಲ್ಮೇಟ್ ಹಾಕದೇ ಅಜಾಗರುಕತೆಯಿಂದ ವಾಹನ ಚಾಲನೆ ಮಾಡಿ ಅಪಘಾತಕ್ಕೆ ಒಳಗಾಗಿ ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ. ಜನರಲ್ಲಿ ಅಪಘಾತಗಳ ಬಗ್ಗೆ ಅರಿವು ಮೂಡಿದಲ್ಲಿ ಮತ್ತು ಸರಿಯಾದ ಸಾರಿಗೆ ನಿಯಮಗಳನ್ನು ಪಾಲಿಸಿದಲ್ಲಿ ಮಾತ್ರ ಅಪಘಾತಗಳನ್ನು ತಡೆಬಹುದು.

ರಾಜ್ಯ ಸರ್ಕಾರವು ಸಹ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿ ಮಾಡಿದೆ. ಅಲ್ಲದೇ ಹೆದ್ದಾರಿಗಳಲ್ಲಿ ರಸ್ತೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆಯಿಂದ 80 ಕಡೆ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದೆ ಎಂದು ಸಚಿವರು ತಿಳಿಸಿದರು.

 

 

 

Share This Article
error: Content is protected !!
";