ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಷಾಢಭೂತಿತನ ಅಂದರೆ ಇದೇ ನೋಡಿ!! ಉಚಿತಗಳಿಂದ ಅಧಿಕಾರಕ್ಕೆ ಬಂದು, ಈಗ ಉಚಿತ ನೀಡುವುದು ಅಪರಾಧ ಎನ್ನುತ್ತಿದೆ!! ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರೆ, ಹೇಗಿದ್ದರೂ ನೀವು ಈಗ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು!! ಉಚಿತಗಳು ಆಡಳಿತ ಸುಧಾರಣೆಗೆ ಮಾರಕ ಎಂಬುದು ಚುನಾವಣೆಗೆ ಮುನ್ನ ನಿಮಗೆ ತಿಳಿದಿರಲಿಲ್ಲವೇ..!!! ಎಂದು ಬಿಜೆಪಿ ತೀಕ್ಷ್ಣವಾಗಿ ಪ್ರಶ್ನಿಸಿದೆ.