ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ವಾಲಿಬಾಲ್, ಅಥ್ಲೆಟಿಕ್ಸ್ ಮತ್ತು ಷಟಲ್ ಬ್ಯಾಡ್ಮಿಂಟನ್ ಕ್ರೀಡೆಗಳಿಗೆ ಸಂಬಂಧಿಸಿದಂತೆ, ಉಚಿತ ಬೇಸಿಗೆ ಕ್ರೀಡಾ ತರಬೇತಿ ಶಿಬಿರ ಆಯೋಜಿಸಲಾಗಿದೆ.
ಏಪ್ರಿಲ್ 07 ರಿಂದ 30 ವರೆಗೆ ಕ್ರೀಡಾ ತರಬೇತಿ ಶಿಬಿರ ನಡೆಯಲಿದ್ದು, ಹಾಸ್ಟೆಲ್ ಮಕ್ಕಳು ಸೇರಿದಂತೆ ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳು ಈ ಶಿಬಿರದ ಸದಪಯೋಗ ಪಡೆದುಕೊಳ್ಳಬಹುದು. ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಕ್ರೀಡೆಗಳ ತರಬೇತಿ ನೀಡಲಾಗುವುದು.
ವಾಲಿಬಾಲ್ ತರಬೇತಿ ನೊಂದಣಿಗೆ ತರಬೇತುದಾರ ಮಹಮ್ಮದ್ ಮುಹೀಬುಲ್ಲಾ ದೂರವಾಣಿ ಸಂಖ್ಯೆ 9611673475, ಅಥ್ಲೆಟಿಕ್ಸ್ ನೊಂದಣಿಗೆ ತರಬೇತುದಾರ ತಿಪ್ಪಣ್ಣ.ಎಸ್.ಮಾಳಿ ದೂರವಾಣಿ ಸಂಖ್ಯೆ 9380889647, ಷಟಲ್ ಬ್ಯಾಡ್ಮಿಂಟನ್ ನೊಂದಣಿಗೆ ತರಬೇತುದಾರ ಗುರುಮೂರ್ತಿ ದೂರವಾಣಿ ಸಂಖ್ಯೆ 9481038141 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.