ಕೃಷಿ ಯಂತ್ರೋಪಕರಣಗಳ ಕುರಿತು ಉಚಿತ ತರಬೇತಿ ಕಾರ್ಯಾಗಾರ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಬಬ್ಬೂರಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಾಗೂ ಕೃಷಿ ಯಂತ್ರೋಪಕರಣಗಳ ಪರೀಕ್ಷಾ ಮತ್ತು ತರಬೇತಿ ಕೇಂದ್ರ ಸಹಯೋಗದಲ್ಲಿ ಡಿ.
4 ರಿಂದ ಡಿ.6 ವರೆಗೆ ವಿವಿಧ ಕೃಷಿ ಯಂತ್ರೋಪಕರಣಗಳ ಪ್ರಾಮುಖ್ಯತೆ, ಉಪಯೋಗ ಮತ್ತು ನಿರ್ವಹಣೆ ಕುರಿತು 3 ದಿನಗಳ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.

ತರಬೇತಿ ಮೊದಲ ದಿನ ಕೃಷಿ ವಿಕಾಸ ಯೋಜನೆ ರಾಷ್ಟ್ರೀಯ ಸಹ ಸಂಶೋಧನ ನಿರ್ದೇಶಕ ಡಾ ಶರಣಪ್ಪ ಜಂಗಂಡಿ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆ ಕೈಗೊಳ್ಳಲು ಬಳಸುವ ವಿವಿಧ ಕೃಷಿ ಯಂತ್ರೋಪಕರಣಗಳ ಪ್ರಾಮುಖ್ಯತೆ, ಉಪಯೋಗ ಕುರಿತು ರೈತರಿಗೆ ಮಾಹಿತಿ ನೀಡುವರು. ತುಮಕೂರಿನ ಜೈನ್ ಇರಿಗೇಷನ್ . ಬೇಸಾಯಶಾಸ್ತ್ರಜ್ಞ ದೇವರಾಜ್ ರೈತರಿಗೆ ಸಮರ್ಪಕ ನೀರಿನ ನಿರ್ವಹಣೆಗೆ ಹನಿ ಮತ್ತು ತುಂತುರು ನೀರಾವರಿ ಘಟಕಗಳ ಬಳಕೆ ಮತ್ತು ನಿರ್ವಹಣೆ ಕುರಿತು ಮಾಹಿತಿ ನೀಡುವರು.

- Advertisement - 

ಎರಡನೇ ಚಿತ್ರದುರ್ಗದ ವರ್ಷಾ ಅಸೋಸಿಯೇಟ್ಸ್ ಮತ್ತು ಹಿರಿಯೂರಿನ ಜನತಾ ಟ್ರೇಡರ್ಸ್ ಸಂಸ್ಥೆ ತಾಂತ್ರಿಕ ಸಿಬ್ಬಂದಿ ಟ್ರ‍್ಯಾಕ್ಟರ್ ಚಾಲಿತ ಕೃಷಿ ಉಪಕರಣಗಳು, ತ್ಯಾಜ್ಯ ನಿರ್ವಹಣೆಯ ಉಪಕರಣಗಳು, ಕಳೆ ನಿರ್ವಹಣೆ, ಕಟಾವು ಮತ್ತು ಸಸ್ಯ ಸಂರಕ್ಷಣಾ ಉಪಕರಣ ಹಾಗೂ ಡೀಸಲ್ ಪಂಪ್‌ಸೆಟ್ ಉಪಯೋಗಿಸುವ ವಿಧ ಮತ್ತು ನಿರ್ವಹಣೆ ಕುರಿತು ಮಾಹಿತಿ ನೀಡುವರು. ಇಫ್ಕೋ ಸಂಸ್ಥೆಯ ವ್ಯವಸ್ಥಾಪಕ ಚಿದಂಬರಮೂರ್ತಿ ಕೃಷಿಯಲ್ಲಿ ನ್ಯಾನೋ ಗೊಬ್ಬರ ಮತ್ತು ಡ್ರೋಣ್ ಬಳಕೆ ಕುರಿತು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನೀಡುವರು.

 ಮೂರನೇಯ ದಿನ ಕೃಷಿಯಲ್ಲಿ ಟ್ರ‍್ಯಾಕ್ಟರ್ ಮತ್ತು ಪವರ್ ಟಿಲ್ಲರ್ ಬಳಕೆ ಮತ್ತು ಸಮರ್ಪಕ ನಿರ್ವಹಣೆ ಕುರಿತು ಮಾಹಿತಿ ನೀಡಲಾಗುವುದು. ಸೆಲ್ಕೋ ಸಂಸ್ಥೆಯ ವ್ಯವಸ್ಥಾಪಕ ಮಂಜುನಾಥ ಭಾಗವತ್ ಸೋಲಾರ್ ಚಾಲಿತ ಕೃಷಿ ಸಂಸ್ಕರಣಾ ಘಟಕಗಳು, ಸೋಲಾರ್ ಬೇಲಿ ಕುರಿತು ವಿಷಯ ಮಂಡನೆ ಮಾಡುವರು.

- Advertisement - 

ಉತ್ತಮ ಪಂಪ್‌ಸೆಟ್ ಅಯ್ಕೆ ಮತ್ತು ಅವುಗಳ ನಿರ್ವಹಣೆ ಹಾಗೂ ಕೃಷಿಯಲ್ಲಿ ಕಣ್ಗಾವಲಿಗೆ ಸಿಸಿ ಕ್ಯಾಮಾರ ಬಳಕೆ ಕುರಿತು ಸಹ ರೈತರಿಗೆ ಮಾಹಿತಿ ನೀಡಲಾಗುವುದು.

ತರಬೇತಿಯಲ್ಲಿ ಭಾಗವಹಿಸಲು 50 ಜನರಿಗೆ ಮಾತ್ರ ಅವಕಾಶವಿದೆ. ಆಸಕ್ತ ರೈತಭಾಂದವರು ತರಬೇತಿಯಲ್ಲಿ ಭಾಗವಹಿಸಲು ಮೊಬೈಲ್ ಸಂಖ್ಯೆ 8277931058 ಗೆ ಕರೆಮಾಡಿ ನೊಂದಣಿ ಮಾಡಿಕೊಳ್ಳುವಂತೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ.ಆರ್ ತಿಳಿಸಿದ್ದಾರೆ.

ಮೊದಲು ನೋಂದಾವಣಿ ಮಾಡಿಕೊಂಡ 50 ಜನ ರೈತಭಾಂದವರಿಗೆ ಆದ್ಯತೆ ಮೇರೆಗೆ ತರಬೇತಿಗೆ ಪರಿಗಣಿಸಲಾಗುವುದು. ತರಬೇತಿಗೆ ಹಾಜರಾಗುವ ರೈತಬಾಂಧವರು ಖಡ್ಡಾಯವಾಗಿ ತಮ್ಮ ಎಫ್‌ಐಡಿ ಕಾರ್ಡ್ ಅಥವಾ ಚುನಾವಣೆ ಗುರುತಿನ ಚೀಟಿಯನ್ನು ತರಲು ಮನವಿ ಮಾಡಲಾಗಿದೆ.

 

Share This Article
error: Content is protected !!
";