ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ನಗರದ ಎಸ್ ಆರ್ ಎಸ್ ಕಾಲೇಜಿನ ಪದವಿ ಮತ್ತು ಬಿಎಡ್ ಪ್ರಶಿಕ್ಷಣಾರ್ಥಿಗಳಿಗೆ ಮಹಾತ್ಮ ಪುಲೆ ಅಧ್ಯಯನ ಕೇಂದ್ರದ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ವಿಶೇಷ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ಪ್ರಾಂಶುಪಾಲ ನಂದನ್ ಕುಮಾರ್ ಅವರು ಸಸಿಗೆ ನೀರುಣಿಸುವುದರ ಮೂಲಕ ಕಾರ್ಯಗಾರ ಉದ್ಘಾಟಿಸಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬಿಕಾಂ ಬಿಸಿಎ ಮತ್ತು ಬಿಎಡ್ ವ್ಯಾಸಂಗದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಮಹಾತ್ಮ ಪುಲೆ ಅಧ್ಯಯನ ಕೇಂದ್ರದ ಮುಖ್ಯಸ್ಥ ರಾಮಣ್ಣ ಆರ್ ರಾಜ್ಯ ಲೋಕಸೇವಾ ಆಯೋಗ ನಡೆಸುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ನೀಡುತ್ತಿದ್ದು ಇದರ ಜೊತೆಗೆ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಆರ್ ಆರ್ ಬಿಎಸ್ ಎಸ್ ಸಿ ಮತ್ತು ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ ನೀಡುವ ಬಗ್ಗೆ ಮಾಹಿತಿ ನೀಡಿದರು.
ಅರೆಕಾಲಿಕ ಮತ್ತು ಪೂರ್ಣಕಾಲಿಕ ಉದ್ಯೋಗದಲ್ಲಿರುವ ಹಾಗೂ ವ್ಯಾಸಂಗ ಮಾಡುತ್ತಿರುವ ಪದವೀಧರರಿಗೆ ಅನುಕೂಲವಾಗುವಂತೆ ತರಬೇತಿ ಸಮಯವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಆಸಕ್ತ ವಿದ್ಯಾರ್ಥಿಗಳು ಮಹಾತ್ಮ ಪುಲೆ ಅಧ್ಯಯನ ಕೇಂದ್ರದ ವತಿಯಿಂದ ನೀಡಲಾಗುತ್ತಿರುವ ತರಬೇತಿಯ ಈ ಸುವರ್ಣ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರಕವಾದ ಎಲ್ಲಾ ವಿಷಯವಾರು ಮಾಹಿತಿಯನ್ನು ಸಂಪೂರ್ಣವಾಗಿ ಸಂಪನ್ಮೂಲ ವ್ಯಕ್ತಿ ಮಾಂತೇಶ್ ವಿವರಿಸಿದರು.
ಸಂಪನ್ಮೂಲ ವ್ಯಕ್ತಿ ಜಕರಾಯ ಪೂಜಾರಿ ವಿಜಯಪುರ ಸ್ಪರ್ಧಾರ್ಥಿಗಳು ಜೀವನದಲ್ಲಿ ಸಾಧಕರು ಯಶಸ್ವಿ ವ್ಯಕ್ತಿಗಳಾಗಿ ನೌಕರಿಯನ್ನು ಪಡೆಯಲು ಶ್ರದ್ಧೆ ಮತ್ತು ನಿರಂತರ ಪ್ರಯತ್ನ ಅತ್ಯಂತ ಅಗತ್ಯ, ತಮಗೆ ತಂದೆ ತಾಯಿಗಳೇ ಆದರ್ಶ ಆಗಬೇಕೆಂದು ತಿಳಿಸಿದರು.
ಪ್ರಾಧ್ಯಾಪಕ ದೇವೇಂದ್ರಪ್ಪ ನಿರೂಪಿಸಿದರು. ಕಾಲೇಜಿನ ಬೋಧಕ ವೃಂದ ಉಪಸ್ಥಿತಿ ಇದ್ದರು. ನೊಂದಣಿಗಾಗಿ ಸಂಪರ್ಕಿಸಲು 9242843504, 9740108588, 9972446430 ಸಂಘಟಕರು ಕೋರಿದ್ದಾರೆ.

