ಸ್ವಾತಂತ್ರ್ಯ ಹೋರಾಟಗಾರ ಕೆ. ಸಿ. ನಾರಾಯಣಪ್ಪ ಇನ್ನಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ
   ಹೋರಾಟಗಾರ ಮುತ್ಸದ್ದಿ ಕೆ.ಸಿ.ನಾರಾಯಣಪ್ಪ(96) ವಿಧಿವಶರಾಗಿದ್ದಾರೆ.

- Advertisement - 

ಬೆಂಗಳೂರಿನ ವಿನಾಯಕ ಲೇಔಟ್ ನಲ್ಲಿರುವ ಪುತ್ರನ ಮನೆಯಲ್ಲಿ ಕೆ.ಸಿ. ನಾರಾಯಣಪ್ಪ ಅವರು ಜೂ 2ರಂದು ಬೆಳಗ್ಗೆ ನಿಧನರಾಗಿದ್ದಾರೆ.

- Advertisement - 

ಮೃತರು ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ ಬೆಳಗ್ಗೆ 11.30ಕ್ಕೆ ದೊಡ್ಡಬಳ್ಳಾಪುರ ತಾಲ್ಲೂಕು ಸಾಸಲು ಹೋಬಳಿಯ ಕರಿಕಲ್ಲಹಳ್ಳಿ ಗ್ರಾಮದ ಸ್ವಂತ ಜಮೀನಿನಲ್ಲಿ ನಡೆಯಲಿದೆ ಎಂದು ಅವರ ಪುತ್ರ ಡಾ.ಕೆ.ಎನ್.ವೆಂಕಟೇಶ್ ತಿಳಿಸಿದ್ದಾರೆ.

 ಕೆ.ಸಿ.ನಾರಾಯಣಪ್ಪ ಅವರು ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯನಂತರ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮಲ್ಲಿ ಅವರನ್ನು ಸನ್ಮಾನಿಸಲಾಗಿತ್ತು.

- Advertisement - 

ಇತ್ತಿಚೆಗಷ್ಟೇ ರಾಜ್ಯಪಾಲರಾದ ಥಾವರ್ ಚಂದ್ ಗೆಲ್ಲೋಟ್ ಅವರು, ಕೆ.ಸಿ. ನಾರಾಯಣಪ್ಪ ಅವರ ಸ್ವಗೃಹಕ್ಕೆ ಭೇಟಿ ನೀಡಿ ಸನ್ಮಾನಿಸಿದ್ದರು. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಅವರಿಗೆ, ರಾಷ್ಟ್ರ, ರಾಜ್ಯ ಮಟ್ಟದ ಅನೇಕ ಪುರಸ್ಕಾರಗಳು ಸಂದಿವೆ.

ಅಂದಿನ ಪ್ರಧಾನಿಗಳಾದ ಜವಹಾರ ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ನಿಕಟ ಸಂಪರ್ಕವನ್ನು ಕೆ.ಸಿ.ನಾರಾಯಣಪ್ಪ ಹೊಂದಿದ್ದರು. ಅವರು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದರು.

 

Share This Article
error: Content is protected !!
";