ಫೆ.01ರಂದು ಗೆಳೆತನ ಗಂಗೋತ್ರಿ ಕಾರ್ಯಕ್ರಮ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟ ಗ್ರಾಮದ ಶ್ರೀ ಮಾರುತಿ ಗ್ರಾಮಾಂತರ ಪ್ರೌಢಾಲೆಯ 1990-91ನೇ ಸಾಲಿನ 35 ವರ್ಷಗಳ ನಂತರದ ಸಹಪಾಠಿ ವಿದ್ಯಾರ್ಥಿಗಳ  ಪುನರ್ಮಿಲನ-ಗೆಳೆತನ ಗಂಗೋತ್ರಿ ಕಾರ್ಯಕ್ರಮವನ್ನು ಇದೇ ಫೆ.01ರಂದು ಬೆಳಿಗ್ಗೆ 10ಕ್ಕೆ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಬ್ಯಾಚಿನರಾದ ನಾಗರಾಜ್ ಬೆಳಗಟ್ಟ, ಡಾ.ಬಿ.ಎಂ.ಗುರುನಾಥ, ಲೇಪಾಕ್ಷಿ, ಪ್ರಸನ್ನ, ಎಸ್.ವೇದಾವತಿ, ಮೈತ್ರಾ, ಆಶಾ, ಪದ್ಮ, ಪಿ.ಎಲ್.ವೆಂಕಟೇಶ್ ರೆಡ್ಡಿ, ಬಿ.ರವಿಶಂಕರ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ. 

- Advertisement - 

ಇದೇ ಸಂದರ್ಭದಲ್ಲಿ ಶಾಲೆಯ ನಿವೃತ್ತ ಶಿಕ್ಷಕರಾದ ಡಿ.ಎಲ್.ತಿಮ್ಮರೆಡ್ಡಿ, ಎ.ಎನ್.ರಾಜಶೇಖರ್, ಜಿಯಾವುಲ್ಲಾ, ರಾಜತ್‍ವುಲ್ಲಾ ಅವರನ್ನು ಅಭಿನಂದಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಫೋಟೋ ವಿವರ: ಬೆಳಗಟ್ಟ ಗ್ರಾಮದ ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆಯ 1990-91ನೇ ಸಾಲಿನ ಎಸ್‍ಎಸ್‍ಎಲ್‍ಸಿ ಬ್ಯಾಚ್

- Advertisement - 

 

Share This Article
error: Content is protected !!
";