ಅ.24 ರಿಂದ ಹಾಸನಾಂಬೆಯ ದರ್ಶನ ಪ್ರಾರಂಭ: ನ.2 ರವರೆಗೂ  ಸಾರ್ವಜನಿಕರ ದರ್ಶನಕ್ಕೆ ಅವಕಾಶ

News Desk

ಚಂದ್ರವಳ್ಳಿ ನ್ಯೂಸ್, ಹಾಸನ:
ಹಾಸನಾಂಬೆ ದೇವಾಲಯದ ಬಾಗಿಲು ಅಕ್ಟೋಬರ್
24 ರಂದು ತೆರೆದು ನ.3 ರಂದು ಮುಚ್ಚಲಾಗುವುದು. ಅ.25ರಿಂದ ನ.2 ರವರೆಗೆ ಮಾತ್ರ ಸಾರ್ವಜನಿಕರಿಗೆ ದರ್ಶನದ ಅವಕಾಶ ಕಲ್ಪಿಸಿದ್ದು, ಬಾಗಿಲು ತೆರೆಯುವ ಮತ್ತು ಮುಚ್ಚುವ ದಿನ ದೇವಿಯ ದರ್ಶನ ಅವಕಾಶವಿರುವುದಿಲ್ಲ ಎಂದು ದೇವಾಲಯದ ಮೂಲಗಳು ತಿಳಿಸಿವೆ.

 ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನ ಜಿಲ್ಲೆಯ ಅಧಿದೇವತೆ ಶ್ರೀ ಹಾಸನಾಂಬ ದೇವಾಲಯದ ಬಾಗಿಲನ್ನು ನಾಳೆ(ಅ 24)ಯಿಂದ ತೆರೆಯುವ ಮೂಲಕ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದೆ . ಹಾಸನಾಂಬ ದೇವಾಲಯಕ್ಕೆ ವರ್ಷದಿಂದ ವರ್ಷಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು ಪ್ರತಿ ವರ್ಷ 9-12 ದಿನ ಮಾತ್ರ ದರ್ಶನ ನೀಡುವ ಪ್ರತೀತಿ ಹೊಂದಿರುವ ಹಾಸನಾಂಬ ದೇವಾಲಯದ ಆಚರಣೆ ವಿಶೇಷ ಎನ್ನಬಹುದು.

 ಈ ದೇವಾಲಯವು ನಂಬಿಕೆ, ಭಕ್ತಿ, ಮಹಿಮೆಗಳಿಗೆ ಹೆಚ್ಚಿನ ವೈಶಿಷ್ಟ್ಯ ಹೊಂದಿದೆ . ದೇವಾಲಯದ ಬಾಗಿಲು ಮುಚ್ಚುವ ಸಮಯದಲ್ಲಿ ದೇವಿಯ ಎದುರು ಇಡಲಾಗುವ ನೈವೇದ್ಯವು ಮತ್ತೇ ಮುಂದಿನ ವರ್ಷ ಇದೇ ಸಮಯದಲ್ಲಿ ಬಾಗಿಲು ತೆರೆದಾಗ ತಾಜಾ ಆಗಿ ಹಾಗೂ ದೇವರ ಎದುರಿನಲ್ಲಿರುವ ದೀಪವು ವರ್ಷವೀಡಿ ಉರಿಯುತ್ತಲೇ ಇರುತ್ತದೆ ಎಂಬ ಪ್ರತೀತಿ ಇದೆ.

 ಸಾವಿರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಪ್ರತಿನಿತ್ಯ ದೇವಿಯ ದರ್ಶನ ಪಡೆಯುತ್ತಾರೆ. ರಾಜ್ಯದ ವಿವಿಧ ಭಾಗಗಳಿಂದ ಭಕ್ತದಿಗಳು ಈ ಸಮಯದಲ್ಲಿ ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ನಾಳೆ(ಅ. 24)ಮಧ್ಯಾಹ್ಯ 12 ಗಂಟೆಗೆ ಶಾಸ್ತ್ರೋಕ್ತವಾಗಿ ವಿಧಿ ವಿಧಾನಪೊರ್ವಕ ಮಂಗಳವಾಧ್ಯಗಳ ಉದ್ಘೋಷದೊಂದಿಗೆ ಹಾಸನಾಂಬೆಯ ದೇಗುಲದ ದ್ವಾರವನ್ನು ನಗರದ ಪ್ರಮುಖರ ಉಪಸ್ಥಿತಿಯಲ್ಲಿ ತೆರೆಯಲಾಗುವುದು ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

- Advertisement -  - Advertisement -  - Advertisement - 
Share This Article
error: Content is protected !!
";