ಬೀದರ್ ನಿಂದ ಮಂಗಳೂರಿನವರೆಗೂ ಬಿದ್ದ ವಕ್ಫ್ ಬೋರ್ಡ್ ವಕ್ರದೃಷ್ಟಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿರೋಧ ಪಕ್ಷದ ನಾಯಕ
ವಕ್ಫ್ ಬೋರ್ಡ್ ವಕ್ರದೃಷ್ಟಿ ಬೀದರ್ ನಿಂದ ಮಂಗಳೂರಿನವರೆಗೂ ಬಿದ್ದಿದ್ದು, ವಕ್ಫ್ ಖಾತೆ ಸಚಿವ ಜಮೀರ್ ಅಹಮದ್ ಖಾನ್ ಆಧುನಿಕ ಟಿಪ್ಪು ಆಗಲು ಹೊರಟಿದ್ದಾರೆ! ಎಂದು ವಿಪಕ್ಷ ನಾಯಕ ಆರ್.ಅಶೋಕ ಟೀಕಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಪಾಪದ ಕೂಸು ವಕ್ಫ್ ಬೋರ್ಡ್  ರಾಜ್ಯದಲ್ಲಿ ಬರೋಬ್ಬರಿ 1 ಲಕ್ಷದ 10 ಸಾವಿರ ಎಕರೆ ಪ್ರದೇಶವನ್ನು ತನ್ನದೆಂದು ಗುರುತಿಸಿದೆಯಂತೆ! ವಿಧಾನ ಪರಿಷತ್ ನಲ್ಲಿ ಸಚಿವ ಜಮೀರ್ ಉತ್ತರಿಸಿದ ಪ್ರತಿಯಲ್ಲಿ ಈ ಸ್ಫೋಟಕ ಮಾಹಿತಿ ಬಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರೈತರು, ಶೋಷಿತರು ಹಾಗೂ ಮಠ ಮಾನ್ಯಗಳ ಆಸ್ತಿಗಳನ್ನೆಲ್ಲಾ ಅಕ್ರಮವಾಗಿ ಕಬಳಿಸಿ, ತನ್ನದೆಂದು ವಕ್ಫ್ ಬೋರ್ಡ್ ಪ್ರತಿಪಾದಿಸುತ್ತಿದ್ದರೂ ಭ್ರಷ್ಟ ಸಿದ್ದರಾಮಯ್ಯ ನವರ ಸರ್ಕಾರ ಕಣ್ಮುಚ್ಚಿ ಕುಳಿತು, ನಾಡಿನ ಜನತೆಗೆ ದ್ರೋಹ ಬಗೆಯುತ್ತಿದೆ ಎಂದು ಅಶೋಕ್ ವಾಗ್ದಾಳಿ ಮಾಡಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";