ಸಂಪಾದಕರ ಸಂಘಕ್ಕೆ ಹಾಲಪ್ಪ ಪ್ರತಿಷ್ಠಾನದಿಂದ ನಿಧಿ ಸ್ಥಾಪನೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ತುಮಕೂರು:
ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಪಾದಕರ ಸಂಘಕ್ಕೆ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಮುರುಳೀಧರ ಹಾಲಪ್ಪ ಅವರು ಸಂಪಾದಕರ ಆರೋಗ್ಯ ಹಾಗೂ ಮಕ್ಕಳ ಶೈಕ್ಷಣಿಕ  ಅಭಿವೃದ್ದಿಗಾಗಿ 1 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡುವುದಾಗಿ ಘೋಷಿಸಿದ್ದು
, ಇದರ ಮೊದಲ ಭಾಗವಾಗಿ ಸೋಮವಾರ 50000 ಸಾವಿರ ರೂ.ಗಳನ್ನು  ನೀಡಿದರು.

ಇಲ್ಲಿಯ ಜಯನಗರದ ಅವರ ನಿವಾಸದಲ್ಲಿ ಸಂಪಾದಕರ ಸಂಘದ ಪದಾಧಿಕಾರಿಗಳಿಗೆ 50 ಸಾವಿರ ರೂ.ಗಳ ನಗದು ನೀಡಿಈ ದೇಣಿಗೆಯನ್ನು ನಿಮ್ಮ ಆರೋಗ್ಯ ಮತ್ತು ನಿಮ್ಮ ಮಕ್ಕಳ ಶೈಕ್ಷಣಾಭಿವೃದ್ದಿಗಾಗಿ ಬಳಸಿಕೊಳ್ಳಿ, ಮುಂದಿನ ವರ್ಷ ಮತ್ತೆ 50 ಸಾವಿರ ರೂ.ಗಳನ್ನು ನೀಡುತ್ತೇನೆ. ಜೊತೆಗೆ ಇತರರೊಂದಿಗೂ ಮಾತನಾಡಿ ನಿಮ್ಮ ಸಂಘಕ್ಕೆ ಸಹಕಾರ ನೀಡುವಂತೆ ತಿಳಿಸುವುದಾಗಿ ಹೇಳಿದರು.

- Advertisement - 

ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಕೃಷ್ಣಮೂರ್ತಿ ಮಾತನಾಡಿ, ಈ ಹಣವನ್ನು ಹಾಲಪ್ಪ ಪ್ರತಿಷ್ಠಾನ ಆರೋಗ್ಯ ಮತ್ತು ಶೈಕ್ಷಣಿಕ ನಿಧಿ ಎಂದು ಸ್ಥಾಪಿಸಿ ಸಂಘದ ಶ್ರೇಯೋಭಿವೃದ್ದಿಗೆ ಬಳಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಜಿ.ಕರುಣಾಕರ, ಉಪಾಧ್ಯಕ್ಷ ಪಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ಸಂಘಟನಾ ಕಾರ್ಯದರ್ಶಿ ಸಿ.ಎನ್.ಮಹೇಶ್ ಕುಮಾರ್, ಅಕ್ಷಯ್ ಚೌದರಿ ಹಾಜರಿದ್ದು, ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಅವರಿಗೆ ಸಂಘದಿಂದ ಕೃತಜ್ಞತೆ ಸಲ್ಲಿಸಿದರು.

- Advertisement - 

 

Share This Article
error: Content is protected !!
";