ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ- SKF ಕೈಗಾರಿಕಾ ಪಾಲುದಾರಿಕೆಗೆ ಮತ್ತಷ್ಟು ಬಲ ಬರಲಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಅಭಿಪ್ರಾಯಪಟ್ಟರು,.
ಸ್ವೀಡನ್ ನ ಪ್ರಖ್ಯಾತ ಕೈಗಾರಿಕಾ ಕಂಪನಿಯಾದ SKFನ ಮುಖ್ಯ ತಂತ್ರಜ್ಞಾನ ಅಧಿಕಾರಿ (CTO) ಶ್ರೀಮತಿ ಅನ್ನಿಕಾ ಓಲ್ಮ್ ಅವರ ನೇತೃತ್ವದ ತಂಡದೊಂದಿಗೆ ಮಹತ್ವದ ಸಭೆ ನಡೆಸಲಾಯಿತು ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಅವರು ತಮ್ಮ ಮೈಸೂರು ಸೀಲ್ಸ್ ಘಟಕದ ಸಾಮರ್ಥ್ಯವನ್ನು ದ್ವಿಗುಣಗೊಳಿಸುವ ಹಾಗೂ ಬೆಂಗಳೂರಿನಲ್ಲಿರುವ ಬಾಲ್ ಬೇರಿಂಗ್ ಮತ್ತು ಲೂಬ್ರಿಕೇಶನ್ ವ್ಯವಸ್ಥೆಗಳಲ್ಲಿ ಹೊಸ ಹೂಡಿಕೆಗಳು ಸೇರಿದಂತೆ ಕರ್ನಾಟಕದಲ್ಲಿನ ತಮ್ಮ ವಿಸ್ತರಣಾ ಯೋಜನೆಗಳನ್ನು ಪ್ರಸ್ತುತಪಡಿಸಿದರು.
SKF ಯೋಜನೆಗಳಿಗೆ ನಮ್ಮಸರಕಾರ ದ ಬೆಂಬಲ ಮತ್ತು ಸಹಕಾರವನ್ನು ವ್ಯಕ್ತಪಡಿಸಿದೆವು ಎಂದು ಸಚಿವರು ತಿಳಿಸಿದರು.
ನೂತನ ಕೈಗಾರಿಕಾ ನೀತಿಯಡಿಯಲ್ಲಿ, ವಿಶೇಷವಾಗಿ ಮಹಿಳಾ ಉದ್ಯೋಗ ಮತ್ತು ಸುಸ್ಥಿರತೆ (sustainability) ಯನ್ನು ಪ್ರೋತ್ಸಾಹಿಸುವ ಪ್ರೋತ್ಸಾಹಗಳನ್ನು ವಿವರಿಸುತ್ತಾ SKFನ ದೃಷ್ಟಿಕೋನಕ್ಕೂ ಸರಿ ಹೊಂದುವುದೆಂದು ತಿಳಿಸಲಾಯಿತು.
ನಮ್ಮ ಸರಕಾರದ ಸುಲಭ ಮತ್ತು ಸುಲಲಿತ ವ್ಯವಹಾರವನ್ನು SKF ತಂಡವು ಶ್ಲಾಘಿಸಿತು. ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಸಬಲಗೊಳಿಸುವ ಕುರಿತು ಬದ್ಧತೆ ವ್ಯಕ್ತಪಡಿಸಲಾಯಿತು ಎಂದು ಎಂ.ಬಿ.ಪಾಟೀಲ್ ತಿಳಿಸಿದರು.