ವಿದ್ಯಾರ್ಥಿಗಳ ವಾಸಕ್ಕೆ 7.51 ಕೋಟಿ ವೆಚ್ಚದಲ್ಲಿ ಜಿ+4 ಬಹುಮಹಡಿ ಹಾಸ್ಟೆಲ್ ಕಟ್ಟಡ ನಿರ್ಮಾಣ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪಿ.ಎಂ.ಜೆ.ವಿ.ಕೆ ಯೋಜನೆಯಡಿಯಲ್ಲಿ ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ತಾಲ್ಲೂಕು, ಮೆದೇಹಳ್ಳಿ ಗ್ರಾಮದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳ ವಾಸಕ್ಕೆ (ಜಿ+4) ಬಹುಮಹಡಿ ಹಾಸ್ಟೆಲ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಲಾಯಿತು.

ತಾಲೂಕಿನ ಮದೇಹಳ್ಳಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳ ವಾಸಕ್ಕೆ (ಜಿ+4) ಬಹುಮಹಡಿ ಹಾಸ್ಟೆಲ್ ಕಟ್ಟಡಕ್ಕೆ ಸಂಸದ ಗೋವಿಂದ ಎಂ.ಕಾರಜೋಳ ಅವರು ಚಾಲನೆ ನೀಡಿ ಮಾತನಾಡಿದರು.

751.58 ಲಕ್ಷದಲ್ಲಿ ನಿರ್ಮಾಣ ಆಗುತ್ತಿರುವ ವಸತಿ ಶಾಲೆ ಕಟ್ಟಡನನ್ನು ಗುತ್ತಿಗೆದಾರರ ಪಿ.ಶ್ರೀನಿವಾಸ್ ಅವರು ನಿರ್ವಹಿಸುತ್ತಿದ್ದಾರೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಮಕ್ಕಳು ಅನುಕೂಲಕ್ಕೆ ಅನವು ಮಾಡಿಕೊಡಬೇಕು ಎಂದು ಸಂಸದರು ಸೂಚನೆ ನೀಡಿದರು.
ಪಿ.ಎಂ.ಜೆ.ವಿ.ಕೆ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಶೇ 60ರಷ್ಟು ಮತ್ತು ರಾಜ್ಯ ಸರ್ಕಾರ ಶೇ.40 ರಷ್ಟು ಅನುದಾನ ನೀಡುತ್ತಿದ್ದು ಮಕ್ಕಳಿಗೆ ಇದು ಸದ್ಬಳಕೆ ಆಗಬೇಕು ಎಂದು ಸಂಸದ ಗೋವಿಂದ್ ಕಾರಜೋಳ ತಿಳಿಸಿದರು.

ಮೆ ಜೇನುಕಲ್ ಕನ್ಸಲೆಂಟ್ಸ್, ಬೆಂಗಳೂರು ಇವರು ಅತ್ಯಂತ ಸುಂದರವಾದ ಕಟ್ಟಡದ ವಾಸ್ತು ಶಿಲ್ಪಿಗಳನ್ನು ತಯಾರಿಸಿಕೊಟ್ಟಿದ್ದು 11 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಕಾರಜೋಳ ಅವರು ಸೂಚನೆ ನೀಡಿದರು.

ವಸತಿ ಸಾಮರ್ಥ್ಯ 315 ವಿದ್ಯಾರ್ಥಿಗಳಿಗಿದೆ. ಹಾಸ್ಟೆಲ್ ನಿರ್ಮಾಣದಲ್ಲಿ ನೆಲ ಮಹಡಿ, 1ನೇ ಮಹಡಿ, ಎರಡನೇ ಮಹಡಿ, ಮೂರನೇ ಮಹಡಿ, ನಾಲ್ಕನೇ ಮಹಡಿ ಮತ್ತು ಐದನೇ ಮಹಡಿಗಳುಳ್ಳು ಬೃಹತ್ ಕಟ್ಟಡ ನಿರ್ಮಿಸಲಾಗುತ್ತದೆ. ಇದರಲ್ಲಿ ಹೆಡ್ ರೂಮ್ ನಿರ್ಮಾಣ ಆಗಲಿದ್ದು ಒಟ್ಟು ವಿಸ್ತೀರ್ಣ 28,496 ಚ ಅಡಿ ಇರಲಿದೆ. ಇದಲ್ಲದೆ ವಿವಿಧೋದ್ದೇಶ ಹಾಲ್ ಕೂಡಾ ನಿರ್ಮಿಸಲಾಗುತ್ತದೆ ಎಂದು ಸಂಸದರು ತಿಳಿಸಿದರು.
ಮುಂದುವರೆದು ಮಾತನಾಡಿ ಸಂಸದ ಗೋವಿಂದ್ ಕಾರಜೋಳ ಅವರು   ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ದಿಗಾಗಿ ಪ್ರಧಾನಮಂತ್ರಿಗಳು 2018ರಲ್ಲಿ ಪ್ರಧಾನಮಂತ್ರಿ ಜನವಿಕಾಸ ಯೋಜನೆ ಜಾರಿಗೆ ತಂದಿದ್ದಾರೆ.
ಈ ಯೋಜನೆಯಡಿ ಅಲ್ಪಸಂಖ್ಯಾತರರನ್ನು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕವಾಗಿ ಮುಖ್ಯವಾಹಿನಿಗೆ ತರುವ ಪ್ರಮಾಣಿಕ ಪ್ರಯತ್ನ ಇದಾಗಿದೆ ಎಂದು ಸಂಸದರು ತಿಳಿಸಿದರು.

      ಸ್ವಾತಂತ್ರ ಬಂದು 60 ವರ್ಷಗಳ ಕಾಲ ದೇಶವನ್ನಾಳಿದ ಬಿ.ಜೆ.ಪಿಯೇತರ ಸರ್ಕಾರಗಳು ಅಲ್ಪಸಂಖ್ಯಾತರನ್ನು ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಂಡರು. ಅಲ್ಪಸಂಖ್ಯಾತರಿಗೆ ಕನಿಷ್ಟ ಸೌಲಭ್ಯಗಳನ್ನು ಒದಗಿಸುವ ಕಾಳಜಿ ತೋರಲಿಲ್ಲ. ಆದರೆ ಮೋದಿ ಅವರ ನೇತೃತ್ವದ ಎನ್ ಡಿಎ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಲ್ಪಸಂಖ್ಯಾತ ಹೆಣ್ಣು ಮಕ್ಕಳಿಗೆ ತ್ರಿವಳಿ ತಲಾಕ್ ರದ್ದು ಮಾಡಿರುವುದು ದೊಡ್ಡ ವರದಾನವಾಗಿದೆ. ಅಲ್ಪಸಂಖ್ಯಾತರಲ್ಲಿಯೂ ಕೂಡ ಹೆಣ್ಣು ಮಕ್ಕಳು ಈಗ ಹೆಚ್ಚು ಸುಶಿಕ್ಷಿತರಾಗುತ್ತಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆ ಎಂದು ತಿಳಿಸಿದರು.

ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ ೩೭೧ ನ್ನು ರದ್ದು ಪಡಿಸಿದ ಮೇಲೆ ಚಿತ್ರಣವೇ ಬದಲಾಗಿದೆ. ದೇಶ ವಿದೇಶಗಳ ಉದ್ಯಮಿಗಳು ಜಮ್ಮು ಕಾಶ್ಮೀರದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಿದ್ದಾರೆ. ಕಾಶ್ಮಿರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದು ಅಲ್ಪಸಂಖ್ಯಾತರ ಬಗ್ಗೆ ಮೋದಿ ಅವರಿಗಿರುವ ನಿಜವಾದ ಕಾಳಜಿಯಾಗಿದೆ ಎಂದರು.
ಮೇದೆಹಳ್ಳಿಯಲ್ಲಿ ಅಲ್ಪಸಂಖ್ಯಾತರಿಗಾಗಿ ಮಂಜೂರಾಗಿರುವ ಹಾಸ್ಟೆಲ್ ಕಟ್ಟಡ ಗುಣಮಟ್ಟದಿಂದ ಕೂಡಿರಲಿ
, ಯಾವುದೇ ಕಾರಣಕ್ಕೂ ಕಾಮಗಾರಿ ಅನುಷ್ಟಾನದಲ್ಲಿ ರಾಜೀಯಿಲ್ಲ, ಅನುಷ್ಟಾನಾಧಿಕಾರಿಗಳಾದ ಕರ್ನಾಟಕ ಹೌಸಿಂಗ್ ಬೋರ್ಡ್‌ನವರು ನಿಗಾ ವಹಿಸಿ ಕಾಮಗಾರಿ ಅನುಷ್ಟಾನಗೊಳಿಸಿ ಎಂದರು.

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮಾಧುರಿ ಗಿರೀಶ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಸಿ ಹನುಮಂತೇಗೌಡ, ಪ್ರಥಮ ದರ್ಜೆ ಗುತ್ತಿಗೆದಾರ ಪಿ.ಶ್ರೀನಿವಾಸ್, ಮದೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಮತಿ ಕಾವ್ಯ ವಿಜಯಕುಮಾರ್, ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ರೇಖಾ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಬಸವರಾಜ್, ಸಹಾಯಕ ಕಾರ್ಯಪಾಲಕ ಅಭಿಯಂತರ ಸುನಿಲ್, ತಾಪಂ ಇಒ ರವಿಕುಮಾರ್, ಮದೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.

 

 

Share This Article
error: Content is protected !!
";