ಕೂರಿಸಿದ್ದ ಗಣಪತಿ ರಾತ್ರೋ ರಾತ್ರಿ ಕದ್ದ ಕಳ್ಳರು

News Desk

ಚಂದ್ರವಳ್ಳಿ ನ್ಯೂಸ್, ಜಗಳೂರು:
ಗಣೇಶ ಮೂರ್ತಿಯನ್ನೇ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಯರಗಕಟ್ಟೆ ಗ್ರಾಮದಲ್ಲಿ ನಡೆದಿದೆ.

ಗಣೇಶ ಮೂರ್ತಿಗಳನ್ನು ತಂದು ಪ್ರತಿಷ್ಠಾಪಿಸಿ, ಅದ್ಧೂರಿಯಾಗಿ ಹಬ್ಬ ಆಚರಣೆ ಮಾಡಲಾಗುತ್ತಿದೆ. ಆದರೆ, ಯರಗಕಟ್ಟೆ ಗ್ರಾಮದಲ್ಲಿ ರಾತ್ರೋರಾತ್ರಿ ಗಣಪತಿ ಮೂರ್ತಿಯನ್ನೇ ಕಳವು ಮಾಡಿರುವ ಬಗ್ಗೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

- Advertisement - 

ರಾತ್ರೋರಾತ್ರಿ ಕಳ್ಳತನ:
ಗ್ರಾಮಸ್ಥರೆಲ್ಲ ಸೇರಿಕೊಂಡು ಕಳೆದ ದಿನವಷ್ಟೇ ಸಂಭ್ರಮದಿಂದ ಒಟ್ಟಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ
, ಭಕ್ತಿ ಸಮರ್ಪಿಸಿದ್ದೆವು. ರಾತ್ರಿ ಪೂಜೆ ಸಲ್ಲಿಸಿದ ನಂತರ ಎಲ್ಲರೂ ತಮ್ಮ ತಮ್ಮ ಮನೆಗೆ ಹೋಗಿದ್ದರು.

ಆದರೆ,ಯಾರೂ ಇಲ್ಲದ ವೇಳೆ, ರಾತ್ರೋರಾತ್ರಿ ಕಳ್ಳರು ಗಣಪತಿ ಮೂರ್ತಿಯನ್ನು ಕಳ್ಳತನ ಮಾಡಿಕೊಂಡು ಕಾಲ್ಕಿತ್ತಿದ್ದಾರೆ.‌ಮರುದಿನ ಬೆಳಗ್ಗೆ ಗಣೇಶನಿಗೆ ಪೂಜೆ ಸಲ್ಲಿಸಲು ಟೆಂಟ್ ಬಳಿ ಬಂದಾಗ ಮೂರ್ತಿ ಕಳವು ಆಗಿರುವುದು ಬೆಳಕಿಗೆ ಬಂದಿದೆ.

- Advertisement - 

ಗಣೇಶ ಇಲ್ಲದೆ ಇರುವುದನ್ನು ಕಂಡು ಜನರು ಆಘಾತಕ್ಕೆ ಒಳಗಾಗಿದ್ದಾರೆ ಎಂದು ಗ್ರಾಮದ ಮುಖಂಡರು ಅಳಲು ತೋಡಿಕೊಂಡಿದ್ದಾರೆ.

ಗಣೇಶ ಮೂರ್ತಿ ಕಳವಾದರೆ ಗ್ರಾಮಕ್ಕೆ ಒಳ್ಳೆದಾಗಲ್ಲ ಅಂತ ಅಪ್ಪ-ಪಕ್ಕದ ಊರಿನವರು ಮಾತನಾಡಿಕೊಳ್ಳುತ್ತಿರುವುದರಿಂದ ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಗಣೇಶ ಮೂರ್ತಿಯನ್ನು ಹುಡುಕಿ ಕೊಡುವಂತೆ ಹಾಗೂ ಮೂರ್ತಿಯನ್ನು ಕದ್ದ ಖದೀಮರಿಗೆ ತಕ್ಕ ಶಿಕ್ಷೆ ನೀಡುವಂತೆ ಯರಗಕಟ್ಟೆ ಗ್ರಾಮಸ್ಥರು ಜಗಳೂರು ಪೊಲೀಸ್​ ಠಾಣೆಗೆ ತೆರಳಿ, ಮನವಿ ಮಾಡಿಕೊಂಡಿದ್ದಾರೆ.

 

Share This Article
error: Content is protected !!
";