ಗಾಂಧಿ ಕುಟುಂಬ ದೇಶಕ್ಕೆ ನೀಡಿದ ಕೊಡುಗೆ ಅಪಾರ-ಡಿಸಿಎಂ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಭಾರತ್ ಜೋಡೋ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಪಾಲ್ಗೊಂಡು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು
ಮಾತನಾಡಿದರು.

- Advertisement - 

ಗಾಂಧಿ ಕುಟುಂಬ ದೇಶಕ್ಕೆ ನೀಡಿದ ಕೊಡುಗೆ ಹಾಗೂ ಅವರು ಮಾಡಿದ ತ್ಯಾಗವನ್ನು ಭಾರತ ಎಂದೂ ಕೂಡ ಮರೆಯುವುದಿಲ್ಲ. ದೇಶದಲ್ಲಿ ಬರಗಾಲ ತಾಂಡವವಾಡುವಾಗ ಜನಪರ ಯೋಜನೆಗಳನ್ನು ಇಂದಿರಾ ಗಾಂಧಿ ಅವರು ಜಾರಿಗೆ ತಂದು ಜನರನ್ನು ಸಂಕಷ್ಟದಿಂದ ಪಾರು ಮಾಡಿದರು ಎಂದು ಡಿ.ಕೆ.ಶಿವಕುಮಾರ್ ಸ್ಮರಿಸಿದರು.

- Advertisement - 

ಇದಲ್ಲದೆ ಉಳುವವನೇ ಭೂಮಿಯ ಒಡೆಯ, ಬ್ಯಾಂಕ್‌ಗಳ ರಾಷ್ಟ್ರೀಕರಣ, ಅಂಗನವಾಡಿ, ಬಡವರಿಗೆ ಮನೆ, ನಿವೇಶನ, ಪಡಿತರ ಯೋಜನೆ ಸೇರಿದಂತೆ ಹಸಿವಿನಿಂದ ಜ್ಞಾನದವರೆಗೂ ಹಲವು ಕಲ್ಯಾಣ ಯೋಜನೆಗಳನ್ನು ಅವರು ಜಾರಿಗೆ ತಂದಿದ್ದಾರೆ.

ಚುನಾವಣೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ ಈ ದೇಶವನ್ನು ಗಟ್ಟಿಗೊಳಿಸುವುದು ಮುಖ್ಯ ಎನ್ನುವ ಇಂದಿರಾ ಗಾಂಧಿ ಅವರ ಮಾತು ಇಂದಿಗೂ ಪ್ರಸ್ತುತ. ಅವರನ್ನು ಸ್ಫೂರ್ತಿ, ಮಾರ್ಗದರ್ಶನವಾಗಿಟ್ಟುಕೊಂಡು ಕಾಂಗ್ರೆಸ್‌ಸರ್ಕಾರ ಇಂದಿರಾ ಕ್ಯಾಂಟೀನ್‌ಹಾಗೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಗ್ಯಾರಂಟಿಗಳು ಇಡೀ ದೇಶಕ್ಕೆ ಮಾದರಿಯಾಗಿವೆ ಎಂದು ಎಂದು ಶಿವಕುಮಾರ್ ತಿಳಿಸಿದರು.

- Advertisement - 

Share This Article
error: Content is protected !!
";