ಲಾವಣ್ಯ ಶಿಕ್ಷಣ ಸಂಸ್ಥೆಯಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಲಾವಣ್ಯ ಸಂಯುಕ್ತ ಪದವಿಪೂರ್ವ ಕಾಲೇಜು ಪದವಿ ಕಾಲೇಜು ಬಿಎಡ್ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಮಹಾತ್ಮಾ ಗಾಂಧಿಯವರ ಜಯಂತಿ ಕಾರ್ಯಕ್ರಮ ನಡೆಯಿತು ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ವಿಶ್ವಾಸ್ ಹನುಮಂತೇಗೌಡ ರವರು ಗಾಂಧಿಜೀ ಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದು ಭಾರತ ದೇಶ ಅಷ್ಟೇ ಅಲ್ಲದೆ ವಿದೇಶಗಳಲ್ಲೂ ಮಹಾತ್ಮ ಗಾಂಧಿಯವರ ಜಯಂತಿ ಆಚರಿಸುತ್ತಾರೆ ಗಾಂಧಿ ತತ್ವಗಳನ್ನು ವಿದೇಶಗಳಲ್ಲೂ ಪಾಲಿಸುತ್ತಿರುವುದು ನಮ್ಮ ಭಾರತೀಯರ ಸೌಭಾಗ್ಯ ಎಲ್ಲರೂ ಸತ್ಯ ಮಾರ್ಗದಲ್ಲಿ ನಡೆಯುವ ಸಂಕಲ್ಪವನ್ನು ಸ್ವೀಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

- Advertisement - 

     ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜು ಪ್ರಾಂಶುಪಾಲ ಎಂ ಸಿ ಮಂಜುನಾಥ್ ಮಾತನಾಡಿ ಗಾಂಧಿಯವರ ಅಹಿಂಸಾತ್ಮಕ ಚಳುವಳಿಯು ಭಾರತದ ಅನೇಕ ಜನರನ್ನು ಸತ್ಯ ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡಿತು

ಹಾಗೂ ಸ್ವತಃ ಗಾಂಧಿಯವರು “ಸತ್ಯಹರಿಶ್ಚಂದ್ರ”ನಾಟಕವನ್ನು ನೋಡಿದ ನಂತರ ನಾನು ಸಹ ಹರಿಶ್ಚಂದ್ರನಂತೆ ಸತ್ಯ ಮಾರ್ಗದಲ್ಲಿ ನಡೆಯುತ್ತೆನೆ ಎಂದು ಶಪಥ ಮಾಡಿ ಅದರಂತೆ ಕೊನೆಯ ವರೆಗೂ ಸತ್ಯ ಮಾರ್ಗದಲ್ಲಿ ನಡೆಯುವ ಮೂಲಕ ನಮ್ಮೆಲ್ಲರ ಅಚ್ಚುಮೆಚ್ಚಿನ ಗಾಂಧಿಯವರಾದರು ಎಂದು ಹೇಳಿದರು.

- Advertisement - 

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಯಶೋದಮ್ಮ ಹನುಮಂತೇಗೌಡ ಆಡಳಿತ ಮಂಡಳಿಯ ಸದಸ್ಯರಾದ ಶೃತಿಯವರು ಜೀವಿತವಿಶ್ವಾಸ್ ಬಿಎಡ್ ಕಾಲೇಜು ಪ್ರಾಂಶುಪಾಲ ಪ್ರೊ ಜಿ ಕೃಷ್ಣಮೂರ್ತಿ ಉಪನ್ಯಾಸಕರಾದ ಪ್ರಕಾಶ್ ಆಶಾ ಅನುಷಾ ಆರ್ ಎಲ್ ರಶ್ಮಿ ಎನ್ ಅನು ಮೀನಾ, ಗಂಗಮೂರ್ತಿ,  ಕಾರ್ತೀಕ್, ಗುರುಪ್ರಸಾದ್,  ಮಹಾದೇವ್, ರಾಕೇಶ್ ಪ್ರೌಢಶಾಲಾ ಮುಖ್ಯ ಶಿಕ್ಷಕ ಅರುಣ್ ಕುಮಾರ್ ಗ್ರಂಥಪಾಲಕ ಸತೀಶ್ ತ್ರಿಭುವನ್  ಸಂಸ್ಥೆಯ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

 

Share This Article
error: Content is protected !!
";