ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು :
ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಲಿಪಿಕ ನೌಕರರ ವಾಹನ ಚಾಲಕರ ಮತ್ತು ಗ್ರೂಪ್ ಡಿ ನೌಕರರ ಸಂಘದ ಚುನಾವಣೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
೨೦೨೪-೨೦೨೯ನೇ ಸಾಲಿನ ಜಿಲ್ಲಾ ಪದಾಧಿಕಾರಿಗಳ ಸ್ಥಾನಕ್ಕೆ ಆ.೯ರಂದು ಚಿಕ್ಕಮಗಳೂರಿನಲ್ಲಿ ಚುನಾವಣೆ ನಡೆದಿದ್ದು, ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಅಧ್ಯಕ್ಷರಾಗಿ ಟಿ.ಗಣೇಶ್, ಬಿ.ಆರ್.ಚೇತನ್, ಎಸ್.ಟಿ.ಪೂರ್ಣೇಶ್, ಉಪಾಧ್ಯಕ್ಷರಾಗಿ ಪಿ.ಟಿ.ನವೀನ್, ಎಂ.ಜಿ.ಯಶವಂತ್, ಖಜಾಂಚಿಯಾಗಿ ಎಂ.ಎಸ್.ಮಂಜುನಾಥ್, ಎಂ.ಶ್ರೀನಿವಾಸ್, ಕಾರ್ಯದರ್ಶಿಯಾಗಿ ಡಿ.ಸತೀಶ್, ಸುಬ್ರಮಣಿ, ಸಹಕಾರ್ಯದರ್ಶಿಯಾಗಿ ಎಂ.ಮೊಹಮ್ಮದ್ ಉಸ್ನಾನ್, ಸಿ.ಆರ್.ಸದಾಶಿವ ಅವರನ್ನು ಪದಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ.

