ಕೊಳಗೇರಿಗಳಿಗೆ ಇ-ಸ್ವತ್ತು ನೀಡುವಂತೆ ಗಣೇಶ್ ಏಕಾಂಗಿ ಧರಣಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕೊಳಗೇರಿ ನಿವಾಸಿಗಳಿಗೆ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯಿಂದ ಹಕ್ಕುಪತ್ರಗಳನ್ನು ವಿತರಿಸಿದ್ದು
, ಇ-ಸ್ವತ್ತು ಇಲ್ಲದ ಕಾರಣ ನೊಂದಣಿ ಮಾಡಿಸಿಕೊಳ್ಳಲು ಆಗುತ್ತಿಲ್ಲ.

- Advertisement - 

ಅದಕ್ಕಾಗಿ ಕೂಡಲೆ ಖಾತೆ ಮಾಡಿ ಇ-ಸ್ವತ್ತು ನೀಡುವಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾಧ್ಯಕ್ಷ ಗಣೇಶ್ ಸೋಮವಾರ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.

- Advertisement - 

ಕೊಳಗೇರಿ ನಿವಾಸಿಗಳು ಇ-ಸ್ವತ್ತು ಕೇಳಿದರೆ ಕ್ರಯಪತ್ರವಿಲ್ಲದೆ ಇ-ಸ್ವತ್ತು ಕೊಡುವುದಿಲ್ಲವೆಂದು ನಗರಸಭೆಯವರು ಉತ್ತರಿಸುತ್ತಿದ್ದಾರೆ.

ಕೂಡಲೆ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಹಾಗೂ ನಗರಸಭೆ ಪೌರಾಯುಕ್ತರ ಜಂಟಿ ಸಭೆ ನಡೆಸಿ ಕೊಳಗೇರಿಗಳಿಗೆ ಇ-ಸ್ವತ್ತು ಕೊಟ್ಟು ನೆಮ್ಮದಿಯ ಜೀವನ ನಡೆಸುವಂತ ಅವಕಾಶ ಕಲ್ಪಿಸುವಂತೆ ಗಣೇಶ್ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.

- Advertisement - 

 

 

Share This Article
error: Content is protected !!
";