ಗಣೇಶ ವಿಸರ್ಜನೆ ವೇಳೆ ಟ್ರಕ್ ಹರಿದು 10 ಮಂದಿ ಸಾವು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ದುರಂತದಲ್ಲಿ 10 ಮಂದಿ ಸಾವನ್ನಪ್ಪಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಜರುಗಿದೆ.

ಸುದ್ದಿ ತಿಳಿದ ಕೂಡಲೇ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್ ಶುಕ್ರವಾರ ತಡರಾತ್ರಿಯೇ ಬೆಂಗಳೂರಿನಿಂದ ಹಾಸನಕ್ಕೆ ಆಗಮಿಸಿ ಹಿಮ್ಸ್ ಜಿಲ್ಲಾಸ್ಪತ್ರೆಗೆ ಭೇಟಿ‌ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.

- Advertisement - 

 ಗಾಯಾಳುಗಳ ಆರೋಗ್ಯ ವಿಚಾರಿಸಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಹಾಸನ ತಾಲೂಕಿನ ಮೊಸಳೆ ಹೊಸಳ್ಳಿಯಲ್ಲಿ ಗಣೇಶ ವಿಸರ್ಜನಾ ಸಂಭ್ರಮದಲ್ಲಿ ಈ ರೀತಿಯ ಆಘಾತವುಂಟಾಗಿರುವುದು ದುಃಖದ ವಿಚಾರ. ಆದಷ್ಟು ಬೇಗ ಎಲ್ಲರೂ ಗುಣಮುಖರಾಗಲಿ ಎಂದು ನಿಖಿಲ್ ಕುಮಾರಸ್ವಾಮಿ ಹಾರೈಸಿದರು.
ಈ ಸಂದರ್ಭದಲ್ಲಿ ನೊಂದ ಕುಟುಂಬಕ್ಕೆ ನೆರವು ನೀಡಿ ಧೈರ್ಯ ತುಂಬಿದರು.

ದುರಂತವಾಗಿ ಪ್ರಾಣ ಕಳೆದುಕೊಂಡ ಮಕ್ಕಳ ದುಃಖಿತ ಪೋಷಕರನ್ನು ಭೇಟಿ ಮಾಡಲು ಅವರು ಹಾಸನಕ್ಕೆ ಧಾವಿಸಿದರು. ಗಣೇಶ ವಿಸರ್ಜನಾ ಮೆರವಣಿಗೆಗೆ ಟ್ರಕ್ ಡಿಕ್ಕಿ ಹೊಡೆದ ದೃಶ್ಯವನ್ನು ನೋಡಿದ ಅವರು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದರು ಮತ್ತು ಅಕ್ಷರಶಃ ನಡುಗಿ ಹೋದರು. ಅಪಘಾತದ  ದೃಶ್ಯವು ತುಂಬಾ ಭಯಾನಕ, ಹೃದಯ ವಿದ್ರಾವಕವಾಗಿತ್ತು ಎಂದು ನಿಖಿಲ್ ಅವರು ಕಣ್ಣೀರು ಹಾಕಿದ್ದಾರೆ.

- Advertisement - 

ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಿಂದ ಪದವಿ ಪಡೆಯುವ ಅಂಚಿನಲ್ಲಿದ್ದ ಮಕ್ಕಳು. ಅವರು ಕೇವಲ ಪ್ರತಿಭಾವಂತ ವಿದ್ಯಾರ್ಥಿಗಳಲ್ಲ, ಬದಲಿಗೆ ಅವರ ಕುಟುಂಬಗಳ ಭವಿಷ್ಯದ ವರಸದಾರರು ಮತ್ತು ರಾಷ್ಟ್ರದ ಭರವಸೆಯಾಗಿದ್ದರು.

ಬದುಕು ಕಟ್ಟಿಕೊಳ್ಳುವ ಕನಸಿನಲ್ಲಿದ್ದ ಯುವಕರ ಅಕಾಲಿಕ ಸಾವು ಅತ್ಯಂತ ದುಃಖಕರ. ಯೌವನದಲ್ಲಿ ಹೆತ್ತವರನ್ನು ನೋಡಿಕೊಳ್ಳಬೇಕಾದವರು ವಿಧಿಯಾಟಕ್ಕೆ ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿ.

ಇದು ಅವರ ಪ್ರೀತಿ ಪಾತ್ರರಿಗೆ ಮತ್ತು ನಮ್ಮ ಇಡೀ ದೇಶಕ್ಕೆ ತುಂಬಲಾಗದ ನಷ್ಟ. ಈಗಲೂ ಸಹ, ಇಂತಹ ಅನ್ಯಾಯ ಮತ್ತು ಅರ್ಥಹೀನ ಸಾವುಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ಭಾವುಕರಾದರು.

ದುಃಖಿತ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು. ನಾವು ನ್ಯಾಯವನ್ನು ಕೋಡಬೇಕು, ದುಃಖದಲ್ಲಿ ಒಗ್ಗಟ್ಟಾಗಿರಬೇಕು ಮತ್ತು ಇಂತಹ ದುರಂತಗಳು ಎಂದಿಗೂ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು.

ಈ ಕಷ್ಟದ ಸಮಯದಲ್ಲಿ ಸದಾ ಅವರೊಂದಿಗೆ ಇರುತ್ತೇನೆ ಎಂದು ಧೈರ್ಯ ತುಂಬುತ್ತೇನೆ. ಈ ನೋವಿನ ಕ್ಷಣದಲ್ಲಿ ದುಃಖಿತ ಕುಟುಂಬಗಳ ಜೊತೆ ನಾವೆಲ್ಲರೂ ಇದ್ದೇವೆ ಎಂದು ಅವರು ಭರವಸೆ ನೀಡಿದರು.

ರಾಜ್ಯ ಸರ್ಕಾರ 5 ಲಕ್ಷ ಪರಿಹಾರ ಘೋಷಣೆ ಮಾಡಿರುವುದು ಸ್ವಾಗತರ್ಹ. ಆದರೆ ಮಾನವೀಯತೆ ದೃಷ್ಟಿಯಿಂದ ಮೃತರ ಕುಟುಂಬಗಳಿಗೆ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ಇನ್ನು ಹೆಚ್ಚಿನ ಪರಿಹಾರ ಘೋಷಿಸಿಬೇಕು ಎಂದು ನಿಖಿಲ್ ಆಗ್ರಹಿಸಿದರು.

Share This Article
error: Content is protected !!
";