ತೂಬಗೆರೆ ಗ್ರಾಮದಲ್ಲಿ ಸಂಭ್ರಮದ ಗಣೇಶೋತ್ಸವ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ತೂಬಗೆರೆ ಗ್ರಾಮದಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. 
ವಿಘ್ನ‌ವಿನಾಶಕನ ಆರಾಧನೆಯ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದಾದ್ಯಂತ ಸಂಭ್ರಮ ಮನೆ ಮಾಡಿದೆ. ಇತರೆಡೆಗಳಂತೆ ಮನೆ ಮನೆಗಳಲ್ಲಿ ಹಾಗು ಬೀದಿ,ಬೀದಿಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು  ದೀಪಾಲಂಕಾರ ಹೂವಿನ ಅಲಂಕಾರ  ವಿವಿಧ ರೀತಿಯ ಮೋಧಕ  ನೈವೇದ್ಯ  ಅಭಿಷೇಕ ಗಣೇಶನ ದರ್ಶನಕ್ಕೆ ಬಂದ ಭಕ್ತರಿಗೆ ಮಂಗಳಾರತಿ ಪ್ರಸಾದ ನೀಡಲಾಯಿತು.

 ವಿವಿಧ  ವಿನಾಯಕ ಮಂಡಳಿಗಳು ಪಟ್ಟಣದಲ್ಲಿ 10 ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.  

ಗ್ರಾಮದ ಮಧ್ಯಭಾಗದಲ್ಲಿ ಪ್ರತಿಷ್ಠಾಪಿಸಿರುವ ಚಾವಡಿ ಗಣೇಶನ ಉಯ್ಯಾಲೆ ಅಲಂಕಾರ, ನೋಡುಗರ ಮನಸೂರೆಗೊಳಿಸುತ್ತಿದೆ. ಒಂದಕ್ಕೆ ಮೀರಿಸುವಂತೆ ಇನ್ನೊಂದರ ವಿದ್ಯುತ್ ದೀಪ ಅಲಂಕಾರಪ್ರತಿ ಗಲ್ಲಿ ಗಲ್ಲಿಗಳಲ್ಲೂ  ಗಣಪತಿಗೆ  ಜಯಕಾರ  ಚಿನ್ನರ  ಸಂಭ್ರಮಕ್ಕೆ  ಸಾಕ್ಷಿಯಾಯಿತು.

 

- Advertisement -  - Advertisement - 
Share This Article
error: Content is protected !!
";