ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಗಂಗಮ್ಮ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿರಿಯೂರು ತಹಶೀಲ್ದಾರರ ಕಚೇರಿ ದ್ವಿತೀಯ ದರ್ಜೆ ಸಹಾಯಕ ಶ್ರೀನಿವಾಸ ರೆಡ್ಡಿ ಅವರ ತಾಯಿ ಟಿ.ಗಂಗಮ್ಮ (75) ಶುಕ್ರವಾರ ಮರಣ ಹೊಂದಿದ್ದು, ಕುಟುಂಬಸ್ಥರ ಸ್ವ ಇಚ್ಛೆಯಂತೆ ಅವರ ಎರಡು ಕಣ್ಣುಗಳನ್ನು ದಾನ ಮಾಡಲಾಗಿದೆ.

ಕುಟುಂಬಸ್ಥರ ಸ್ವ ಇಚ್ಛೆಯಂತೆ ಅವರ ಎರಡು ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿ ಶ್ರೀ ಬಸವ ಜ್ಯೋತಿ ಬ್ಯಾಂಕ್ಗೆ ಸಂಪರ್ಕ ಸಾಧಿಸಿ ಡಾ. ವೆನಿಲ್ಲಾ ಅವರ ಸಹಯೋಗದೊಂದಿಗೆ ದಿವಂಗತರ ಕಣ್ಣುಗಳು ಅಂಧರ ಬಾಳಿಗೆ ಬೆಳಕು ನೀಡುವಂತಹ ಮಹತ್ತರ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿಯೂರು ಶಾಖೆಯ ಅಧ್ಯಕ್ಷ ಆರ್.ರಮೇಶ್ ಮೆಚ್ಚುಗೆ ವ್ಯಕ್ತಪಡಿಸಿ, ದಿವಂಗತರ ಕುಟುಂಬದವರಿಗೆ ಸಾಂತ್ವನ ನೀಡುವ ಮೂಲಕ ಧೈರ್ಯ ತುಂಬಿದರು.  

ಹಿರಿಯೂರು ತಹಶೀಲ್ದಾರ್ ರಾಜೇಶ್ ಕುಮಾರ್ ಕುಟುಂಬಸ್ಥರಿಗೆ ಪ್ರಶಂಸಾ ಪತ್ರ ವಿತರಿಸಿದರು. ಹಿರಿಯೂರು ಶಾಖೆಯ ಗೌರವಾಧ್ಯಕ್ಷ ತಿಪ್ಪೇಸ್ವಾಮಿ, ಬ್ಯಾಂಕ್ ನಿರ್ದೇಶಕ ವೀರೇಶ್, ವೆಂಕಟಸ್ವಾಮಿ ಹಾಗೂ ದಿವಂಗತರ ಪುತ್ರ ಶ್ರೀನಿವಾಸ ರೆಡ್ಡಿ ಅವರು ತಮ್ಮ ತಾಯಿಯ ಆಗಲಿಕೆಯ ನೋವಿನಲ್ಲೂ ಸಹ ಮಹತ್ಕಾರ್ಯದಲ್ಲಿ ಭಾಗಿಯಾಗಿದ್ದರು.

 

Share This Article
error: Content is protected !!
";