ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಾಪಿ ಪಾಕಿಸ್ತಾನದ ಮತಾಂಧ ಮುಸ್ಲಿಂ ಉಗ್ರರಿಗೆ ಮಿಡಿಯುತ್ತಿರುವ ಕರ್ನಾಟಕ ಕಾಂಗ್ರೆಸ್ ಪಕ್ಷದ ಹೃದಯಗಳು ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿಗೆ ಹಿಂದುತ್ವವೇ ಕಾರಣ: @irobertvadra
ಯುದ್ದದ ಅವಶ್ಯಕತೆ ಇಲ್ಲ. ನಾವು ಶಾಂತಿಯ ಪರ: ಸಿಎಂ ಸಿದ್ದರಾಮಯ್ಯ,ಎಲ್ಲಾ ಧರ್ಮದಲ್ಲೂ ಹಾದಿ ತಪ್ಪಿದವರಿದ್ದಾರೆ: ಸಚಿವ ಪ್ರಿಯಾಂಕ್ ಖರ್ಗೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದಿದ್ದೇ ಪಹಲ್ಗಾಮ್ ನರಮೇಧಕ್ಕೆ ಕಾರಣ: ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ದಾಳಿಕೋರರು ಧರ್ಮ ಕೇಳಿ ಕೂರುತ್ತಾರಾ? : ಅಬಕಾರಿ ಸಚಿವ ಅರ್.ಬಿ.ತಿಮ್ಮಾಪುರ ಈರೀತಿಯ ಹೇಳಿಕೆಗಳನ್ನು ಕಾಂಗ್ರೆಸ್ ನಾಯಕರು ನೀಡುವ ಮೂಲಕ ದೇಶದಲ್ಲಿ ಅನಗತ್ಯ ಆತಂಕ ಸೃಷ್ಠಿಸಿದ್ದಾರೆಂದು ಅಶೋಕ್ ಟೀಕಿಸಿದರು.