ಟೋಲ್ ತಪ್ಪಿಸಲು ಅಡ್ಡ ದಾರಿ ಹಿಡಿದ ಕಸದ ಲಾರಿಗಳು

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಟೋಲ್ ಸುಂಕ ತಪ್ಪಿಸಲು ಬಿಬಿಎಂಪಿ ಕಸದ ಲಾರಿಗಳು ಕಳ್ಳ ದಾರಿಯನ್ನ ಹಿಡಿದಿವೆ
, ದೊಡ್ಡಬಳ್ಳಾಪುರದ ಮೂಲಕ ಕಸದ ಲಾರಿಗಳು ಹಾದು ಹೋಗುತ್ತಿದ್ದು, ಕಸದ ಲಾರಿಗಳ ವಾಸನೆಯಿಂದ ಬೇಸತ್ತ ಗ್ರಾಮಸ್ಥರು ಕಸದ ಲಾರಿಗಳ ತಡೆದಿದ್ದಾರೆ, ಲಾರಿಗಳನ್ನ ಸೀಜ್ ಮಾಡುವಂತೆ ಒತ್ತಾಯಿಸುತ್ತಿರುವ ಗ್ರಾಮಸ್ಥರು ರಸ್ತೆಯಲ್ಲಿ ಕೂತು ಪ್ರತಿಭಟನೆ ನಡೆಸಿದ್ದಾರೆ. 

ದೊಡ್ಡಬಳ್ಳಾಪುರ ಬೆಂಗಳೂರು ಮಹಾನಗರದ ಬಳಿ ಇರುವುದೇ ದೊಡ್ಡ ಶಾಪವಾಗಿದೆ, ಇಡೀ ಬೆಂಗಳೂರಿನ ಕಸ ಸುರಿಯುವ ಡಂಪಿಂಗ್ ಯಾರ್ಡ್ ಆಗಿ ಬದಲಾಗಿದೆ, ಸದ್ಯ ತಾಲೂಕಿನ ಎಂಎಸ್ ಜಿಪಿ ಘಟಕದಲ್ಲಿ ಬಿಬಿಎಂಪಿ ಕಸವನ್ನ ಸುರಿಯಲಾಗುತ್ತಿದೆ.

ಎಂಎಸ್ ಜಿಪಿ ಘಟಕವನ್ನ ಮುಚ್ಚಿಸುವಂತೆ ಹೋರಾಟ ಮಾಡಲಾಗುತ್ತಿದೆ, ಈ ನಡುವೆ ಬಿಬಿಎಂಪಿ ಕಸದ ಲಾರಿಗಳು ದೊಡ್ಡಬಳ್ಳಾಪುರವನ್ನ ಪ್ರವೇಶಿ ಡಂಪಿಂಗ್ ಯಾರ್ಡ್ ಕಡೆ ಸಂಚಾರಿಸುತ್ತಿವೆ, ಇದು ಸ್ಥಳೀಯರ ಅಕೋಶಕ್ಕೆ ಕಾರಣವಾಗಿದೆ. 

 ದೊಡ್ಡಬಳ್ಳಾಪುರ ಹೊರವಲಯದ ಕೊಡಿಗೇಹಳ್ಳಿ ಬಳಿ ಕಸದ ಲಾರಿಗಳನ್ನ ತಡೆದ ಗ್ರಾಮಸ್ಥರು ರಸ್ತೆಯಲ್ಲಿ ಕೂತು ಪ್ರತಿಭಟನೆ ನಡೆಸಿದರು.

ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ನಗರಸಭಾ ಸದಸ್ಯರಾದ ವೆಂಕಟೇಶ್ ಬಂತಿಯವರು. ಎಂಎಸ್ ಜಿಪಿ ಘಟಕದ ವಾಸನೆಗೆ ಬೇಸತ್ತ ಸುತ್ತಮುತ್ತಲಿನ ಗ್ರಾಮಸ್ಥರು ಗುಳೆ ಹೋಗುತ್ತಿದ್ದಾರೆ. ಶಾಸಕರಾದ ಧೀರಜ್ ಮುನಿರಾಜುರವರು ಎಂಎಸ್ ಪಿಜಿ ಘಟಕವನ್ನ ಮುಚ್ಚಿಸಲು ಸರ್ಕಾರಕ್ಕೆ ಮನವಿ ಮಾಡಿದ್ದು, ವಿಧಾನಸಭೆಯಲ್ಲೂ ಮಾತನಾಡಿದ್ದಾರೆ.

ಬಿಬಿಎಂಪಿ ಕಸದ ಲಾರಿಗಳಿಗೆ ಪ್ರಮೀಟ್ ಇಲ್ಲದೆ ಇದ್ರು ಯಲಹಂಕ ಮಾರ್ಗವಾಗಿ ದೊಡ್ಡಬಳ್ಳಾಪುರವನ್ನ ಪ್ರವೇಶಿಸುತ್ತಿವೆ, ಪ್ರತಿದಿನ ಸುಮಾರು 50ಕ್ಕೂ ಹೆಚ್ಚು ಲಾರಿಗಳು ದೊಡ್ಡಬಳ್ಳಾಪುರ ಮೂಲಕ ಹಾದು ಹೋಗುತ್ತಿವೆ, ಕಸದ ಲಾರಿಗಳ ಓಡಾಟದಿಂದ ಗ್ರಾಮಗಳ ರಸ್ತೆಗಳು ಹಾಳಾಗಿವೆ, ಜೊತೆಗೆ ಲಾರಿ ಚಾಲಕರ ಡ್ರಿಂಕ್ ಅಂಡ್ ಡ್ರೈವ್ ನಿಂದ ಅಮಾಯಕರು ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ, ಕಸದ ಲಾರಿಗಳನ್ನ ಸೀಜ್ ಮಾಡುವ ಮೂಲಕ ಬಿಬಿಎಂಪಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡ ಬೇಕೆಂದು ಆಗ್ರಹಿಸಿದರು. 

 ಗ್ರಾಮ ಪಂಚಾಯತ್ ಸದಸ್ಯ ಪ್ರಭು ಮಾತನಾಡಿ, ಈ ಹಿಂದೆ ಬಿಬಿಎಂಪಿ ಕಸದ ಲಾರಿಗಳು ಕೊಡಿಗೇಹಳ್ಳಿ ಮಾರ್ಗವಾಗಿಯೇ ಸಂಚಾರಿಸುತ್ತಾ ಇದ್ದವು, ಅಂದಿನ ಶಾಸಕರಾದ ನರಸಿಂಹಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ಮಾಡುವ ಮೂಲಕ ಬಿಬಿಎಂಬಿ ಕಸದ ಲಾರಿಗಳು ದೊಡ್ಡಬಳ್ಳಾಪುರ ಪ್ರವೇಶಿಸದಂತೆ ಆದೇಶಿಸಲಾಗಿತ್ತು,

ಇದೀಗ ಟೋಲ್ ಸುಂಕವನ್ನ ತಪ್ಪಿಸುವ ಕಾರಣಕ್ಕೆ ಕಳ್ಳದಾರಿಯ ಮೂಲಕ ಬಿಬಿಎಂಪಿ ಕಸದ ಲಾರಿಗಳು ದೊಡ್ಡಬಳ್ಳಾಪುರವನ್ನ ಪ್ರವೇಶಿಸುತ್ತಿವೆ, ಯಾವುದೇ ಕಾರಣಕ್ಕೂ ನಮ್ಮೂರಿನ ಮೂಲಕ ಕಸದ ಲಾರಿಗಳು ಸಂಚಾರಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆಯನ್ನ ನೀಡಿದರು.

 

 

- Advertisement -  - Advertisement -  - Advertisement - 
Share This Article
error: Content is protected !!
";