ಗ್ಯಾಸ್ ಸಿಲಿಂಡರ್ ಸ್ಫೋಟ ನೂರಾರು ಹಾಸಿಗೆಗಳು ಭಸ್ಮ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ದೇವನಹಳ್ಳಿ ರಸ್ತೆಯ ರಾಜಶ್ರೀ ಕಂಫರ್ಟ್ ಬಳಿಯ ಟೀ ಅಂಗಡಿ ಬಳಿ ಗ್ಯಾಸ್‌ಸಿಲಿಂಡರ್ ಸ್ಫೋಟಗೊಂಡಿದ್ದು ಬೆಂಕಿಯ ಕಿಡಿಗಳು ಪಕ್ಕದಲ್ಲೇ ಇದ್ದ ಹಾಸಿಗೆ ಬೆಡ್ ಶೀಟ್ ಮಾರುವ ಅಂಗಡಿಗಳಿಗೂ ವ್ಯಾಪಿಸಿದ್ದು ಬೆಂಕಿಗೆ ಸಿಲುಕಿದ ನೂರಾರು ಹಾಸಿಗೆ ಬೆಡ್ ಶೀಟ್ ಗಳು ಬೆಂಕಿಗಾಹುತಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಟೀ ಅಂಗಡಿಯಲ್ಲಿದ್ದ ಎರಡು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದೆ ಬೆಂಕಿ ಹರಡಲು ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

Share This Article
error: Content is protected !!
";