ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಮಾಜಿ ಶಾಸಕ ಟಿ. ವೆಂಕಟರಮಣಯ್ಯ ಸಮ್ಮುಖದಲ್ಲಿ ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಕೊಡಿಗೇಹಳ್ಳಿ ಪಂಚಾಯತಿ ಸದಸ್ಯರಾದ ಗಾಯತ್ರಿ ಮಂಜುನಾಥ್ ಸೇರ್ಪಡೆಯಾದರು.
ನಗರದ ಪ್ರವಾಸಿ ಮಂದಿರದಲ್ಲಿ ನೆಡೆದ ಸಭೆಯ ನಂತರ ಸ್ಥಳೀಯ ಮುಖಂಡರ ಸಮಕ್ಷಮದಲ್ಲಿ ತಾಲ್ಲೂಕಿನ ಮಾಜಿ ಶಾಸಕರು ಹಾಗೂ ಕೆ ಪಿ ಸಿ ಸಿ ಉಪಾಧ್ಯಕ್ಷ ಟಿ. ವೆಂಕಟರಮಣಯ್ಯನವರು ಪಕ್ಷದ ಶಾಲು ಹೊಡಿಸಿ ಪಕ್ಷಕ್ಕೆ ಜೆಡಿಎಸ್ ಪಕ್ಷದ ಗಾಯತ್ರಿ ಮಂಜುನಾಥ್ ರವರನ್ನು ಸ್ವಾಗತಿಸಿದರು.
ನಂತರ ಮಾತನಾಡಿದ ಅವರು ಮಹಾತ್ಮ ಗಾಂಧೀಜೀಯವರ ಕಾಲದಿಂದಲೂ ಬಡವರ ಹೇಳಿಗೆಗಾಗಿ ಸದಾ ದುಡಿಯುತ್ತಿರುವ ನಮ್ಮ ಕಾಂಗ್ರೆಸ್ ಪಕ್ಷದ ಸಿದ್ದಂತವನ್ನು ಒಪ್ಪಿ ಇದ್ದು ನಮ್ಮ ಪಕ್ಷಕ್ಕೆ ಗಾಯತ್ರಿ ಮಂಜುನಾಥ್ ಸೇರ್ಪಡೆಯಾಗಿದ್ದು, ಪಕ್ಷ ನಿಷ್ಠೆಯಿಂದ ಸದಾ ಸಾರ್ವಜನಿಕರ ಸೇವೆ ಸಲ್ಲಿಸುವ ಮೂಲಕ ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಹಸನಘಟ್ಟ ರವಿ,ಪಾಲನ ಜೋಗಹಳ್ಳಿ ಪ್ರೇಮ್ ದಾಸ್, ಕೊಡಿಗೇಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಂಜುನಾಥ್, ಕೊಡಿಗೇಹಳ್ಳಿ ಪಂಚಾಯತಿ ಸದಸ್ಯರಾದ ಅಬ್ದುಲ್ ವಾಹಿದ್, ಯಾಕೂಬ್ ಬೇಗ್, ನಾಗರತ್ನಮ್ಮ, ಮಾಜಿ ಸದಸ್ಯರಾದ ಕೃಷ್ಣ ನಾಯಕ್, ಮುಖಂಡರಾದ ಖಾಸಿಂ ಸಾಬ್ , ಜಿ.ವಿ.ಮಂಜುನಾಥ್, ಬಾಬಾ ಜಾನ್, ಇದ್ದರು