ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಸುಣ್ಣಘಟ್ಟಹಳ್ಳಿ ಗ್ರಾಮದ ಗೀತಾ ಆನಂದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಉಪಾಧ್ಯಕ್ಷರನ್ನು ಕೆಪಿಸಿಸಿ ಸದಸ್ಯ ಎಸ್.ಆರ್. ಮುನಿರಾಜ್ ಅಭಿನಂದಿಸಿ ಮಾತನಾಡಿ, ತೂಬಗೆರೆ ಗ್ರಾಮ ಪಂಚಾಯಿತಿಯಲ್ಲಿ ಇ-ಖಾತೆಗಳು ಸಕಾಲಕ್ಕೆ ಆಗುತ್ತಿಲ್ಲ ತ್ವರಿತವಾಗಿ ಜನರಿಗೆ ಮಾಡಿಕೊಡಬೇಕು, ತೂಬಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಗ್ರಾಮಗಳಲ್ಲಿ ಬೀದಿ ದೀಪಗಳು ಚರಂಡಿಯ ವ್ಯವಸ್ಥೆ ತಲೆದೋರುತ್ತಿದೆ ಹೆಚ್ಚಿನ ಗಮನ ಕೊಡಬೇಕೆಂದು ಹೇಳಿ, ಮುಖ್ಯವಾಗಿ ಪ್ರತಿ ಗ್ರಾಮಗಳಿಗೆ ತೆರಳಿ ಈ ಖಾತೆ ಆಂದೋಲನ ವ್ಯವಸ್ಥೆ ಮಾಡಬೇಕಾಗಿದೆ ಇದಕ್ಕೆ ಅಧ್ಯಕ್ಷರು ಉಪಾಧ್ಯಕ್ಷರ ಸಮ್ಮುಖದಲ್ಲಿ ಮಾಡಬೇಕಿದೆ, ಏಕೆಂದರೆ ಜಿಲ್ಲೆಗಳಲ್ಲಿ ಆಂದೋಲನ ಕಾರ್ಯಕ್ರಮ ನಡೆಯುತ್ತಿದೆ ನೀವು ಕೂಡ ಆಂದೋಲನ ಕೈಗೊಳ್ಳಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತೂಬಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿಲಕ್ಷ್ಮಮ್ಮ ರಾಮಕೃಷ್ಣ,ಮಾಜಿ ಅಧ್ಯಕ್ಷೆ ನಂಜಮ್ಮ ನರಸಿಂಹಮೂರ್ತಿ, ಸದಸ್ಯರುಗಳಾದ ಕೃಷ್ಣಪ್ಪ (ಕಿಟ್ಟಿ), ಪುಷ್ಪಾ, ಸುರೇಶ್ ಬಾಬು, ಗಂಗಾಧರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಹಾಗೂ ಎಲ್ಲಾ ಪಂಚಾಯತಿಯ ಸದಸ್ಯರುಗಳು ಸಿಬ್ಬಂದಿ ವರ್ಗದವರು ಹಾಜರಿದ್ದರು.