ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನಲ್ಲಿ ಬಿ.ಎಲ್.ಡಿ. ಸೌಹಾರ್ದ ಸಹಕಾರಿ ಸಂಘದ ನೂತನ ಶಾಖೆ ಆರಂಭವಾಗಿದ್ದು ಇದು ಸಹಕಾರಿ ಕ್ಷೇತ್ರದಲ್ಲಿ ಗುರುತರ ಹೆಜ್ಜೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಅಭಿಪ್ರಾಯಪಟ್ಟರು.
ಪೂಜ್ಯಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಅಮೃತ ಹಸ್ತದಿಂದ 2022ರಲ್ಲಿ ವಿಜಯಪುರದಲ್ಲಿ ಉದ್ಘಾಟನೆಗೊಂಡು ಅವರ ಆಶೀರ್ವಾದದಿಂದ ಕಾರ್ಯ ಪ್ರಾರಂಭಿಸಿದ ಬಿ.ಎಲ್.ಡಿ. ಸೌಹಾರ್ದ ಸಂಘವು ಉತ್ತರ ಕರ್ನಾಟಕ ಭಾಗದಲ್ಲಿ ಈಗಾಗಲೇ 10 ಶಾಖೆಗಳನ್ನು ಆರಂಭಿಸಿ ಜನಪ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
ಇದೀಗ ಸಂಘದ 11ನೇ ಶಾಖೆಯನ್ನು ರಾಜಧಾನಿಯಲ್ಲಿ ಆರಂಭಿಸಲಾಗಿದ್ದು ಈ ಶಾಖೆಯ ಉದ್ಘಾಟನೆಯನ್ನು ಶ್ರೀ ಸಿದ್ದಗಂಗಾ ಮಠದ ಪೀಠಾಧ್ಯರಾದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾ ರೆಡ್ಡಿಯವರು ನೆರವೇರಿಸಿದರು.
ಇಂದಿನ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ವಿಜಯಪುರದ ಐದು ಜನ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.
1. ಉದ್ಯಮ ಕ್ಷೇತ್ರದಲ್ಲಿ ಶ್ರೀ ವಿದ್ಯಾನಂದ ಬಿ. ದೇಸಾಯಿ 2. ಸ್ವ ಉದ್ಯೋಗ ಕ್ಷೇತ್ರದಲ್ಲಿ ಶ್ರೀ ನಾನಾಸಾಹೇಬ ನಿ. ಹುಗ್ಗಿ 3. ವೈದ್ಯಕೀಯ ಕ್ಷೇತ್ರದಲ್ಲಿ ಡಾ. ರವಿಕುಮಾರ ಮುಕರ್ತಿಹಾಳ 4. ಕ್ರೀಡಾಕ್ಷೇತ್ರದಲ್ಲಿ ಶ್ರೀ ಗುರುಪ್ರಸಾದ ನಡಗಡ್ಡಿ 5. ಸಾಹಿತ್ಯ ಕ್ಷೇತ್ರದಲ್ಲಿ ಶ್ರೀ ಮೌಲಾಲಿ ಆಲಗೂರ ಇಂತಹ ಒಂದು ಅರ್ಥಪೂರ್ಣ ಕಾರ್ಯವನ್ನು ಜರುಗಿಸಿದ ಸಂಸ್ಥೆಯ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರಾದ ಸಹೋದರ ಶ್ರೀ ಸುನೀಲಗೌಡ ಪಾಟೀಲ, ಉಪಾಧ್ಯಕ್ಷರಾದ ಶರಣು ಗೊಡ್ಡೊಡಗಿ ಅವರಿಗೆ ಎಂ.ಬಿ ಪಾಟೀಲ್ ಅಭಿನಂದನೆಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ, ಬಿ.ಎಸ್. ಪುಟ್ಟರಾಜು, ದಯಾನಂದ ಎಸ್.ಪಿ., ನಾಗಭೂಷಣ ರೆಡ್ಡಿ ಸೇರಿದಂತೆ ಮುಂತಾದ ಗಣ್ಯರು ಜೊತೆಗಿದ್ದರು.
ಬಿಎಲ್‌ಡಿ ಸೌಹಾರ್ದ ಸಂಘವು ನಾಡಿನಾದ್ಯಂತ ಜನಪ್ರಿಯತೆ ಹೊಂದಿ ಇನ್ನು ಹೆಚ್ಚಿನ ಶಾಖೆಗಳನ್ನು ಆರಂಭಿಸಿ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸುತ್ತೇನೆ ಎಂದು ಎಂ.ಬಿ ಪಾಟೀಲ್ ಹೇಳಿದರು.

