ಜಿಲ್ಲೆಗೆ ಹೆಚ್ಚಿನ ಫಲಿತಾಂಶ ಪಡೆದು ರಾಜ್ಯಕ್ಕೆ ಕೀರ್ತಿ ತನ್ನಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಈ ಬಾರಿಯ ಪರೀಕ್ಷೆಯಲ್ಲಿ ಜಿಲ್ಲೆಗೆ ಒಂದನೆ ಸ್ಥಾನ ತರುವ ಮೂಲಕ ರಾಜ್ಯಕ್ಕೆ ಕೀರ್ತಿ ತನ್ನಿ ಎಂದು ಸಂಸದ ಗೋವಿಂದ ಎಂ.ಕಾರಜೋಳ ದ್ವಿತೀಯ ಪಿ.ಯು.ಸಿ. ಪರೀಕ್ಷೆಗೆ ಶನಿವಾರ ಹಾಜರಾದ ಬಾಲಕಿಯರಿಗೆ ಶುಭ ಕೋರಿದರು.

ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ಸಂಸದರು ದ್ವಿತೀಯ ಪಿ.ಯು.ಸಿ. ಪರೀಕ್ಷೆಗೆ ಹಾಜರಾದ ಬಾಲಕಿಯರಿಗೆ ಶುಭ ಕೋರಿ ಮಾತನಾಡುತ್ತ ಬಾಲಕರಿಗಿಂತ ಬಾಲಕಿಯರು ಹೆಚ್ಚು ಶ್ರಮ ಪಟ್ಟು ಓದುತ್ತಾರೆ. ನ್ಯಾಯ ಸಮ್ಮತವಾಗಿ ಪರೀಕ್ಷೆಯನ್ನು ಬರೆಯಿರಿ. ಯಾವುದೇ ಕಾರಣಕ್ಕೂ ಪರೀಕ್ಷೆ ಭಯ ಬೇಡ. ಹಬ್ಬದ ರೀತಿಯಲ್ಲಿ ಪರೀಕ್ಷೆಯನ್ನು ಸಂಭ್ರಮಿಸಿ. ದ್ವೀತಿಯ ಪಿ.ಯು.ಸಿ. ನೀವುಗಳು ಜೀವನದಲ್ಲಿ ಮೇಲೆರಲು ಮೊದಲ ಮೆಟ್ಟಿಲು ಹಾಗೂ ಏಕಾಗ್ರತೆಯಿಂದ ಓದಿ ಎಂದು ತಿಳಿಸಿದರು.

- Advertisement - 

ದ್ವಿತೀಯ ಪಿ.ಯು.ಸಿ.ಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದರೆ ವೈದ್ಯಕೀಯ, ಇಂಜಿನಿಯರಿಂಗ್ ಸೀಟು ಪಡೆದುಕೊಳ್ಳಲು ಸುಲಭವಾಗುತ್ತದೆ. ೨೦೨೪ ರಲ್ಲಿ ದ್ವಿತೀಯ ಪಿ.ಯು.ಸಿ. ಫಲಿತಾಂಶದಲ್ಲಿ ಜಿಲ್ಲೆ ೩೧ ನೇ ಸ್ಥಾನದಲ್ಲಿತ್ತು. ೨೦೨೫ ರಲ್ಲಿ ೨೮ ಸ್ಥಾನದಲ್ಲಿತ್ತು. ಈ ಬಾರಿ ಜಿಲ್ಲೆಯನ್ನು ೧,, ಇಲ್ಲವೇ ಮೂರನೆ ಸ್ಥಾನದಲ್ಲಾದರೂ ಇರಬೇಕೆಂಬುದು ನನ್ನ ಆಸೆ. ಚೆನ್ನಾಗಿ ಓದಿ ವಿಜ್ಞಾನಿಗಳು, ಉನ್ನತ ಮಟ್ಟದ ಅಧಿಕಾರಿಗಳು, ವಕೀಲರುಗಳಾಗಿ ನಿಮ್ಮನ್ನು ಹೆತ್ತವರಿಗೆ ಹಾಗೂ ಗುರು-ಹಿರಿಯರಿಗೆ ಗೌರವ ತನ್ನಿ ಎಂದು ಸಂಸದ ಗೋವಿಂದ ಕಾರಜೋಳರವರು ಹಾರೈಸಿದರು.

ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ದೊಡ್ಡಯ್ಯ, ಬಿಜೆಪಿ.ಜಿಲ್ಲಾ ವಕ್ತಾರ ನಾಗರಾಜ್‌ಬೇದ್ರೆ, ಯುವ ಮೋರ್ಚಾದ ಅರುಣ್ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

- Advertisement - 

 

Share This Article
error: Content is protected !!
";