ತರಬೇತಿ ಪಡೆದು ನೀವು ಬೇಕರಿ ಉತ್ಪನ್ನ ತಯಾರಿಸಬಹುದು, ತರಬೇತಿಗೆ ಅರ್ಜಿ ಸಲ್ಲಿಸಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿರಿಯೂರು ತಾಲ್ಲೂಕಿನ ಕೃಷಿ ವಿಜ್ಞಾನ ಕೇಂದ್ರ ಬಬ್ಬೂರು ಫಾರಂನಲ್ಲಿ ಸ್ಥಾಪಿಸಿರುವ ಬೇಕರಿ ಘಟಕದಲ್ಲಿ ಬೆಣ್ಣೆ ಬಿಸ್ಕತ್, ರಾಗಿ ಬಿಸ್ಕತ್, ಕೊಬ್ಬರಿ ಬಿಸ್ಕತ್, ಫ್ರೂಟ್ ಕೇಕ್, ಪ್ಲೇನ್ ಕೇಕ್ ಸೇರಿದಂತೆ ವಿವಿಧ ಬೇಕರಿ ಉತ್ಪನ್ನಗಳ ತಯಾರಿಕೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.

- Advertisement - 

 ತರಬೇತಿಯಲ್ಲಿ ಭಾಗವಹಿಸಲು ಇಚ್ಚೆಯುಳ್ಳವರು ತರಬೇತಿ ಶುಲ್ಕ ರೂ.200/- ಪಾವತಿಸಿ, ಸೆಪ್ಟೆಂಬರ್ 12ರೊಳಗಾಗಿ ದೂರವಾಣಿ ಮುಖಾಂತರ ಅಥವಾ ಖುದ್ದಾಗಿ ಸಂಪರ್ಕಿಸಿ ಹೆಸರು ನೊಂದಾಯಿಸಬಹುದಾಗಿದೆ.

- Advertisement - 

ಮೊದಲು ನೊದಾಯಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಡಾ. ಎಂ.ಜೆ.ಸರಸ್ವತಿ  ಮೊಬಲೈ ಸಂಖ್ಯೆ: 9986647124 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

 

- Advertisement - 

 

 

Share This Article
error: Content is protected !!
";