ಎಐಎಂಐಎಂ ಪಕ್ಷದಿಂದ ಘರ್ ಘರ್ ಪತಂಗ್ ಅಭಿಯಾನ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕಟ್ಟ ಕಡೆಯ ವ್ಯಕ್ತಿಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ಜೊತೆಗೆ ಪಕ್ಷದ ಧ್ಯೇಯೋದ್ದೇಶಗಳನ್ನು ಮನೆ ಮನೆಗೆ ತಲುಪಿಸುವುದು ನಮ್ಮ ಗುರಿ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮಿನ್ ಜಿಲ್ಲಾಧ್ಯಕ್ಷ ಮೊಹಮದ್ ಸೈಫುಲ್ಲಾ ತಿಳಿಸಿದರು.

ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ಘರ್ ಘರ್ ಪತಂಗ್ ಅಭಿಯಾನ್-೨೦೨೬ ಉದ್ದೇಶಿಸಿ ಮಾತನಾಡಿದರು. ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಸದಸ್ಯತ್ವ ಪಡೆಯುವ ಪ್ರಕ್ರಿಯೆ ಆರಂಭಗೊಂಡಿದ್ದು,

- Advertisement - 

ತಂತ್ರಜ್ಞಾನ ಬಳಸಿಕೊಂಡು ನಮ್ಮ ಪಕ್ಷದ ಕಾರ್ಯಕರ್ತರು ಸ್ಥಳೀಯರು ಸುಲಭವಾಗಿ ಸದಸ್ಯತ್ವ ಪಡೆಯಲು ನೆರವಾಗಬೇಕು. ಏಕತೆ, ಭ್ರಾತೃತ್ವ, ಸಹೋದರತ್ವ ಬೆಸೆಯುವುದು ಎಐಎಂಐಎಂ. ನ ಉದ್ದೇಶ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ನಮ್ಮ ಪಕ್ಷವನ್ನು ಸಂಘಟಿಸಿ ಬಲಪಡಿಸಲಾಗುವುದೆಂದು ಹೇಳಿದರು.

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅನೇಕರು ಸದಸ್ಯತ್ವ ಪಡೆದುಕೊಂಡು ಪಕ್ಷಕ್ಕೆ ಸೇರ್ಪಡೆಯಾದರು.

- Advertisement - 

 

Share This Article
error: Content is protected !!
";