ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಶ್ರೀ ಫಾಟಿ ಸುಬ್ರಹ್ಮಣ್ಯ ರಾಸುಗಳ ಜಾತ್ರೆಗೆ ಈಗಾಗಲೇ ರೈತರು ತಮ್ಮ ಜಾನುವಾರುಗಳನ್ನು ಮಾರಾಟಕ್ಕಾಗಿ ಆಗಮಿಸಿದ್ದಾರೆ. ಜಾತ್ರೆಗೆ ಆಗಮಿಸಿರುವ ರೈತರಿಗೆ ಹಾಗೂ ಸಾರ್ವಜನಿಕರಿಗೆ ದೇವಾಲಯದ ವತಿಯಿಂದ
ಉಚಿತವಾಗಿ ಬೆಳಿಗ್ಗೆ ತಿಂಡಿ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಲ್ಪಿಸಲಾಯಿತು.ಜಾನುವಾರುಗಳ ಜಾತ್ರೆ ಮುಗಿಯುವ ವರೆಗೂ ಜಾತ್ರೆಯಲ್ಲಿ ಉಪಸ್ಥಿತರಿರುವ
ಎಲ್ಲಾ ರೈತರಿಗೂ ಹಾಗೂ ಸಾರ್ವಜನಿಕರಿಗೂ ಬೆಳಿಗ್ಯೆ ಮತ್ತೆ ಮದ್ಯಾನ್ಹ ಉಪಹಾರ ಮತ್ತು ಊಟದ ವ್ಯವಸ್ಥೆ ಇರುತ್ತದೆ ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

