ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದಿಂದ ಭಕ್ತರು ನೀಡಿದ ಹರಕೆ ಹುಂಡಿ ಎಣಿಕೆ ಕಾರ್ಯ ಮಾಡಲಾಯಿತು.
ಭಕ್ತರು ನೀಡಿದ ಹರಕೆಯ ಹುಂಡಿಯಲ್ಲಿ 1,97,918.00 ರೂ ಹಾಗು 96,000.00 ರೂ ಬೆಲೆ ಬಾಳುವ 1.300 ಕೆ ಜಿ ಬೆಳ್ಳೆ 37,500 ರೂ ಬೆಲೆ ಬಾಳುವ 0.4 ಗ್ರಾಂ 400ಮೀಲಿ ಬಂಗಾರ ಸಂಗ್ರಾಹವಾಗಿದೆ.
ಹುಂಡಿ ಏಣಿಕೆ ಯಲ್ಲಿ ದೇವಾಲಯದ ನಿಯಮಾನುಸಾರ ದೇವಾಲಯಕ್ಕೆ ಬಂದ ಭಕ್ತರಿಂದ ಎಣಿಕೆ ಮಾಡಲಾಯಿತು.
ಈ ಕಾರ್ಯದಲ್ಲಿ ದೇವಾಲಯದ ಕಾರ್ಯದರ್ಶಿ ಹಾಗೂ ಉಪ ಆಯುಕ್ತರು ಪಿ. ದಿನೇಶ್ ಮುಜರಾಯಿ ಇಲಾಖೆ ತಹಶೀಲ್ದಾರ್ ಜಿ.ಜೆ .ಹೇಮಾವತಿ ದೇವಾಲಯದ ಅಧೀಕ್ಷಕರು,

ಉಪ ತಹಸಿಲ್ದಾರ್ ಪ್ರಮೋದ್ ಪ್ರಧಾನ ಅರ್ಚಕರು ಶ್ರೀನಿಧಿ ದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು, ನಂಜಪ್ಪ, ದೇವಾಲಯದ ಸಿಬ್ಬಂದಿ, ಇಂಡಿಯನ್ ಓವರ್ಸೀಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸ ಇಲಾಖೆ ಹಾಗೂ ದೇವಾಲಯಕ್ಕೆ ಬಂದ ಭಕ್ತಾದಿಗಳು ಹುಂಡಿ ಎಣಿಕೆ ಸಂದರ್ಭದಲ್ಲಿ ಹಾಜರಿದ್ದರು.

