ವಕೀಲರ ಸಂಘದಲ್ಲಿ ಯಾವುದೇ ಭೇದ ಭಾವ ಇಲ್ಲ-ಗಿರೀಶ್ ಕುಮಾರ್

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರು ವಕೀಲರ ಸಂಘದಲ್ಲಿ ಇದೇ ಮೊದಲ ಬಾರಿಗೆ ಉಪಾಧ್ಯಕ್ಷ ಸ್ಥಾನ ಸೃಷ್ಠಿಯಾಗಿದ್ದು
ಮೊದಲ ಉಪಾಧ್ಯಕ್ಷರಾಗಿ ದೊಡ್ಡಬಳ್ಳಾಪುರದ ಗಿರೀಶ್ ಕುಮಾರ್.ಸಿ.ಎಸ್ ರವರು ಆಯ್ಕೆಯಾಗಿದ್ದಾರೆ.
ನೂತನ ಉಪಾಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ಅಂಜನ್ ಕುಮಾರ್ ರವರನ್ನು ದೊಡ್ಡಬಳ್ಳಾಪುರ ವಕೀಲರ ಸಂಘದಿಂದ ಅಭಿನಂದಿಸಲಾಗಿತು.

ದೊಡ್ಡಬಳ್ಳಾಪುರ ವಕೀಲರ ಸಂಘದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಬೆಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಗಿರೀಶ್ ಕುಮಾರ್.ಸಿ.ಎಸ್ ಸಂಘದ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು. ಸಹಕಾರ ಸಂಘದ ಕಾಯ್ದೆಯಡಿ ಬೆಂಗಳೂರು ವಕೀಲರ ಸಂಘ ಬರುವುದರಿಂದ ಮೀಸಲಾತಿ ವಿಚಾರ ಇಲ್ಲಿ ಬರುವುದಿಲ್ಲ ಎಂದರು. 

- Advertisement - 

ಬೆಂಗಳೂರು ವಕೀಲರ ಸಂಘದ ಬಗ್ಗೆ ಕೆಲವರು ತಪ್ಪು ತಿಳಿದು ಕೊಂಡಿದ್ದಾರೆ, ಸಂಘದ ಅಧ್ಯಕ್ಷ ಸ್ಥಾನವನ್ನ ಹೊರತು ಪಡಿಸಿ, ಇನ್ನುಳಿದ ಸಂಘದ ಕಾರ್ಯದರ್ಶಿ, ಖಜಾಂಜಿ ಸ್ಥಾನಗಳು ಎಲ್ಲ ಜಾತಿಯವರಿಗೆ ಸಿಕ್ಕಿದೆ. ಕಾರಣಾಂತರಗಳಿಂದ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ ಮತ್ತು ವಕೀಲರ ಸಂಘದ ಚುನಾವಣೆ ಸಂಪೂರ್ಣ ಪಾರದರ್ಶಕತೆಯಿಂದ ನಡೆಯುತ್ತದೆ. ಸಂಘದಲ್ಲಿ ಯಾವುದೇ ಬೇಧಭಾವ ಇಲ್ಲ ಎಂದರು.

ಬೆಂಗಳೂರು ವಕೀಲರ ಸಂಘದಲ್ಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಮುಂದಿನ ಚುನಾವಣೆಯಲ್ಲಿ ಮೀಸಲಾತಿ ವಿಚಾರವನ್ನ ಕೈಗೆತ್ತಿಕೊಳ್ಳುವ ಬಗ್ಗೆ ಕೋರ್ಟ್ ಹೇಳಿದ್ದು, ಚುನಾವಣೆ ಒಂದು ವಾರ ಇರುವಾಗ ಅರ್ಜಿ ಸಲ್ಲಿಸಿದ್ದಾರೆ.

- Advertisement - 

ವಿಚಾರಣೆ ಹೇಗೆ ಮಾಡಲು ಸಾಧ್ಯ ಎಂಬ ವಿಚಾರವನ್ನ ತಿಳಿಸಿದೆ. ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ಆದೇಶವನ್ನು ನಾವು ಸ್ವಾಗತಿಸುತ್ತೆವೆ. ನಾವು ಕೇವಲ ಮತಕ್ಕಾಗಿ ಬಳಸಿಕೊಳ್ಳುವುದಲ್ಲ. ಅವರು ನಮ್ಮ ಸಹೋದರರು, ಅವರು ನಮ್ಮ ಜೊತೆ ನಿಂತು ಗೆಲ್ಲುತ್ತಿದ್ದಾರೆ. ಕಾರ್ಯಾಕಾರಿ ಸಮಿತಿಯಲ್ಲಿ ಸದಸ್ಯರಿದ್ದಾರೆ ಎಂದರು.

 

Share This Article
error: Content is protected !!
";