ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ತಾಲೂಕಿನ ಸಿದ್ದೇಶ್ವರನ ದುರ್ಗಾ ಪ್ರೌಢಶಾಲೆಯ ಸಭಾಂಗಣದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಅಖಂಡ ಕರ್ನಾಟಕದ ರೈತ ಸಂಘ ಮತ್ತು ಜಿಲ್ಲಾ ಕಿಸಾನ್ ಘಟಕ ಹಾಗೂ ಪ್ರೌಢಶಾಲಾ ಶಿಕ್ಷಕರಿಂದ ಮತ್ತು ಮಕ್ಕಳಿಂದ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪುರುಷ ಪ್ರಧಾನ ಸಮಾಜದಲ್ಲಿ, ಸಮ ಸಮಾಜ ಪರಿಕಲ್ಪನೆಯನ್ನು ಬಿತ್ತಿ ಈ ದೇಶದ ಪ್ರಗತಿಗೆ ಹೆಣ್ಣು ಮಕ್ಕಳ ಕೊಡುಗೆ ಅಪಾರ ಹಾಗೆ ಎಲ್ಲಾ ಕ್ಷೇತ್ರಗಳಲ್ಲೂ ಕೂಡ ಹೆಣ್ಣು ಮಕ್ಕಳು ಮೇಲುಗೈ ಸಾಧಿಸಿ ಗಾಂಧಿ ಕಂಡಂತ ಕನಸನ್ನು ಮನಸು ಮಾಡುವ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಶೈಕ್ಷಣಿಕ ರಾಜಕೀಯ ಸಾಮಾಜಿಕ ಆರ್ಥಿಕವಾಗಿ ಬಲಿಷ್ಠರಾಗಿ ಭಾರತ ದೇಶವನ್ನು ಕಟ್ಟಲು ಮುಂದೆ ಬರಬೇಕಾಗಿದೆ. ಹಾಗೆ ಋಷಿಗಳ ಕಾಲದಿಂದಲೂ ಕೂಡ ಹೆಣ್ಣನ್ನು ಪೂಜ್ಯನೀಯ ಭಾವನೆಯಲ್ಲಿ ನಿಲ್ಲಿಸಿ ಪಾವಿತ್ರತೆಯ ಹೆಸರಾದ ಎಲ್ಲಾ ಹೆಸರುಗಳನ್ನು ಹೆಣ್ಣು ಮಕ್ಕಳ ಹೆಸರುಗಳಲ್ಲಿ ಕರೆದು ಗೌರವತವಾಗಿ ನಡೆಸಿಕೊಂಡು ಬಂದಿದ್ದಾರೆ.
ಹೆಣ್ಣು ಮಕ್ಕಳು ತಮ್ಮ ಸಾಧನೆಗಳ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಹೆಣ್ಣು ಎಂದರೆ ಬರೆ ಭೋಗದ ವಸ್ತುವಲ್ಲ ಅದೊಂದು ಶಕ್ತಿ ಅದೊಂದು ಧೈರ್ಯ, ಅದೊಂದು ಕಲ್ಪನೆ ,ಅದೊಂದು ಆರ್ಥಿಕ ಶಕ್ತಿ, ಈ ದೇಶದ ಭವಿಷ್ಯ ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಮತ್ತು ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನಾಗರಾಜು ಎ ಪರಶುರಾಂಪುರ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಮಂಜುಳಾ ಮಾತನಾಡಿ ಹೆಣ್ಣು ಮಕ್ಕಳು ಯಾವತ್ತೂ ಕೂಡ ಸಬಲೆ. ಆದರೂ ಕೂಡ ಗಂಡು ಮಕ್ಕಳ ಹಸ್ತಕ್ಷೇಪ ಸರಿಯಲ್ಲ. ರಾಜಕಾರಣದ ವ್ಯವಸ್ಥೆಯಲ್ಲಿ ಅಧಿಕಾರ ಪಡೆದರೂ ಕೂಡ ಗಂಡಂದಿರು ಅಧಿಕಾರ ಚಲಾಯಿಸುವುದು ತಪ್ಪು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ವೃಂದದವರು ಮತ್ತು ಊರಿನ ಪ್ರಮುಖರು ಉಪಸ್ಥಿತರಿದ್ದರು.

