ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕುರುಗಾಯಿಗಳ ಆತ್ಮ ರಕ್ಷಣೆ, ಕುರಿಗಳನ್ನು ಕಾಡು ಮೃಗಗಳಿಂದ ರಕ್ಷಿಸಿಕೊಳ್ಳಲು ಹಾಗೂ ತೋಟದ ಮನೆಗಳು ಒಂಟಿ ಮನೆ ಕಾಪಾಡಿಕೊಳ್ಳಲು ಕುರಿಗಾಯಿಗಳಿಗೆ ಬಂದೂಕು ತರಬೇತಿ ನೀಡುವುದು ಅವಶ್ಯವಾಗಿದೆ. ಹಾಗಾಗಿ ಕುರಿಗಾಯಿಗಳಿಗೆ ಬಂದೂಕು ತರಬೇತಿ ನೀಡಬೇಕೆಂದು ಹಿರಿಯೂರು ತಾಲೂಕು ಕಾಡಗೊಲ್ಲ ಸಂಘ ವತಿಯಿಂದ ತಹಳೀಲ್ದಾರ್ ಸಿ.ರಾಜೇಶ್ ಕುಮಾರ್ ಗೆ ಮನವಿ ಮಾಡಿದರು.
ಹಿರಿಯೂರು ತಾಲೂಕು ಕಚೇರಿ ಮುಂಭಾಗದಲ್ಲಿ ಕಾಡುಗೊಲ್ಲ ಸಮುದಾಯದವರು ಕುರಿಗಳನ್ನ ಕಚೇರಿ ಮುಂಭಾಗದಲ್ಲಿ ತಂದು ಮನವಿ ಪತ್ರದ ಮೂಲಕ ತಹಶೀಲ್ದಾರ್ ಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಮಾತ್ರವಲ್ಲದೇ ರಾಜ್ಯಾದ್ಯಂತ ಕುರಿಗಾಹಿಗಳು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆ, ಬೆಳೆ ಇಲ್ಲದೆ ಗುಡ್ಡ ಸಾಲಗಳಲ್ಲಿ ಗಾಳಿ, ಬಿಸಿಲೆನ್ನದೇ ಊರೂರು ಸುತ್ತುವ ಪ್ರಕೃತಿಯ ಮಡಿಲಿನಲ್ಲಿ ಪ್ರಕೃತಿಯ ಆರಾಧಕರಾಗಿರುವ ಕುರಿಗಾಹಿಗಳಿಗೆ ರಕ್ಷಣೆಯಿಲ್ಲದಂತಾಗಿದೆ. ಅರಣ್ಯ ಇಲಾಖೆಯವರ ಮಾನಸಿಕ, ದೈಹಿಕ ಹಿಂಸೆಗಳು ಜೊತೆಗೆ ಕಳ್ಳಕಾಕರಿಂದ ಕುರಿಗಳನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಕಾಡುಗೊಲ್ಲ ಸಮುದಾಯದವರು ಊರಿಂದ ಆಚೆನೇ ಇದ್ದು ಕುರಿಗಳ ಇಂಡಿನಲ್ಲೇ ಜೀವಿಸುತ್ತಿರುತ್ತಾರೆ ಹಾಗಾಗಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಕುರಿಗಳನ್ನು ಕಾಪಾಡಿಕೊಳ್ಳಬೇಕಾದರೆ ಅವರಿಗೆ ಅವಶ್ಯಕತೆವಾಗಿ ಬಂದೂಕು ತರಬೇತಿ ಜೊತೆಗೆ ಬಂದೂಕು ಅವಶ್ಯವಾಗಿರುತ್ತದೆ ಎಂದು ಹಿರಿಯೂರು ನಗರಸಭೆ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಶಿವರಂಜನಿ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ ಕಾಡುಗೊಲ್ಲದ ಸಮುದಾಯದವರು ಗುಡ್ಡ ಪ್ರದೇಶಗಳಲ್ಲಿ ಕುರಿಗಳನ್ನು ಮೇಯಿಸುವುದಕ್ಕೆ ಹೊಡೆದುಕೊಂಡು ಹೋಗಿರುತ್ತಾರೆ ಇಂತಹ ಸಂದರ್ಭದಲ್ಲಿ ಆಯ್ತಕ್ಕ ಕರ ಘಟನೆಗಳು ನಡೆಯಬಾರದೆಂದರೆ ಕುರಿ ಗಾಯಗಳಿಗೆ ಅವಶ್ಯಕವಾಗಿ ಬಂದೂಕು ನೀಡಬೇಕಾಗಿದೆ ಎಂದು ಹಿರಿಯೂರು ತಾಲೂಕು ಕಾಡುಗೊಲ್ಲ ಸಮಾಜದ ಅಧ್ಯಕ್ಷ ಪಿ ಆರ್ ದಾಸ್ ಹೇಳಿದರು.
ನಗರ ಸಭೆ ಸದಸ್ಯರಾದ ಚಿತ್ರಜಿತ್ ಯಾದವ್, ಭರತ್ ಯಾದವ್, ಯುವ ಮುಖಂಡ ಅಲ್ತಾಫ್, ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಹಾಲಮರದಟ್ಟಿ ಶಿವಣ್ಣ, ಷಡಕ್ಷರಿ ಇತರರು ಇದ್ದರು.