ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಕರಿಯಲಾ ಗ್ರಾಮದ ಮಾದಿಗ ಸಮುದಾಯದ ಪಂಡುರಂಗಪ್ಪ, ಲತಾ ದಂಪತಿಗಳ ಪುತ್ರ ಪಿ.ಚೇತನ್ ಅವರು ಜವನಗೊಂಡನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶೇ. 96 ರಷ್ಟು ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾರೆ.
ಯುವಕ ಚೇತನ್ ಸಾಧನೆಗೆ ಹಿರಿಯೂರು ತಾಲೂಕಿನ ಬಾಬು ಜಗಜೀವನ್ ರಾಮ್ ಸಂಘದ ಅಧ್ಯಕ್ಷ ಜಿಎಲ್ ಮೂರ್ತಿ ರವರ ಕಚೇರಿಯಲ್ಲಿ ಚೇತನ್ ರವರಿಗೆ ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ, ಭಾಗ್ಯಮ್ಮ ಪಾತಲಿಂಗಪ್ಪ, ಮಾರುತೇಶ ಕೂನಿಕೆರೆ, ಅಭಿಮತ ಪತ್ರಿಕೆಯ ಕುಮಾರ್, ದರ್ಶನ್, ಕೋಟಿ, ಮೋಹನ್ ಕುಮಾರ್ ಹಾಜರಿದ್ದರು.