ಚಂದ್ರವಳ್ಳಿ ನ್ಯೂಸ್, ನೆಲಮಂಗಲ:
ಕಾರಿನ ಗ್ಲಾಸ್ ಒಡೆದು 11.5 ಲಕ್ಷ ರೂ. ನಗದು ದೋಚಿ ಪರಾರಿಯಾದ ಘಟನೆ ನೆಲಮಂಗಲದಲ್ಲಿ ನಡೆದಿದೆ.
ದಾಬಸ್ಪೇಟೆಯಲ್ಲಿ ಲಾಜಿಸ್ಟಿಕ್ಸ್ ನಡೆಸುತ್ತಿದ್ದ ಅತೀಕ್ ರೆಹಮಾನ್ ಎಂಬವರಿಗೆ ಸೇರಿದ ಕಾರಿನಿಂದ ಹಣ ಕಳವು ಮಾಡಲಾಗಿದೆ.
ದಾಬಸ್ಪೇಟೆಯಿಂದ ಹಣ ತೆಗೆದುಕೊಂಡು ಬಂದಿದ್ದ ಅತೀಕ್, ನೆಲಮಂಗಲದಲ್ಲಿ ಮಿಕ್ಸಿ ರಿಪೇರಿ ಮಾಡಿಸಲು ಕಾರಿನಲ್ಲಿ ಹಣದ ಬ್ಯಾಗ್ ಇಟ್ಟು ತೆರಳಿದ್ದರು. ವಾಪಸ್ ಬಂದು ನೋಡಿದಾಗ ಹಣ ಕಳ್ಳತನವಾಗಿದ್ದು ಬೆಳಕಿಗೆ ಬಂದಿದೆ.
ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ಅವರು ದೂರು ನೀಡದ್ದು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮಾಡುತ್ತಿದ್ದಾರೆ.