ಬೆಂಗಳೂರಿನಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರ ‘ತಾರಾ’ ಆರಂಭ: ಪ್ರತಿಷ್ಠಿತ ಕಾನ್ಸಿಲಿಯೋ ಘೋಷಣೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಾಗತಿಕ ಮಟ್ಟದಲ್ಲಿ  ಕಾನೂನು ತಂತ್ರಜ್ಞಾನ ಪರಿಹಾರ ಮತ್ತು ಉದ್ಯಮ ಸ್ನೇಹಿ ಕಾನೂನು ಸೇವೆಗಳ ಪ್ರಮುಖ ಸಂಸ್ಥೆಯಾಗಿರುವ ಕಾನ್ಸಿಲಿಯೊ ಭಾರತದ ಮುಂಚೂಣಿ ನಗರಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ಪ್ರತಿಭೆ
, ವ್ಯಾವಹಾರಿಕ ಬೆಳವಣಿಗೆಗಳಿಗೆ ಪೂರಕವಾಗಿ ತಾರಾ (ನಕ್ಷತ್ರ) ಸಂಸ್ಥೆಯನ್ನು ಸ್ಥಾಪಿಸುವುದಾಗಿ ಘೋಷಿಸಿದೆ.

ತಾರಾ ಎಂಬ ಹೆಸರಿನಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿರುವ ಈ ಹೊಸ ನಾವೀನ್ಯತಾ ಕೇಂದ್ರವು  ಕಾನೂನು ಮತ್ತು ತಂತ್ರಜ್ಞಾನ ಕ್ಷೇತ್ರದ ವೃತ್ತಿಪರರಿಗೆ ಮಾರ್ಗದರ್ಶನ ನೀಡುವುದರ ಜತೆಗೆ ಉನ್ನತ ಮಟ್ಟದ ಪ್ರತಿಭೆಗಳಿಗೆ ಗಮ್ಯಸ್ಥಾನವಾಗಿ ಕಾರ್ಯನಿರ್ವಹಿಸಲಿದೆ.  ಕಾನೂನು ತಂತ್ರಜ್ಞಾನ ಮತ್ತು ಕೃತಕ ಬುದ್ದಿಮತ್ತೆ (ಎಐ) ಮೇಲೆ ವಿಶೇಷ ಗಮನ ಹರಿಸಿರುವ ಕಾನ್ಸಿಲಿಯೊ, ಬಹುಶಿಕ್ಷಣ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಈ ಕೇಂದ್ರವು ಎಂಜಿನಿಯರ್‌ಗಳು, ಡೇಟಾ ವೃತ್ತಿನಿರತರು ಮತ್ತು ಕಾನೂನು ವೃತ್ತಿಪರರು ಒಟ್ಟಾಗಿ ಸೇರಿ ಕಾನೂನು ಕ್ಷೇತ್ರದಲ್ಲಿ ನಾವೀನ್ಯತೆಯನ್ನು ಹೆಚ್ಚಿಸುವುದರ ಜತೆಗೆ ವಿಶ್ವದ ಅತ್ಯಂತ ಸಂಕೀರ್ಣ ಕಾನೂನು ಸವಾಲುಗಳಿಗೆ ಪರಿಹಾರ ನೀಡಲು ಸಹಕಾರಿಯಾಗಲಿದೆ.

- Advertisement - 

ಭಾರತದಾದ್ಯಂತ ಹೂಡಿಕೆಯ ಕುರಿತು ಬಹು ವರ್ಷಗಳ ಕಾರ್ಯತಂತ್ರದ ಆಧಾರದ ಮೇಲೆ ಕ್ಯಾನ್ಸಿಲಿಯೋ ಸಂಸ್ಥೆ ಬೆಂಗಳೂರಿನಲ್ಲಿ ತನ್ನ ಕೇಂದ್ರ ಸ್ಥಾಪಿಸುತ್ತಿದ್ದು, ಇದು ಬೆಂಗಳೂರು ಮಾತ್ರವಲ್ಲದೆ, ಗರುಗ್ರಾಮ, ಹೈದರಾಬಾದ್ ಮತ್ತು ಪುಣೆಯಲ್ಲಿ ನಡೆಸಲಿರುವ ಕಾರ್ಯಾಚರಣೆಗಳಿಗೆ ಪೂರಕವಾಗಿದೆ. 2025ರಲ್ಲಿ 250ಕ್ಕೂ ಹೆಚ್ಚು ವೃತ್ತಿಪರರ ತಂಡದೊಂದಿಗೆ ಕಂಪನಿ ಬೆಳವಣಿಗೆ ಸಾಧಿಸಿದ್ದು, ಪ್ರಸ್ತುತ 1400ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಈ ಪೈಕಿ 500ಕ್ಕೂ ಹೆಚ್ಚು ಪ್ರತಿಭಾವಂತರು ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿರುವ ತಾರಾ ಕೇಂದ್ರವನ್ನು ಮುನ್ನಡೆಸಲಿದ್ದಾರೆ. ಈ ಕೇಂದ್ರದಲ್ಲಿ ಸಹಯೋಗದ ಕಾರ್ಯಕ್ಷೇತ್ರಗಳು, ತರಬೇತಿ ಕೇಂದ್ರ ಮತ್ತು ಕಾನೂನು ತಂತ್ರಜ್ಞಾನ ಪರಿಹಾರ ತಂಡಗಳನ್ನು ಪ್ರೋತ್ಸಾಹಿಸಲು ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

 

- Advertisement - 

ಇತರೆ ಸಮುದಾಯ ಹೂಡಿಕೆಗಳ ಜತೆಗೆ ಭವಿಷ್ಯದ ಪ್ರತಿಭೆಗಳನ್ನು ಬೆಳೆಸಲಿರುವ ಕಾನ್ಸಿಲಿಯೊ, ಕ್ಯಾಂಪಸ್ ಡ್ರೈವ್ ಮೂಲಕ ಪ್ರತಿಭಾವಂತರನ್ನು ನೇಮಕ ಮಾಡಿಕೊಳ್ಳುತ್ತದೆ. ಫಾರ್ಚೂನ್ 100 ಕಂಪನಿಗಳು ಮತ್ತು ಪ್ರಮುಖ ಕಾನೂನ ಸಂಸ್ಥೆಗಳೊಂದಿಗೆ ಕೆಲಸ ಮಾಡಲು ಅನುಕೂಲವಾಗುವಂತೆ ಪ್ರಾದೇಶಿಕ ಮಟ್ಟದಲ್ಲಿ ಅತ್ಯುತ್ತಮ ಬ್ಯುಸಿನೆಸ್ ಸ್ಕೂಲ್ ಗಳಿಂದ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತದೆ. ಈ ರೀತಿ ನೇಮಕಗೊಳ್ಳುವ ಪ್ರತಿಭಾವಂತರಿಗೆ ಜಾಗತಿಕ ಗುಣಮಟ್ಟದ ಕೌಶಲ್ಯ ತರಬೇತಿ ನೀಡಲಾಗುವುದು. ಭಾರತೀಯ ಉದ್ಯಮ ಕ್ಷೇತ್ರದ ಮುಂಚೂಣಿ ನಾಯಕರು ಪದವೀಧರರನ್ನು ಸ್ವಾಗತಿಸುವುದರಿಂದ ಇತ್ತೀಚಿನ ತಂಡದ ಪದವಿ ಪ್ರಧಾನ ಸಮಾರಂಭದೊಂದಿಗೆ ತಾರಾ ಕೇಂದ್ರವನ್ನು ಉದ್ಘಾಟಿಸಲಾಯಿತು.

ತಾರಾ ಉದ್ಘಾಟನೆ ವೇಳೆ ಮಾತನಾಡಿದ ಕಾನ್ಸಿಲಿಯೊ ಕಂಪನಿಯ ಚೀಫ್ ಎಂಪ್ಲಾಯೀ ಎಕ್ಸ್‌ಪೀರಿಯನ್ಸ್ ಆಫೀಸರ್ ಬ್ರಾಂಡಿನ್ ಪೈನ್, ತಾರಾ ಸಂಸ್ಥೆಯ ಸ್ಥಾಪನೆಯು ಭಾರತದಲ್ಲಿ ಸ್ಥಳೀಯವಾಗಿ ಮತ್ತು ಜಿಸಿಸಿ ಸಮುದಾಯಗಳಲ್ಲಿ ಹೂಡಿಕೆ ಮಾಡುವ ಕಂಪನಿಯ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ವಿವಿಧ ನಾಲ್ಕು ಕಡೆ 200ಕ್ಕೂ ಹೆಚ್ಚು ಕ್ಯಾಂಪಸ್ ಪದವೀಧರರನ್ನು ಸಂಸ್ಥೆಗೆ ಸ್ವಾಗತಿಸಿದ್ದೇವೆ. ತಾರಾದ ಈ ಯುವ ವೃತ್ತಿಪರರು ತಮ್ಮ ವೃತ್ತಿಜೀವನ ಆರಂಭಿಸಿ ಜಾಗತಿಕ ಮಟ್ಟದಲ್ಲಿ ಕಾನೂನು ಸೇವೆಗಳಿಗೆ ಉತ್ತಮ ಭವಿಷ್ಯ ರೂಪಿಸಲು ಕಂಪನಿ ಅವಕಾಶ ಕಲ್ಪಿಸಲಿದೆ ಎಂದು ಹೇಳಿದರು.
ಒಟ್ಟಿನಲ್ಲಿ ಬೆಂಗಳೂರಿನಲ್ಲಿ ತಾರಾ ಕೇಂದ್ರ ಪ್ರಾರಂಭಿಸುವುದರೊಂದಿಗೆ ಕಾನ್ಸಿಲಿಯೊ
, ವೃತ್ತಿಪರರಿಗೆ ಪ್ರಸಿದ್ದ ಫಾರ್ಚೂನ್ 100 ಕಂಪನಿಗಳು ಮತ್ತು ಪ್ರಮುಖ ಕಾನೂನು ಸಂಸ್ಥೆಗಳ ಯೋಜನೆಗಳಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಲಿದೆ. ಈ ವಿಸ್ತರಣೆಯ ಮೂಲಕ ಪ್ರತಿಭೆ, ನಾವೀನ್ಯತೆ ಮತ್ತು ವ್ಯವಹಾರ ಬೆಳವಣಿಗೆಗೆ ಪ್ರಮುಖ ಕೇಂದ್ರವಾಗಿ ಭಾರತದಲ್ಲಿ ಕಾನ್ಸಿಲಿಯೊ ತನ್ನ ಬದ್ಧತೆಯನ್ನು ವ್ಯಕ್ತಪಡಿಸುತ್ತದೆ. ಜತೆಗೆ ಪ್ರದೇಶಿಕವಾಗಿ ಅತ್ಯುತ್ತಮ ಮತ್ತು ಪ್ರತಿಭಾವಂತರನ್ನು ಜತೆಗೆ ಕರೆದೊಯ್ಯಲಿದೆ.
ಹೆಚ್ಚಿನ ಮಾಹಿತಿಗಾಗಿ
, ಭೇಟಿ ನೀಡಿ: http://www.consilio.com/taara.
ಕಾನ್ಸಿಲಿಯೊ ಬಗ್ಗೆ-
ಕಾನ್ಸಿಲಿಯೊ ವಿಶ್ವಮಟ್ಟದಲ್ಲಿ ಇ-ಡಿಸ್ಕವರಿ
, ಡಾಕ್ಯುಮೆಂಟ್ ಅನಾಲಿಸಿಸ್, ಕಾನೂನು ಪ್ರತಿಭೆ ಮತ್ತು ಕಾನೂನು ಸಲಹೆ ಮತ್ತು ರೂಪಾಂತರ ಸಲಹೆಗಳ ಸೇವಾ ಕ್ಷೇತ್ರದಲ್ಲಿ ಪ್ರಮುಖ ಸಂಸ್ಥೆಯಾಗಿದೆ. ಕಾನ್ಸಿಲಿಯೊ ಕಂಪನಿಯು ನವೀನ ಸಾಫ್ಟ್‌ವೇರ್, ವೆಚ್ಚ ಪರಿಣಾಮಕಾರಿ ನಿರ್ವಹಣಾ ಸೇವೆಗಳು ಮತ್ತು ಆಳವಾದ ಕಾನೂನು ಮತ್ತು ನಿಯಂತ್ರಕ ಉದ್ಯಮ ಪರಿಣತಿಯನ್ನು ಬಳಸಿಕೊಂಡು ಬಹುರಾಷ್ಟ್ರೀಯ ಕಾನೂನು ಸಂಸ್ಥೆಗಳು ಮತ್ತು ನಿಗಮಗಳಿಗೆ ಅಧಿಕಾರ ನೀಡುತ್ತದೆ. ಕಂಪನಿಯ ಕೃತಕ ಬುದ್ಧಿಮತ್ತೆ (ಎಐ) ಕಾರ್ಯಕ್ಷೇತ್ರದಲ್ಲಿ ಗೈಡೆಡ್ ಆಲ್ ರಿವ್ಯೂ, ನೇಟಿವ್ ಎಐ ರಿವ್ಯೂ, ಅರೋರಾದ ಎಐ ಇನ್ವೆಸ್ಟಿಗೇಷನ್ ಪರಿಕರಗಳು ಮತ್ತು ಈಗ ಟ್ರೂಲಾ ಅವರ ಸುಧಾರಿತ ನಿರೂಪಣಾ ಎಐ ಸಾಮರ್ಥ್ಯಗಳು ಸೇರಿವೆ. ISO\IEC 27001:2022 ಪ್ರಮಾಣೀಕರಿಸಲ್ಪಟ್ಟ ಕಾನ್ಸಿಲಿಯೊ, ಯುರೋಪ್, ಏಷ್ಯಾ ಮತ್ತು ಉತ್ತರ ಅಮೆರಿಕಾದಾದ್ಯಂತ ಕಚೇರಿಗಳು, ದಾಖಲೆ ವಿಮರ್ಶೆ ಮತ್ತು ಡೇಟಾ ಕೇಂದ್ರಗಳನ್ನು ನಿರ್ವಹಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ, www.consilio.com ಗೆ ಭೇಟಿ ನೀಡಿ.
ಮಾಧ್ಯಮ ಸಂಪರ್ಕ
ಶಾಲಿನಿ ಸೈಗಲ್,
[email protected]

Share This Article
error: Content is protected !!
";