ನಾಡಿನ ಭರವಸೆಯ ವಿದ್ಯಾರ್ಥಿಗಳು ದಾರಿದೀಪವಾಗಬೇಕು- ಜಿ.ಎಂ.ರಾಜಶೇಖರ್…

News Desk

ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
  ಪೋಷಕರಿಗೆ ಆಧಾರವಾಗಿರುವ ವಿದ್ಯಾರ್ಥಿಗಳು ನಾಡಿನ  ನಾಳಿನ  ಭರವಸೆಯ ಆಶಾಕಿರಣಗಳು, ಕೆಲವು ಪೋಷಕರಿಗೆ ಅವರ ಪ್ರತಿಷ್ಠೆಗೆ ತಕ್ಕಂತೆ ಮಕ್ಕಳು ಅಂಕಗಳನ್ನು ಗಳಿಸಬೇಕೆಂಬ ಹಂಬಲ ವಿದ್ಯಾರ್ಥಿಗಳ ಮೇಲೆ ಅತಿಯಾದ ಒತ್ತಡ. ಇದು ಮಕ್ಕಳಿಗೆ ಅಗ್ನಿಪರೀಕ್ಷೆ ಆಗಿ ಪರಿಣಮಿಸುತ್ತಿದೆ ದೃತಿ ಗೆಡುತ್ತಿದ್ದಾರೆ ,ಶಿಕ್ಷಣ ಆದರ್ಶ ಜೀವನಕ್ಕೆ ದಾರಿಯ ಹೊರತು ಹೇಡಿಗಳನ್ನು ಹುಟ್ಟು ಹಾಕುವುದಿಲ್ಲ ವಿದ್ಯಾರ್ಥಿಗಳಲ್ಲಿ ಕೇವಲ ಬೌದ್ಧಿಕವಾದ ಸಮ್ಮಿಲವನ್ನಾಗಿಸಿದರೆ ಸಾಲದು ಅವರನ್ನು ಮಾನಸಿಕವಾಗಿ, ಸ್ಪರ್ಧಾತ್ಮಕವಾಗಿಸಬೇಕು. ಉತ್ತಮ ಜೀವನದ ಬೆಳಕನ್ನು ತೋರಿಸಿಕೊಟ್ಟಲ್ಲಿ ಅವರ ಜೀವನ ಮಾರ್ಗ ಅನಂತವಾಗುತ್ತದೆ. ..

 ಸಾಮಾನ್ಯವಾಗಿ ಮಾರ್ಚ್ ತಿಂಗಳೆಂದರೆ  ಪರೀಕ್ಷೆಯ ಪೋಷಕರಿಗೆ ನಿರೀಕ್ಷೆಯ ಕಾಲ. ಅಂತೇಯೇ ಏಪ್ರಿಲ್, ಮೇ ತಿಂಗಳು ಫಲಿತಾಂಶದ ನಿರ್ಧಾರದ ಕಾಲ.ಅವಧಿಯಲ್ಲಿ ಎಷ್ಟೋ ಮನೆಗಳು ಮನಗಳು ಸಂಭ್ರಮದ ವಾತಾವರಣದಲ್ಲಿ ಬೆಳಕು ಕಂಡರೆ, ಅನೇಕ ಮನೆ ಮನಗಳು ಕತ್ತಲಲ್ಲಿ ಮುಳುಗುತ್ತವೆ. ಕಾರಣ  ಮನೆ ಬೆಳಕಬೇಕಾದ ಮಕ್ಕಳು ಕೆಲವರು ಆತ್ಮಸ್ಥೈರ ಕುಗ್ಗಿಸಿಕೊಂಡು ಆತ್ಮಹತ್ಯೆಯ ದಾರಿ  ತುಳಿಯುತ್ತಾರೆ.

     ಅದರಲ್ಲೂ ಇಂದಿನ ಹದಿಹರೆಯದ ಯುವಕ ಯುವತಿಯರ ಪ್ರೇಮ ಪ್ರಕರಣಗಳು ಎಗ್ಗಿಲ್ಲದೆ  ನಡೆಯುತ್ತಿದೆ.ಇದರಲ್ಲಿ ಪೋಷಕರ ಪಾತ್ರವೂ ಸಹ ಅಷ್ಟೇ ಇದೆ. ತಮ್ಮ ಮಕ್ಕಳು ಎಲ್ಲರಂತೆ ಓದುತ್ತಿದ್ದಾರೆ, ಮಗ, ಮಗಳು ಬೇರೆ ಊರಿನಲ್ಲಿ ಓದಿ ಮನೆಗೆ ಕೀರ್ತಿ ತರುತ್ತಾರೆ ಎಂಬ ಬಾರಿ ಭರವಸೆಯನ್ನು ಇಟ್ಟುಕೊಂಡಿರುತ್ತಾರೆ. ಆದರೆ ಇಂದಿನ ಕೆಲವು ಯುವಕ ಯುವತಿಯರು ನಗರ ಪ್ರದೇಶದಲ್ಲಿ ಪಬ್, ಬಾರ್, ಡಿಸ್ಕೋತೆಕ್, ಮೊಬೈಲ್, ಮೆಸೇಜ್,ಚಾರ್ಟ್ಸ್ ಕಂಪ್ಯೂಟರ್ ಚಾಟಿಂಗ್ ಎಲ್ಲವೂ ಯುವ ಪೀಳಿಗೆಯನ್ನು ದಾರಿ ತಪ್ಪಿಸುವಂತೆ ಮಾಡುತ್ತಿದೆ.

     ಫೇಲ್ ಆದಾಗ ಜೀವನ ಹಾಳಾಯಿತು, ಲವ್ ಮಾಡಿದವನು ಕೈ ಕೊಟ್ಟಾಗ ಸಾಕಿ ಸಲುಹಿದ, ಕಷ್ಟಪಟ್ಟು ಬೆಳೆಸಿದ ಪೋಷಕರು ನೆನಪಿಗೆ ಬಾರದೆ ಒಂದು ಮೆಸೇಜ್ ಹಾಕಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ ಸಾವನ್ನು ಸುಲಭವಾಗಿ ತಂದುಕೊಡುತ್ತಾರೆ. ಇಂತಹ ಪ್ರಕರಣಗಳು ಅತಿಯಾಗಿ ಕೇಳು ಬರುತ್ತಿವೆ.

    ಹುಟ್ಟಿದವನು ಸಾಯಲೇಬೇಕು, ಇದು ನಿಶ್ಚಿತ ಆದರೆ ಹುಟ್ಟು ಸಾವಿನ ನಡುವಿನ ಜೀವಿತಕಾಲದಲ್ಲಿ ವ್ಯಕ್ತಿ ತನ್ನ ಸ್ವಇಚ್ಛೆ ಯಿಂದ ತನ್ನನ್ನು ಕೊಂದುಕೊಳ್ಳುವುದನ್ನು ಆತ್ಮಹತ್ಯೆ ಎನ್ನಲಾಗುತ್ತದೆ. ರಾಷ್ಟ್ರದ ಬೆನ್ನೆಲುಬಾಗಿರುವ  ಪೋಷಕರ ಆಧಾರವಾಗಿರುವ ವಿದ್ಯಾರ್ಥಿಗಳು ನಾಡಿನ, ನಾಳಿನ  ಭರವಸೆಯ ಆಶಕಿರಣಗಳು. ಆದರೆ ಇಂದು  ವಿದ್ಯಾರ್ಥಿಗಳು ದೃತಿಗೆಟ್ಟು  ಆತ್ಮಹತ್ಯೆಗೆ ಶರಣಾಗುತ್ತಿರುವುದು ಮನುಕುಲದ ಘೋರ ದುರಂತಕ್ಕೆ ಸಾಕ್ಷಿ ಅಲ್ಲದೇ, ಇದು ಸಮಾಜದ ಶಿಕ್ಷಣ ವ್ಯವಸ್ಥೆಯ ಬೇರನ್ನು ಹಿಡಿದಲುಗಿಸುವ ಪ್ರಸಂಗ ಕೂಡ. ವಿದ್ಯಾರ್ಥಿಗಳ ಆತ್ಮಹತ್ಯೆಯ ಜಾಡ ಹಿಡಿದು ಹೋದರೆ ಅನೇಕ ಕಾರಣಗಳು ಕಾಣಸಿಗುತ್ತವೆ.

       ಅನೇಕ ಪೋಷಕರಿಗೆ ಅವರ ಪ್ರತಿಷ್ಠೆಗೆ ತಕ್ಕಂತೆ ಮಕ್ಕಳು ಅಂಕಗಳನ್ನು ಗಳಿಸಬೇಕೆಂಬ ಹಂಬಲ ಅವರ ಆಸೆ ಆಕಾಂಕ್ಷೆಗಳನ್ನು ಮಕ್ಕಳ ಮೂಲಕ ತೀರಿಸಿಕೊಳ್ಳುವ ಚಪಲ. ಪರಿಣಾಮ ವಿದ್ಯಾರ್ಥಿಗಳ ಮೇಲೆ ಅತಿಯಾದ ಒತ್ತಡ,ಅನೇಕರು ಮಕ್ಕಳ ಆಯ್ಕೆಯ ಸ್ವಾತಂತ್ರ್ಯವನ್ನು ತಾವೇ ಕಸಿದುಕೊಂಡು ಬಿಟ್ಟಿರುವುದಲ್ಲದೆ, ಕಡಿಮೆ ಅಂಕಗಳನ್ನು ಪಡೆದರೆ ಆತ ನಿಷ್ಪ ಯೋಜಕ ಎಂದು ಭಾವಿಸಿ ಬಿಡುತ್ತಾರೆ. ತಾಯಿ ತಂದೆಯರ ಈ ತೆರನಾದ ನಿರೀಕ್ಷೆ ಮಕ್ಕಳಿಗೆ ಅಗ್ನಿ ಪರೀಕ್ಷೆಯಾಗಿ ಪರಿಣಮಿಸುತ್ತದೆ. ಅವರ ಆಸೆ ಆಕಾಂಕ್ಷೆಗಳನ್ನು ನೆರವೇರಿಸಲಾಗುವುದಿರಲಿ ಅವುಗಳನ್ನು ಪ್ರತಿಕ್ರಿಯೆಯನ್ನು ಎದುರಿಸಲಾಗದೆ ಮುಗ್ಧ ಜೀವಿಗಳು ಆತ್ಮಹತ್ಯೆಗೆ ಮುಂದಾಗುತ್ತಾರೆ.

     ವಿದ್ಯಾರ್ಥಿಗಳಿಗೆ ಆಯ್ಕೆ ಸ್ವಾತಂತ್ರ ಕೊಡದೆ, ತಾವೇ ವಿಧಿ ಬರೆದ ಬ್ರಹ್ಮನೆಂಬಂತೆ ನೀನು ಇದನ್ನೇ ಮಾಡಬೇಕೆಂಬ ಪಟ್ಟು ಹಿಡಿತಾರೆ.  ಮಕ್ಕಳ ಸಣ್ಣಪುಟ್ಟ ಸಾಧನೆಗಳನ್ನು ಮೆಚ್ಚಿ ಪುರಸ್ಕರಿಸದೆ, ಅವರಿವರ ಮಕ್ಕಳೊಂದಿಗೆ ತಮ್ಮ ಮಗುವನ್ನು ಹೋಲಿಕೆ ಮಾಡ್ತಾ ನೀನು ನಿಸ್ಪ್ರಾಯಜೋಕಾ ಎಂದು ಜರಿಯುವುದು, ಮಕ್ಕಳ ಆತ್ಮವಿಶ್ವಾಸವನ್ನೇ ಕೊಂದುಬಿಡುತ್ತಾರೆ.  ಅವಿಭಕ್ತ ಕುಟುಂಬಗಳಲ್ಲಿ ತಾಯಿ, ತಂದೆ ಇಬ್ಬರು ಕೆಲಸ ಒತ್ತಡದಲ್ಲಿ ಮಕ್ಕಳ ಬಗ್ಗೆ ಅಷ್ಟಾಗಿ ಗಮನ ಕೊಡುವುದಿಲ್ಲ ಅಲ್ಲದೆ ಒಂದು ಎರಡು ಮಕ್ಕಳು ಇರುವುದರಿಂದ ಅತಿಯಾದ ಮುದ್ದಿನಿಂದ ಸಾಕಿರುತ್ತಾರೆ.

      ಹೊಂದಾಣಿಕೆ ಪ್ರವೃತ್ತಿ ಮಕ್ಕಳಲ್ಲಿ ಕಡಿಮೆಯಾಗಿರುತ್ತದೆ ಬಯಸಿದ್ದು ಸಿಗದಿದ್ದಲ್ಲಿ ಬಹುಬೇಗ  ನಿರಾಶರಾಗುತ್ತಾರೆ. ಸಮಸ್ಯೆ ಗೆ ಉತ್ತರ ಕಂಡುಕೊಳ್ಳುವಲ್ಲಿ ವಿಫಲರಾಗಿ ಆತ್ಮಹತ್ಯೆ ಕೈ ಹಾಕುತ್ತಾರೆ ಎಂದು ಓದು ಉದ್ಯೋಗಕ್ಕಾಗಿ ಎಂಬಂತಾಗಿದೆ. ಆದ್ದರಿಂದ ಪೈಪೋಟಿ ಎದುರಿಸುವ ಗುರಿ ಮುಟ್ಟಲು ಪ್ರತಿಯೊಬ್ಬರಿಗೂ ಕಠಿಣ ಸಾಧನೆ ಅವಶ್ಯಕತೆ ಇಲ್ಲ ಈ ಕಾರಣಕ್ಕಾಗಿ ಫಲಿತಾಂಶ ಬಂದೊಡನೆ ಹೆಚ್ಚಿನ ವಿದ್ಯಾರ್ಥಿಗಳು ಇಂಥ ದಾರಿ ತುಳಿಯುತ್ತಾರೆ.

   ಸಹನೆ ತಾಳ್ಮೆಯ ಕೊರತೆ, ಪೋಷಕರು ತನ್ನಿಚೆಗೆ ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಪ್ರಶ್ನೆಗೆ ಉತ್ತರಿಸಿದಾಗ ಅಂಕಗಳನ್ನು ಕಡಿಮೆ ತೆಗೆದಾಗ, ಅನುಚಿತ ವರ್ತನೆ ತೋರಿದಾಗ ಶಿಕ್ಷಕರು ಗದರಿಸುವುದು ಇಲ್ಲವೇ ಸಣ್ಣ ,ಪುಟ್ಟ ಶಿಕ್ಷೆ ವಿಧಿಸಿದರು ಎಂಬ ಕಾರಣಕ್ಕೂ ಶಿಕ್ಷೆ ವಿಧಿಸಿದರೆ ಇಂಥ ಕಾರಣಗಳಿಗೆಲ್ಲ ಆತ್ಮಹತ್ಯೆಗೆ ಮುಂದಾಗುವಂತಹ ಪ್ರೇರಪಿಸುವ ದುರ್ಬಲ ಮನಸಿಗೆ ಕಾರಣವಾದರೂ ಏನೋ? ಶಿಶುವಾಗಿದ್ದನಿಂದಲೂ ತಾಯಿ, ತಂದೆ ಮಕ್ಕಳಿಗೆ ಸೋಲುವುದನ್ನು ಕಲಿಸದಿರುವುದು, ಮುಂದೊಂದು ದಿನ ಸೋಲನ್ನೇ ದುರಿಸಲು ಬಂದಾಗ ಧೃತಿಗೆಡಿಸುತ್ತದೆ.  

      ಆಗ ಸೋಲನ್ನು ಸುಲಭವಾಗಿ ಸ್ವೀಕರಿಸುವಂತೆ ರೂಪುಗೊಳ್ಳುವ ಮನಸ್ಸು ಮುಂದೆ ಸೋಲನ್ನು ಸಹಿಸದೆ ಸಾವನ್ನು ಸ್ವಾಗತಿಸುತ್ತದೆ. ಇಂದು ಮಾಡುತ್ತಿರುವ ಮತ್ತೊಂದು ತಪ್ಪು ಎಂದರೆ ದೊಡ್ಡ ,ದೊಡ್ಡ ಹುದ್ದೆಗಳನ್ನೇ ಹೊಂದಿರಬೇಕು, ಸಣ್ಣ ವೃತ್ತಿಗಳು ಗೌರವಕ್ಕೆ ಕುಂದೆಂಬ ಭಾವನೆ ಇರುತ್ತದೆ. ಪಾಲಿಗೆ ಬಂದದ್ದನ್ನು ಸ್ವೀಕರಿಸಿ ಬದುಕುವ ಛಲ ಇರುವುದಿಲ್ಲ. ಇವರು ತಟ್ಟಿದ ಬಾಗಿಲು ಮುಚ್ಚಿದಲ್ಲಿ ಮತ್ತೊಂದು ಬಾಗಿಲು ತೆರೆಯಲು ಪ್ರಯತ್ನಿಸುತ್ತದೆ ನಕರಾತ್ಮಕ ಭಾವನೆ ತುಳಿಯುತ್ತಾರೆ.

    ಪೋಷಕರು ಮಕ್ಕಳಿಗೆ ಐಷಾರಾಮಿ ಜೀವನ  ಒಗಿಸುತ್ತಾರೆ.ಹೆಚ್ಚಿನ ಜೀವನ ಆಡಂಬರದಲ್ಲಿ ಕಳೆಯುವುದರಿಂದ ವಿಲಾಸಗಳಿಗೆ ಮನಸ್ಸುತು ಮನಸ್ಸು ವ್ಯಾ ವ್ಯಾಘ್ರ ವಾಗುತ್ತದೆ ಹೊರತು ಶಾಂತಿ ಸಮಾಧಾನಗಳು ಇಲ್ಲವಾಗುತ್ತದೆ. ಚಿಕ್ಕ ಪುಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ತಾಳ್ಮೆಯು ಇಲ್ಲವಾಗುತ್ತದೆ. ಶಿಕ್ಷಣ ಆದರ್ಶ ಜೀವನಕ್ಕೆ ದಾರಿಯ ಹೊರತು ಹೇಡಿಗಳನ್ನು ಹುಟ್ಟು ಹಾಕುವುದಿಲ್ಲ. ತಾಯಿ ತಂದೆಯವರು ತಮ್ಮ ಮಕ್ಕಳಿಗೆ ಮೊದಲು ಬದುಕುವ ರೀತಿಯಲ್ಲಿ ಕಲಿಸಿಕೊಡಬೇಕು  ಪಾಲಾಯನವಲ್ಲ. ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಜ್ಞಾವಂತ ಸಮಾಜವನ್ನೇ ಬದುಕಿನ ಅವನತಿಗೆ ಹಿಡಿದ ಕನ್ನಡಿ.

    ವಿದ್ಯಾರ್ಥಿಗಳನ್ನು ಕೇವಲ ಬೌದ್ಧಿಕವಾಗಿ ಸಬಲರನ್ನಾಗಿಸಿದರೆ ಸಾಲದು, ಅವರನ್ನು ಮಾನಸಿಕವಾಗಿ ಸದೃಢರಾಗಿಸಬೇಕು. ಶಾಲೆಗಳಲ್ಲೂ ಪಠ್ಯ ವಸ್ತುಗಳನ್ನು ಪೂರ್ಣ ಮಾಡುವುದಕ್ಕೆ ಕೊಟ್ಟಷ್ಟೇ ಗಮನವನ್ನು ಜೀವನ ಮೌಲ್ಯಗಳ ಶಿಕ್ಷಣದ ಕಡೆಗೂ ಕೊಡುವಂತಾಗಬೇಕು. ಒಂದು ಶಾಲೆ ಮಟ್ಟವನ್ನು ಕೇವಲ ಮಕ್ಕಳ ಭೌತಿಕ ಸಾಧನೆಯನ್ನು ಅಳೆದು ನಿರ್ಧರಿಸುವ ಪರಿಪಾಠ ಬದಲಾಗಬೇಕು.

    ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳ ದಿನಗಳಲ್ಲಿ ಕೆಲ ನಿಮಿಷವಾದರೂ ಯೋಗ, ಧ್ಯಾನ,ಪ್ರಾರ್ಥನೆ ಮುಂತಾದವಗಳಲ್ಲಿ ಕಳೆಯುವಂತೆ ಪ್ರೇರಪಿಸಬೇಕು. ಅವರೆದುರು ನೂರಾರು ದಾರಿಗಳು ತೆರೆದಿದ್ದು ಉದಾತ್ತ ಜೀವನ ಬೆಳಕನ್ನು ತೋರಿಸಿಕೊಟ್ಟಲ್ಲಿ ಅವರ ಜೀವನ ಮಾರ್ಗ ಅನಂತವಾಗುತ್ತದೆ. ಸುಖ ದುಃಖ ಸೋಲು ಗೆಲುವು ಗಳೆಲ್ಲಾನೂ ಸಮಾನವಾಗಿ ಸ್ವೀಕರಿಸಿ ಪರಿಪೂರ್ಣ ಜೀವನ ಸವಿದು ದಾರಿದೀಪಗಳಾ ಬೇಕಾಗಿದೆ. ಅವರಿವರೆಗೆ ಹೇಳುವ ಪೋಷಕರ ಮೊದಲು ತಮ್ಮ ಮನೆಯಲ್ಲಿ ಬದಲಾವಣೆ ಮಾಡಿಕೊಂಡರೆ ಒಳ್ಳೆಯದು.
ಲೇಖನ: ಜಿ.ಎಂ.ರಾಜಶೇಖರ್, ಚಿಕ್ಕಮಗಳೂರು. 94483 64949.

 

Share This Article
error: Content is protected !!
";